ಕಾಸರಗೋಡು: ದೇಶದಲ್ಲೇ ಅತಿದೊಡ್ಡ ಆರ್ಥಿಕ ಬಿಕ್ಕಟ್ಟು ಎದುರಿಸುವ ನಿಟ್ಟಿನಲ್ಲಿ ಪ್ಯಾಕೇಜ್ ಒಂದನ್ನು ರಾಜ್ಯದಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಹಣಕಾಸು ಸಚಿವ ಥಾಮಸ್ ಐಸಾಕ್ ತಿಳಿಸಿದ್ದಾರೆ. ಕಾಸರಗೋಡಿನ ನುಳ್ಳಿಪ್ಪಾಡಿಯಲ್ಲಿ ನಡೆದ ರಾಜ್ಯ ಸರ್ಕಾರದ ಕಿಫ್ ಬಿ ಪ್ರದರ್ಶನದ ವೇಳೆ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಆರ್ಥಿಕ ಮುಗಟ್ಟು ದೇಶವನ್ನು ಕಂಗೆಡಿಸುತ್ತಿದ್ದರೆ, ಕೇರಳದಲ್ಲಿ ಮಾದರಿ ರೂಪದ ಪ್ಯಾಕೇಜ್ ಜಾರಿಯಾಗುತ್ತಿದೆ. ದೇಶದ ರಾಜ್ಯಗಳ ಹಣಕಾಸು ಸಂಸ್ಥೆಗಳಲ್ಲಿ ಬಿ.ಬಿ.ರೇಟಿಂಗ್ ಇರುವ ಏಕೈಕ ಸಂಸ್ಥೆ ರಾಜ್ಯದ ಕಿಫ್ ಬಿ ಆಗಿದ್ದು, ವಿವಿಧ ಅಭಿವೃದ್ಧಿ ಯೋಜನೆಗಳಿಗಾಗಿ ಸಂಗ್ರಹಿಸುತ್ತಿರುವ 50 ಸಾವಿರ ಕೋಟಿ ರೂ. ಮತ್ತು ಅದರ ಬಡ್ಡಿ ಹದಿನೈದು ವರ್ಷಗಳಲ್ಲಿ ಮರುಪಾವತಿ ನಡೆಸಲು ಸಾಧ್ಯವಾಗಲಿದೆ ಎಂದವರು ತಿಳಿಸಿದರು.
ಇದೇ ವೇಳೆ ಕಿಫ್ ಬಿ ಮುಂದಿನ ವರ್ಷ 20 ಸಾವಿರ ಕೋಟಿ ರೂ.ನ ಅಭಿವೃದ್ಧಿ ಯೋಜನೆಗಳನ್ನು ರಾಜ್ಯದಲ್ಲಿ ಜಾರಿಗೊಳಿಸಲಿದೆ.
ಕಾಸರಗೋಡು ಮತ್ತು ಕಣ್ಣೂರು ಜಿಲ್ಲೆಗಳಲ್ಲಿ 5 ಸಾವಿರ ಎಕ್ರೆ ಜಾಗ ವಹಿಸಿಕೊಂಡು ಉದ್ಯಮ ಪಾರ್ಕ್ ನಿರ್ಮಿಸುವ ಕ್ರಮ ಕೈಗೊಳ್ಳಲಾಗುತ್ತಿದೆ. ಇದು ಅನುಷ್ಟಾನಗೊಳ್ಳುವ ಮೂಲಕ ಮಲಬಾರ್ ಪ್ರದೇಶದ ಆರ್ಥಿಕ ಮುಗ್ಗಟ್ಟು ಪರಿಹಾರಗೊಳ್ಳಲಿದೆ. ಅಳಿಕೋಡ್ ಪಾರ್ಕ್, ಕಣ್ಣೂರು ಏರ್ ಪೆÇೀರ್ಟ್‍ಗಳ ಜತೆಗೆ ಹೈಸ್ಪೀಡ್ ರೈಲ್ವೇ, ಜಲಸಾರಿಗೆ, ವಿದ್ಯುತ್ ಟ್ರಾನ್ಸ್ ಗ್ರೀಡ್ ಇತ್ಯಾದಿ ವಲಯಗಳ ಮುಖಚರ್ಯೆ ಬದಲಾಗಲಿದೆ. ಮಲಬಾರ್ ಪ್ರದೇಶಗಳು ಕೇರಳದ ಉದ್ಯಮ ಅಭಿವೃದ್ಧಿಗೆ ಕೇಂದ್ರಗಳಾಗಲಿವೆ ಎಂದು ಅವರು ತಿಳಿಸಿದರು. ರಾಜ್ಯದ ಮುಂಗಡಪತ್ರಕ್ಕೆ ಕಿಫ್ ಬಿ ಪರ್ಯಾಯ ವ್ಯವಸ್ಥೆಯಲ್ಲ ಎಂದು ಹಣಕಾಸು ಸಚಿವ ಥಾಮಸ್ ಐಸಕ್ ಸ್ಪಷ್ಟಪಡಿಸಿದರು.