ಪೆರ್ಲ:ನೀರಿನ ಸುಸ್ಥಿರತೆಯ, ಕಟ್ಟ ಕೇಂದ್ರಿತ ಪಾರಂಪರಿಕ ಕಾಯಕಕ್ಕೆ ಶಕ್ತಿ ಒದಗಿಸುವ ಸದಾಶಯದೊಂದಿಗೆ ಕುಂಬ್ಡಾಜೆ ಗ್ರಾಮ ಸೇವಾ ಗಂಥಾಲಯ ಆಶ್ರಯದಲ್ಲಿ 'ಕಟ್ಟ ಕಟ್ಟುವ ಹಬ್ಬ' ಉದ್ಘಾಟನೆಗೊಂಡ ಪಡ್ರೆಯ ಸಜಂಗದ್ದೆ ಪಡ್ಪು ಪರಿಸರದಲ್ಲಿ ಗುರುವಾರ ಸಂಜೆ ನಡೆದ 'ಕಟ್ಟಗಳೆಡೆಗೆ ನಮ್ಮ ನಡಿಗೆ' ಕಾರ್ಯಕ್ರಮದಲ್ಲಿ ಪಡ್ರೆಯ ಬೃಹತ್ ಜಲಾಂದೋಲನ ಚಟುವಟಿಕೆಗೆ ಕಾರಣರಾದ 'ನೀರ ನೆಮ್ಮದಿಯತ್ತ ಪಡ್ರೆ' ಜಲಯೋಧರ ಪಡೆಗೆ ಗೌರವ ಸ್ಮರಣಿಕೆ ನೀಡಲಾಯಿತು.
ಗ್ರಂಥಾಲಯ ಉಪಾಧ್ಯಕ್ಷ ವೈ.ಕೆ.ಗಣಪತಿ ಭಟ್, 'ನೀ.ನೆ.ಪ' ಅಧ್ಯಕ್ಷ ಶ್ರೀಹರಿ ಭಟ್ ಸಜಂಗದ್ದೆ ಅವರಿಗೆ ಸ್ಮರಣಿಕೆ ಹಸ್ತಾಂತರಿಸಿದರು. ಜಲತಜ್ಞ ಶ್ರೀಪಡ್ರೆ, ನೀ.ನೆ.ಪ.ಕಾರ್ಯದರ್ಶಿ ಸುಬ್ರಹ್ಮಣ್ಯ ಭಟ್ ಕೆ.ವೈ., ಸುಧಾರಿತ ಕಟ್ಟದ ಪಾಲುದಾರ ಕೃಷಿಕರಾದ ಡಾ.ವೇಣು ಕಳೆಯತ್ತೋಡಿ ಮತ್ತು ಕೇಶವ ಶರ್ಮ ಕೋರಿಕ್ಕಾರು, ಕಟ್ಟಗಳ ತಜ್ಞ ಜಗದೀಶ್ಚಂದ್ರ ಕುತ್ತಾಜೆ, ಗ್ರಂಥಾಲಯ ಜೊತೆ ಕಾರ್ಯದರ್ಶಿ ಅಬ್ದುಲ್ ರಹಿಮಾನ್ ಎನ್., ವೈ.ವಿ.ಸುಬ್ರಹ್ಮಣ್ಯ ಭಟ್, ಸಾಮಾಜಿಕ ಕಾರ್ಯಕರ್ತ ಚಂದ್ರಶೇಖರ ಏತಡ್ಕ ಮತ್ತಿತರರು ಉಪಸ್ಥಿತರಿದ್ದರು.