ಪೆರ್ಲ:ನೆಲ್ಲಿಕುಂಜೆ ಶ್ರೀವಿಷ್ಣುಮೂರ್ತಿ ದೇವಳದಲ್ಲಿ ವೇದಮೂರ್ತಿ ದೇಲಂಪಾಡಿ ಬಾಲಕೃಷ್ಣ ತಂತ್ರಿ ಹಾಗೂ ಗುರುವಾಯೂರು ಉಣ್ಣಿಕೃಷ್ಣನ್ ನಂಬೂದಿರಿ ಅವರ ಮಾರ್ಗದರ್ಶನದಲ್ಲಿ ಜೀರ್ಣೋದ್ಧಾರ ಕಾರ್ಯ ನಡೆಯುತ್ತಿದ್ದು ಗರ್ಭಗುಡಿ, ನಮಸ್ಕಾರ ಮಂಟಪಗಳಿಗೆ ತಾಮ್ರ ಹೊದೆಸುವ ಕೆಲಸ ಪೂರ್ಣವಾಯಿತು.
ಗುತ್ತು ಮಹೇಶ್ ಭಟ್ ನೇತೃತ್ವದಲ್ಲಿ ಶ್ರೀ ದೇವರು ಹಾಗೂ ವಿಶ್ವಕರ್ಮ ದೇವರ ಸಮೂಹಿಕ ಪ್ರಾರ್ಥನೆ ಸಲ್ಲಿಸಿ ಕೆಲಸ ಆರಂಭಿಸಲಾಯಿತು. ಪುತ್ತೂರು ಲಕ್ಷ್ಮಿ ಮೆಟಲ್ಸ್ ಸಂಸ್ಥೆಯ ನಾರಾಯಣ ಪೂಜಾರಿ ನೇತೃತ್ವದಲ್ಲಿ ಕೆಲಸ ನಿರ್ವಹಿಸಿದರು.