ತಿರುವನಂತಪುರ: ಭಾರತದಲ್ಲಿ ಮೊದಲ ಕೊರೊನಾ ವೈರಸ್ ಸೋಂಕು ತಗುಲಿರುವುದು ಪತ್ತೆಯಾಗಿದೆ.ಚೀನಾದ ವುಹಾನ್ ನಿಂದ ಕೇರಳಕ್ಕೆ ಹಿಂತಿರುಗಿರುವ ವಿದ್ಯಾರ್ಥಿಯಲ್ಲಿ ಕೊರೊನಾ ವೈರಸ್ ನಿನ್ನೆ ಪರೀಕ್ಷೆ ವೇಳೆ ದೃಢವಾಗಿದೆ.
ಆಸ್ಪತ್ರೆಯಲ್ಲಿ ವಿದ್ಯಾರ್ಥಿಯನ್ನು ಪ್ರತ್ಯೇಕ ವಾರ್ಡ್ ನಲ್ಲಿ ಇರಿಸಲಾಗಿದೆ. ಆತನ ಮೇಲೆ ತೀವ್ರ ನಿಗಾ ಇರಿಸಲಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. ಚೀನಾದಿಂದ ಕರ್ನಾಟಕ ಮತ್ತು ಕೇರಳದ ಹಲವು ವಿದ್ಯಾರ್ಥಿಗಳು ಹಿಂತಿರುಗುತ್ತಿದ್ದಾರೆ ಎಂದು ವರದಿಗಳು ಬರುತ್ತಿರುವ ಮಧ್ಯೆಯೇ ವೈರಸ್ ಸೋಂಕು ಪತ್ತೆಯಾಗಿದ್ದು ಜನರಲ್ಲಿ ಇನ್ನಷ್ಟು ಆತಂಕ ಹೆಚ್ಚಿಸಿದೆ.