HEALTH TIPS

ಕಾಸರಗೋಡಿನ ಮುಖ ಚರ್ಯೆಯನ್ನೇ ಬದಲಿಸಬಲ್ಲ ಬೃಹತ್ ಯೋಜನೆಗಳನ್ನು ಸಿದ್ಧಪಡಿಸುತ್ತಿರುವ ಕಿಫ್ ಬಿ


          ಕಾಸರಗೋಡು: ಜಿಲ್ಲೆಯ ಅಭಿವೃದ್ಧಿಗಾಗಿ ಕಾದಿರುವುದು ಭಾರೀ ಅಭಿವೃದ್ಧಿ ಯೋಜನೆಗಳು. ಕಾಸರಗೋಡಿನ ಮುಖಚರ್ಯೆಯನ್ನೇ ಬದಲಿಸಬಲ್ಲ ಬೃಹತ್ ಯೋಜನೆಗಳನ್ನು ಕಿಫ್ ಬಿ ಸಿದ್ಧಪಡಿಸುತ್ತಿದೆ.
         ಕಿಫ್ ಬಿಯಲ್ಲಿ ಅಳವಡಿಸುವಮೂಲಕ 58 ಬೃಹತ್ ಯೋಜನೆಗಳು ಜಿಲ್ಲೆಯಲ್ಲಿ ಅನುಷ್ಟಾನಗೊಳ್ಳಲಿವೆ. ಪರಿಶೀಲನೆಯಲ್ಲಿದ್ದ 11 ಯೋಜನೆಗಳೂ ಸೇರಿದಂತೆ, ಮುಂದೆ ಜಾರಿಗೊಳ್ಳವ ಸಾಧ್ಯತೆ ಇರುವವನ್ನೂ ಸೇರಿದರೆ ಈ ಯೋಜನೆಗಳ ಸಂಖ್ಯೆ 69 ಆಗಲಿದೆ.
       ಶಿಕ್ಷಣ ಸಂಸ್ಥೇಗಳು, ಮಲೆನಾಡ ಹೆದ್ದಾರಿ, ಕರಾವಳಿ ರಸ್ತೆ ಸೇರಿದಂತೆ ಅನೇಕ ಯೋಜನೆಗಳಿವೆ. ಈಗಾಗಲೇ ಅಂಗೀಕಾರ ಲಭಿಸಿದವೂ, ಪರಿಶೀಲನೆಯಲ್ಲಿ ಇರುವುವೂ ಆಗಿರುವ 2164.232 ಕೋಟಿ ರೂ.ನ ಯೋಜನೆಗಳು ಗಡಿನಾಡಿನ ಸ್ವರೂಪವನ್ನೇ ಬದಲಿಸಲಿವೆ ಎಂದು ನಿರೀಕ್ಷಿಸಲಾಗುತ್ತಿದೆ.
ಕಾಸರಗೋಡು ವಿಧಾನಸಭೆ ಕ್ಷೇತ್ರದಲ್ಲಿ ಕಿಫ್ ಬಿ ಅಂಗೀಕರಿಸಿದ 328.83 ಕೋಟಿ ರೂ. ನ 9 ಯೋಜನೆಗಳು ಕಾಮಗಾರಿ ಪೂರ್ಥಿಗೊಳಿಸಿವೆ. 32,37 ಕೋಟಿ ರೂ. ನ 2 ಯೋಜನೆಗಳು ಈ ಕ್ಷೇತ್ರದಲ್ಲಿ ಕಿಫ್ ಬಿಯ ಪರಿಶೀಲನೆಯಲ್ಲಿದೆ. ತಳಂಗರೆ ಸರಕಾರಿ ಮುಸ್ಲಿಂ ವಿ.ಎಚ್.ಎಸ್.ಎಸ್., ಚೆರ್ಕಳ ಸೆಂಟ್ರಲ್ ಜಿ.ಎಚ್.ಎಸ್.ಎಸ್., ಮೊಗ್ರಾಲ್ ಪುತ್ತೂರು ಜಿ.ಎಚ್.ಎಸ್.ಎಸ್., ಸರಕಾರಿ ಹೈಯರ್ ಸೆಕೆಂಡರಿ ಶಾಲೆ  ಎಂಬ 4 ಶಾಲೆಗಳ ನವೀಕರಣ ನಡೆಯುತ್ತಿದೆ. ಉನ್ನತ ಶಿಕ್ಷಣ ವಲಯದಲ್ಲಿ ಕಾಸರಗೋಡು ಸರಕಾರಿ ಕಾಲೇಜಿಗೆ 9.31 ಕೋಟಿ ರೂ. ಕಿಫ್ ಬಿ ಮಂಜೂರು ಮಾಡಿದೆ. ಕಲ್ಲ್ಕ-ಚೆರ್ಕಳ ರಸ್ತೆಯ ಕಾಮಗಾರಿ ರಂಭಗೊಂಡಿದೆ. ಬದಿಯಡ್ಕ-ಏತಡ್ಕ-ಸುಳ್ಯಪದವು ರಸ್ತೆ ಟೆಂಡರ್ ಘಟ್ಟದಲ್ಲಿ, ನೆಕ್ರಂಬಾರೆ-ಆರ್ಲಡ್ಕ-ಪುಂಡೂರು-ನಾರಂಪಾಡಿ-ಏತಡ್ಕ ರಸ್ತೆ ಕಿಫ್ ಬಿಯ ಪರಿಶೀಲನೆಯಲ್ಲಿದೆ. ಕಾಸರಗೋಡು ನಗರಸಭೆ-ಚೆಂಗಳ ಗ್ರಾಮಪಂಚಾಯತ್ ಕುಡಿಯುವನೀರಿನ ಯೋಜನೆಯ ಕಾಮಗಾರಿ ಆರಂಭಗೊಂಡಿದೆ.
         ಮಂಜೇಶ್ವರ ವಿಧಾನಸಭೆ ಕ್ಷೇತ್ರದಲ್ಲಿ 208.76 ಕೋಟಿ ರೂ. ನ 8 ಯೋಜನೆಗಳು ನಡೆಯುತ್ತಿವೆ. ಮೊಗ್ರಾಲ್ ಸರಕಾರಿ ಎಚ್.ಎಸ್.ಎಸ್.ಕುಂಬಳೆ ಜಿ.ಎಚ್.ಎಸ್.ಎಸ್., ಬಂಗ್ರ ಮಂಜೇಶ್ವರ ಜಿ.ಎಚ್.ಎಸ್.ಎಸ್. ಎಂಬ 3 ಶಾಲೆಗಳಿಗೆ ಕಿಫ್ ಬಿ ನಿಧಿ ಮಂಜೂರು ಮಾಡಿದೆ. ಉನ್ನತ ಶಿಕ್ಷಣ ವಲಯದಲ್ಲಿ ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸರಕಾರಿ ಕಾಲೇಜಿಗೆ 7.42 ಕೋಟಿ ರೂ. ಮಂಜೂರು ಮಾಡಲಾಗಿದೆ. ಮಂಜೇಶ್ವರ ಹಾರ್ಬರ್ ಗೆ 13.47 ಕೋಟಿ ರೂ.ನ ಕಾಮಗಾರಿನಡೆಯುತ್ತಿದೆ. ನಂದರ ಪದವು-ಚೇವಾರು ರಸ್ತೆಯ ಕಾಮಗಾರಿ 54.76 ಕೋಟಿ ರೂ.ನಲ್ಲಿ ಆರಂಭಗೊಂಡಿದೆ. ಹೊಂಸಂಗಡಿ ಮೇಲ್ಸೇತುವೆಗಾಗಿ ಕಿಫ್ ಬಿ ನಿಧಿಮಂಜೂರು ಮಾಡಿದೆ. ಮಂಜೇಶ್ವರ ತಾಲೂಕು ಆಸ್ಪತ್ರೆ ನವೀಕರಣವನ್ನು ಕಿಫ್ ಬಿ ಯಲ್ಲಿ ಅಳವಡಿಸಬೇಕು ಎಂಬ ಮಂಜೇಶ್ವರ ಶಾಸಕರ ಬೇಡಿಕೆ ಪರಿಶೀಲನೆಯಲ್ಲಿದೆ.
ಉದುಮಾ ವಿಧಾನಸಭೆ ಕ್ಷೇತ್ರದಲ್ಲಿ 425.83 ಕೋಟಿ ರೂ. ವೆಚ್ಚದಲ್ಲಿ 15 ಯೋಜನೆಗಳು ಪ್ರಗತಿಯಲ್ಲಿವೆ. 10.10 ಕೋಟಿ ರೂ. ನ 2 ಯೋಜನೆಗಳು ಕಿಫ್ ಬಿಯ ಪರಿಶೀಲನೆಯಲ್ಲಿದೆ. ಪೆರಿಯ ಜಿ.ಎಚ್.ಎಸ್.ಎಸ್., ಬಂದಡ್ಕ ಜಿ.ಎಚ್.ಎಸ್.ಎಸ್., ಅಗಸರ ಹೊಳೆ ಜಿ.ಯು.ಪಿ. ಸಾಲೆ, ಕೀಯೂರು ಜಿ.ಎಫ್.ಪಿ.ಎಸ್, ಪಳ್ಳಿಕ್ಕರೆ ಸರಕಾರಿ ಮಾದರಿ ಯು.ಪಿ.ಶಾಲೆ, ಅಡೂರು ಜಿ.ಎಚ್.ಎಸ್.ಎಸ್. ಎಂಬ 6 ಶಾಲೆಗಳ ನವೀಕರಣವನ್ನು ಕಿಫ್ ಬಿ ವಹಿಸಿಕೊಮಡಿದೆ. ಉದುಮಾ ಸರಕಾರಿ ಕಾಲೇಜಿಗೆ 7.84 ಕೋಟಿ ರೂ.ನ ಯೋಜನೆ ಗೆ ಕಿಫ್ ಬಿ ಮಂಜೂರಾತಿ ನೀಡಿದೆ. ಕೋಟಿಕುಳಂ ಜಿ.ಯು.ಪಿ.ಎಸ್, ರಾಮಚಂದ್ರರಾವ್ ಸ್ಮಾರಕ ಸರಕಾರಿ ಯು.ಪಿ.ಶಾಲೆ ಕೀಕಾನ, ಪಾಕಂ ಜಿ.ಎಚ್.ಎಸ್.ಎಸ್. , ಉದುಮಾ ಜಿ.ಎಚ್.ಎಸ್.ಎಸ್., ಕುಂಡಂಕುಳಿ ಜಿ.ಎಚ್.ಎಸ್.ಎಸ್.  ಶಾಲೆಗಳನವೀಕರಣ ಚಟುವಟಿಕೆಗಳು ಕಿಫ್ ಬಿಯ ಪರಿಸೀಲನೆಯಲ್ಲಿದೆ. ನೂರು ಹೆಣ್ಣುಮಕ್ಕಳ ವಸತಿ ಸೌಲಭ್ಯ ಸಹಿತದ ಬೇಡಡ್ಕ ಪ್ರೀಮೆಟ್ರಿಕ್ ಹಾಸ್ಟೆಲ್ , ಕುತ್ತಿಕೋಲ್ ಪ್ರೀಮೆಟ್ರಿಕ್ ಹಾಸ್ಟೆಲ್ ನಿರ್ಮಾಣಗಳು ನಡೆಯುತ್ತಿವೆ. ಕೋಟಿಕುಳಂ ರೈಲ್ವೇ ಮೇಲ್ಸೇತುವೆ ಕಮಗಾರಿಗೆ ಕಿಫ್ ಬಿ ನಿಧಿ ಮೀಸಲಿರಿಸಿದೆ. ತೆಕ್ಕಿಲ್-ಆಲೆಟ್ಟಿ ರಸ್ತೆ ಕಾಮಗಾರಿಗೆ ತಡೆ ಸಂಬಮಧ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಭೆ ಶೀಘ್ರದಲ್ಲಿ ನಡೆಯಲಿದೆ. ಬೋವಿಕ್ಕಾನ-ಕಾನತ್ತೂರು-ಎರಿಂuಟಿಜeಜಿiಟಿeಜಪ್ಪುಳ ರಸ್ತೆ ನವೀಕರಣಕ್ಕೆ 54.20 ಕೋಟಿ ರೂ. ಮಂಜೂರು ಮಾಡಿದೆ. ಉದುಮಾ ರ್ಯಲ್ವೇ ಓವರ್ ಬ್ರಿಜ್  ಯೋಜನೆಗೆ ನಿಧಿ ಮಂಜೂರಾಗಿದೆ. ಉದುಮಾ ಸಬ್ ರೆಜಿಸ್ತ್ರಾರ್ ಕಚೇರಿ ನಿರ್ಮಾಣ ಆರಂಭಗೊಂಡಿದೆ.
         ಕಾಞಂಗಾಡು ವಿಧಾನಸಭೆ ಕ್ಷೇತ್ರದಲ್ಲಿ ಅಂಗೀಕಾರ ಲಭಿಸಿರುವ 14 ಯೋಜನೆಗಳು, ಪರಿಶೀಲನೆಯಲ್ಲಿರುವ 3 ಯೋಜನೆಗಳು ಇವೆ. 660.93 ಕೋಟಿ ರೂ. ಚಟುವಟಿಕೆಗಳನ್ನು ಕಿಫ್ ಬಿ ಯಲ್ಲಿ ಅಳವಡಿಸಿ ಇಲ್ಲಿ ನಡೆಸಲಾಗುತ್ತಿದೆ. 130.70 ಕೋಟಿ ರೂ. ಪರಿಶೀಲನೆಯಲ್ಲಿರುವ ಯೋಜನೆಗಳಿಗೆ ಅಂದಾಜು ವೆಚ್ಚವಾಗಿದೆ. ಸಾರ್ವಜನಿಕ ಶಿಕ್ಷಣ ವಲಯದಲ್ಲಿ ವೆಳ್ಳಿಕೋತ್ ಎಂ.ಪಿ.ಎಸ್.ಜಿ.ವಿ.ಎಚ್.ಎಸ್.ಎಸ್, ಚಾಯೋತ್ ಜಿ.ಎಚ್.ಎಸ್.ಎಸ್., ಬಳಾಂತೋಡು ಜಿ.ಎಚ್.ಎಸ್.ಎಸ್. ಕಾಞಂಗಾಡ್ ಜಿ.ವಿ.ಎಚ್.ಎಸ್.ಎಸ್., ಮಾಲೋತ್ ಕಸಬ ಜಿ.ವಿ.ಎಚ್.ಎಸ್.ಎಸ್. ಎಂಬ 5 ಶಾಲೆಗಳ ನವೀಕರಣ ಕಿಫ್ ಬಿ ನಿಧಿಯೊಂದಿಗೆ ನಡೆಯಲಿದೆ. ಜೊತೆಗೆ ವೆಳ್ಳಚ್ಚಾಲ್ ಪರಿಶಿಷ್ಟ ಜಾತಿ-ಪಂಗಡ ವಿದ್ಯಾರ್ಥಿಗಳಿಗಾಗಿ ಹಾಸ್ಟೆಲ್ ಕಟ್ಟಡ ನಿರ್ಮಿಸಲಾಗುತ್ತಿದೆ. ಕಾಞಂಗಾಡ್ ವಿಧಾನಸಭೆ ಕ್ಷೇತ್ರದಲ್ಲಿ ಸುಬ್ರಹ್ಮಣ್ಯನ್ ತಿರುಮುಂಬ್ ಸ್ಮಾರಕ ಸಾಂಸ್ಕøತಿಕ ಸಂಕೀರ್ಣ ಕ್ಕೆ ಟೆಂಡರ್ ನೀಡಲಾಗಿದೆ. ಮಲೆನಾಡ ಹೆದ್ದಾರಿ ಅಂಗವಾಗಿ ಕೋಳಿಚ್ಚಾಲ್-ಚೆರುಪುಳ ರಸ್ತೆ, ಕೋಳಿಚ್ಚಾಲ್-ಎಡಪ್ಪರಂಬ ರಸ್ತೆ ಕಾಮಗಾರಿ ಆರಂಭಗೊಂಡಿದೆ. ಕಾಂuಟಿಜeಜಿiಟಿeಜರೋಡ್ ನಿಂದ ಮೈಲಾಟ್ಟಿ ವರೆಗೆ ಜಾರಿಗೊಳಿಸುವ ವಿದ್ಯುತ್ ಯೋಜನೆ ಕೋಲತ್ ನಾಡ್ ಲೈನ್ ಪ್ಯಾಕೇಜ್ ಕಾಮಗಾರಿ ಆರಂಭಗೊಂಡಿದೆ. ವೆಳ್ಲರಿಕುಂಡ್ ಮಿನಿ ಸಿವಿಲ್ ಸ್ಟೇಷನ್ ಕಾಮಗಾರಿ ಪ್ರಗತಿಯಲ್ಲಿದೆ.ಹೊಸದುರ್ಗ-ಪಾಣತ್ತೂರು ರಸ್ತೆ, ರಾಕೂರ್-ಎಣ್ಣಪ್ಪಾರ ರಸ್ತೆ ಕಿಫ್ ಬಿಯ ಪರಿಶೀಲನೆಯಲ್ಲಿದೆ.
         ತ್ರಿಕರಿಪುರ ವಿಧಾನಸಭೆ ಕ್ಷೇತ್ರದಲ್ಲಿ 888.9 ಕೋಟಿ ರೂ. ನ 18 ಯೋಜನೆಗಳಿಗೆ ಕಿಫ್ಬಿ ನೇತೃತ್ವದಲ್ಲಿ ನಡೆಸಲಾಗುವುದು. 57.21 ಕೋಟಿ ರೂ.ನ 2 ಯೋಜನೆಗಳು ಕಿಫ್ ಬಿಯ ಪರಿಶೀಲನೆಯಲ್ಲಿದೆ.
      ಜಿಲ್ಲೆಯ ವಿವಿಧ ಭಾಗಗಳ್ಲಿ ಕಿಫ್ಬಿಯ ನೇತೃತ್ವದಲ್ಲಿ ನಾಡಿನ ಕನಸಿನ ಯೋಜನೆಗಳು ಜಾರಿಗೊಳ್ಳುತ್ತವೆ. ಕಾಮಗಾರಿ ನಡೆಯುತ್ತಿರುವವೂ, ಮುಂದೆ ಆರಂಭಗೊಳ್ಳಬೇಕಾದುವೂ ಆದ ಅನೇಕ ಯೋಜನೆಗಳು ಈ ಸಾಲಿನಲ್ಲಿವೆ. ಅತ್ಯಾಧುನಿಕ ತಂತ್ರಜ್ಞಾನಬಳಸಿ ನಿರ್ಮಾಣಕಾಮಗಾರಿ ನಡೆಸಲಾಗುತ್ತಿದೆ. ಇದಕ್ಕೆ ಬೇಕಾದ ಪ್ರಯೋಗಾಲಯ ಸಹಿತ ಸೌಲಭ್ಯಗಳು ಕಿಫ್ ಬಿ ಬಳಿಯಿದೆ. ಈ ಸಂಬಂಧ ಅವಲೋಕನ ನಡೆಸುವ ನಿಟ್ಟಿನಲ್ಲಿ ಕಿಫ್ಬಿ ಸಿಬ್ಬಂದಿ ಫೆ.3ರಿಂದ ಜಿಲ್ಲೆಯಲ್ಲಿರುವರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries