ಕುಂಬಳೆ: ಬುಧವಾರ ಜ.1 ರಿಂದ ರಾಜ್ಯಾದ್ಯಂತ ಅಧಿಕೃತವಾಗಿ ಪ್ಲಾಸ್ಟಿಕ್ ಮುಕ್ತ ವಲಯವಾಗಿ ಗುರುತಿಸಲು ಸರ್ಕಾರವು ನೀಡಿದ್ದ ಆದೇಶದನ್ವಯ ವಿವಿಧೆಡೆ ಜಾಗೃತಿ ಕಾರ್ಯಕ್ರಮಗಳು ನಡೆದವು.
ಸೀತಾಂಗೋಳಿಯ ಮೇಜರ್ ಸಂದೀಪ್ ನಗರದ ಸಂತೋಷ್ ಆಟ್ರ್ಸ್-ಸ್ಪೋಟ್ರ್ಸ ಕ್ಲಬ್ ಎಲ್ಲರಿಗಿಂತ ಒಂದುಹೆಜ್ಜೆ ಮುಂದಿಟ್ಟಿದ್ದು, ಬುಧವಾರ ಬೆಳಿಗ್ಗೆಯಿಂದಲೇ ಸಿತಾಂಗೋಳಿ ಪರಿಸರದಲ್ಲಿ ವಿವಿಧೆಡೆಗಳಿಂದ ಆಗಮಿಸುವ ಸಾರ್ವಜನಿಕರಿಗೆ ಬಟ್ಟೆ ಚೀಲಗಳನ್ನು ವಿತರಿಸುವ ಮೂಲಕ ಗಮನ ಸೆಳೆದರು. ಜೊತೆಗೆ ಸಿಹಿತಿಂಡಿಯನ್ನೂ ಹಂಚಿ ಜಾಗೃತಿಗೆ ರುಚಿಭರಿಸಿ ಗಮನ ಸೆಳೆದರು. ಈ ಸಂದರ್ಭ ಸಾರ್ವಜನಿಕರ ಬಳಿಯಿದ್ದ ಪ್ಲಾಸ್ಟಿಕ್ ಚೀಲಗಳನ್ನು ನಯದಿಂದ ಹಿಂಪಡೆದು ಬಟ್ಟೆಚೀಲ ನೀಡಿ, ಸಿಹಿ ವಿತರಿಸಿ ಮುಂದಿನ ದಿನಗಳಲ್ಲಿ ನಿತ್ಯ ಬಳಕೆಗೆ ಪ್ರಕೃತಿ ಸ್ನೇಹಿ ಚೀಲಗಳನ್ನು ಬಳಸುವಂತೆ ಯುವಕರ ತಂಡ ಮನವರಿಕೆ ಮಾಡಿದರು.
ಸಂತೋಷ್ ಆಟ್ರ್ಸ್-ಸ್ಪೋಟ್ರ್ಸ್ ಕ್ಲಬ್ ಅಧ್ಯಕ್ಷ ನ್ಯಾಯವಾದಿ ಥೋಮಸ್ ಡಿಸೋಜ, ಸದಸ್ಯರುಗಳಾದ ಪೃಥ್ವಿ, ಸಜಿ, ಧನು, ಮೋಹನ್, ಕಿರಣ್, ಪ್ರಶಾಂತ್, ಸ್ವಾತಿರಾಜ್, ರಾಜೇಶ್, ಪವನ್, ನಿರಂಜನ್, ಅರುಣ್ ಮೊದಲಾದವರು ನೇತೃತ್ವ ನೀಡಿದ್ದರು.