ಬದಿಯಡ್ಕ: ಇಲ್ಲಿನ ಶ್ರೀ ಅಯ್ಯಪ್ಪ ಮಂದಿರ ನಿರ್ಮಾಣ ಸಮಿತಿಯ ನೇತೃತ್ವದಲ್ಲಿ ಶಬರಿಮಲೆ ಶ್ರೀ ಅಯ್ಯಪ್ಪ ಕ್ಷೇತ್ರಕ್ಕೆ ತೀರ್ಥಾಟನೆ ಕೈಗೊಳ್ಳುವ ಸಲುವಾಗಿ ಅಯ್ಯಪ್ಪ ಭಕ್ತರು ಮುದ್ರಾಧಾರಣೆ ಮಾಡಿ 41 ದಿನದ ಕಠಿಣ ವ್ರತಾಚಾರಣೆಯನ್ನು ಕೈಗೊಳ್ಳುವುದಕ್ಕಾಗಿ ಹಾಗೂ ದೈನಂದಿನ ಪ್ರಾರ್ಥನೆಗೆ ಬದಿಯಡ್ಕದಲ್ಲಿ ವ್ಯವಸ್ಥೆಗಳಿಲ್ಲದಿರುವುದನ್ನು ಮನಗಂಡು ಸುಸಜ್ಜಿತ ಶ್ರೀ ಅಯ್ಯಪ್ಪ ಮಂದಿರ ಹಾಗೂ ವ್ರತಧಾರಿಗಳಿಗೆ ತಂಗಲು ವಸತಿ ವ್ಯವಸ್ಥೆಯನ್ನು ನಿರ್ಮಿಸಲುದ್ದೇಶಿಸಲಾಗಿದೆ. ಸಮಿತಿಯ ಅಧ್ಯಕ್ಷರಾಗಿ ನರೇಂದ್ರ ಬಿ.ಎನ್.ಬದಿಯಡ್ಕ, ಉಪಾಧ್ಯಕ್ಷರಾಗಿ ರವೀಂದ್ರನಾಥಶೆಟ್ಟಿ ವಳಮಲೆ, ಪ್ರ.ಕಾರ್ಯದರ್ಶಿಯಾಗಿ ಸುಬ್ರಹ್ಮಣ್ಯ ಪೈ ಬದಿಯಡ್ಕ, ಕಾರ್ಯದರ್ಶಿಯಾಗಿ ಗೋಕುಲ ಬದಿಯಡ್ಕ ಹಾಗೂ ಕೋಶಾಧಿಕಾರಿಯಾಗಿ ಗುರುಪ್ರಸಾದ ಮಾಸ್ತರ್ ಬದಿಯಡ್ಕ ಆಯ್ಕೆಯಾಗಿದ್ದಾರೆ.
ನಿರ್ಮಾಣಕಾರ್ಯಗಳ ಹಾಗೂ ಮುಂದಿನ ಚಟುವಟಿಕೆಗಳ ಕುರಿತಾಗಿ ವಿನಂತಿ ಪತ್ರವನ್ನು ಜ.4ರಂದು ಶನಿವಾರ ಬೆಳಗ್ಗೆ 7.30ಕ್ಕೆ ಬದಿಯಡ್ಕ ಶ್ರೀ ಗಣೇಶಮಂದಿರದಲ್ಲಿ ಉದ್ಯಮಿ ವಸಂತ ಪೈ ಬದಿಯಡ್ಕ ಅವರು ಬಿಡುಗಡೆಗೊಳಿಸಲಿದ್ದಾರೆ. ಊರಪರವೂರ ಭಗವದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕೆಂದು ಸಂಬಂಧಪಟ್ಟವರು ತಿಳಿಸಿರುತ್ತಾರೆ.