ಮಂಜೇಶ್ವರ: ಕಾಸರಗೋಡು ಜಿಲ್ಲಾ ಕುಲಾಲ ಸಂಘದ ಆಶ್ರಯದಲ್ಲಿ ಕಾಸರಗೋಡು ಜಿಲ್ಲಾ ಕುಲಾಲ ವಿದ್ಯಾರ್ಥಿ ವೇದಿಕೆ ನೇತೃತ್ವದಲ್ಲಿ ಕುಲಾಲ ಸಮಾಜದ ವಿದ್ಯಾರ್ಥಿಗಳಿಗಾಗಿ ಮಾಹಿತಿ ಕಾರ್ಯಾಗಾರವು ಹೊಸಬೆಟ್ಟಿನ ಕುಲಾಲ ಸಮಾಜ ಮಂದಿರದಲ್ಲಿ ಇತ್ತೀಚೆಗೆ ನಡೆಯಿತು.
ಜಿಲ್ಲಾ ಕುಲಾಲ ಸಂಘದ ಅಧ್ಯಕ್ಷ ರವೀಂದ್ರ ಮುನ್ನಿಪ್ಪಾಡಿ ಅಧ್ಯಕ್ಷತೆ ವಹಿಸಿದ್ದು, ಅಗಲ್ಪಾಡಿ ಅನ್ನಪೂರ್ಣೇಶ್ವರಿ ಹೈಯರ್ ಸೆಕೆಂಡರಿ ಶಾಲೆಯ ಪ್ರಾಂಶುಪಾಲ ಸತೀಶ್ ವೈ. ಉದ್ಘಾಟಿಸಿದರು. ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಗಳಾಗಿ ಗಣೇಶ ಭಟ್ ವಾರಣಾಸಿ ಆಡಳಿತಾಧಿಕಾರಿ ಎಸ್‍ಡಿಎಂ ಮಂಗಳ ಜ್ಯೋತಿ ಸಮಗ್ರ ಸಂಸ್ಥೆ ಮಂಗಳೂರು ಭಾಗವಹಿಸಿದರು. ಸತೀಶ ಮಡ್ವ, ಗಿರಿಜಾ ಎಸ್.ಬಂಗೇರ, ಶರತ್ ಶೈಲೇಶ್ ಉಪಸ್ಥಿತರಿದ್ದರು. ವಿವಿಧ ಕುಲಾಲ ಪಂಚಾಯತ್ ಶಾಖೆಗಳ ವಿದ್ಯಾರ್ಥಿಗಳು ಭಾಗವಹಿಸಿದರು.