ಬದಿಯಡ್ಕ: ಬಳ್ಳಪದವು ನಾರಾಯಣೀಯಂ ಸಂಗೀತ ಕಲಾ ಶಾಲೆಯಲ್ಲಿ ವೇದ ನಾದ ಯೋಗ ತರಂಗಿಣಿ 2020 ಎಂಬ ವಿಶೇಷ ಕಾರ್ಯಕ್ರಮ ನಾಳೆಯಿಂದ(ಜ.31) ಫೆ.2ರ ವರೆಗೆ ಬಳ್ಳಪದವು ನಾರಾಯಣೀಯಂ ನಲ್ಲಿ ಆಯೋಜಿಸಲಾಗಿದೆ.
ನಾಳೆ ಮುಂಜಾನೆ 5.45ಕ್ಕೆ ನಡೆಯಲಿರುವ ಮಹಾಗಣಪತಿ ಹವನದೊಂದಿಗೆ ಸಮಾರಂಭ ಆರಂಭಗೊಳ್ಳುವುದು. ಬೆಳಿಗ್ಗೆ 6ಕ್ಕೆ ಈಶ ಪೌಂಡೇಶನ್ ನೇತೃತ್ವದಲ್ಲಿ ಉಪ-ಯೋಗ ಶಿಬಿರ, 9.30ಕ್ಕೆ ಉದ್ಘಾಟನಾ ಸಮಾರಂಭ ನಡೆಯಲಿದೆ. ಚೆನ್ನೈಯ ಅಬಕಾರಿ ವಿಭಾಗೀಯ ನ್ಯಾಯಾಧೀಶ ಪಿ.ದಿನೇಶ್, ಡೆಹ್ರಾಡೂನ್ ನ ಕೇದಾರನಾಥ್-ಬದರೀನಾಥ್ ಕ್ಷೇತ್ರದ ಜೀರ್ಣೋದ್ದಾರ ಸಮಿತಿ ಸದಸ್ಯ ಗಂಗಾಧರ ಎಸ್.ಕುಷ್ಠಗಿ, ಸಂಗೀತ ಕಲಾಚಾರ್ಯ ಪ್ರೊ.ಕೆ.ವೆಂಕಟರಮಣನ್ ತಿರುವನಂತಪುರ, ಬ್ರಹ್ಮಶ್ರೀ ಮುಲ್ಲಪ್ಪಳ್ಳಿ ಕೃಷ್ಣ ನಂಬೂದಿರಿ, ಬ್ರಹ್ಮಶ್ರೀ ಕೃಷ್ಣ ಕನ್ಯಾಕುಮಾರಿ, ಮಲ್ಲ ಶ್ರೀಕ್ಷೇತ್ರದ ಮೊಕ್ತೇಸರ ಆನೆಮಜಲು ವಿಷ್ಣು ಭಟ್, ರಾಜೀವ್ ಕುಮಾರ್ ಕೋಝಿಕ್ಕೋಡ್ ಉಪಸ್ಥಿತರಿರುವರು. ಮಧ್ಯಾಹ್ನ 1.30ಕ್ಕೆ ಮಹಾ ಶ್ರೀಚಕ್ರಾರಾಧನೆ, ಸಂಜೆ 7.30 ರಿಂದ ನವಾವರಣ ಪೂಜೆಗಳು ಮುಲ್ಲಪ್ಪಳ್ಳಿ ಕೃಷ್ಣ ನಂಬೂದಿರಿ ಅವರ ನೇತೃತ್ವದಲ್ಲಿ ನಡೆಯಲಿದೆ. ಅಪರಾಹ್ನ 1.45ಕ್ಕೆ ಬ್ರಹ್ಮಶ್ರೀ ಶ್ರೀಧರ ಭಟ್ ಸಜಂಗದ್ದೆ ಮತ್ತು ತಂಡದವರಿಂದ ವೇದಘೋಷ, 2.30 ರಿಂದ ಎಲೂರ್ ಬಿಜು ಅವರಿಂದ ಸೋಪಾನ ಸಂಗೀತ, 3.45 ರಿಂದ ವೀಣಾವಾದಿನಿ ತಂಡದಿಂದ ನವಾವರಣ ಕೃತಿಗಳ ಗಾಯನ ನಡೆಯಲಿದೆ. ಸಂಜೆ 6ರಿಂದ ಯೋಗೀಶ ಶರ್ಮಾ ಬಳ್ಳಪದವು ಅವರಿಂದ ದೇವೀ ಸಂಕೀರ್ತನೆ, 7.30ಕ್ಕೆ ಮಂಗಲ ನೀರಾಜನ ನಡೆಯಲಿದೆ.
ಫೆ.1 ರಂದು ಬೆಳಿಗ್ಗೆ 9ಕ್ಕೆ ನವಗ್ರಹ ಕೃತಿಗಳ ಆಲಾಪನೆ, ರಸಿಕಪ್ರಿಯ, 10.30 ರಿಂದ ರತ್ನಮಾಲಾ ಅವರಿಂದ, 11 ರಿಂದ ಅಶ್ವಿನಿ ಮಳಿವು, 11.30ರಿಂದ ಪಲ್ಲವಿ ಸುರತ್ಕಲ್, ಅಪರಾಹ್ನ 2 ರಿಂದ ಕೃಷ್ಣಕುಮಾರಿ ಮುಣ್ಚಿಕ್ಕಾನ ಅವರಿಂದ ಶಾಸ್ತ್ರೀಯ ಸಂಗೀತ ಕಚೇರಿ ನಡೆಯಲಿದೆ. ಸಂಜೆ 4ರಿಂದ ವಿದುಷಿಃ ಅಯನಾ ಪೆರ್ಲ ಅವರಿಂದ ಭರತನಾಟ್ಯ ಪ್ರದರ್ಶನ ನಡೆಯಲಿದೆ. 5ರಿಂದ ಹಿಂದೂಸ್ಥಾನಿ ಸಂಗೀತ ವಾದ್ಯೋಪಕರಣಗಳ ಗೋಷ್ಠಿ ನಡೆಯಲಿದ್ದು ಉಸ್ತಾದ್ ರಫೀಕ್ ಖಾನ್ ಮಂಗಳೂರು ಸಿತಾರ್ ಹಾಗೂ ರತ್ನಶ್ರೀ ಅಯ್ಯರ್ ತಬ್ಲಾದಲ್ಲಿ ಭಾಗವಹಿಸುವರು. 7.30ರಿಂದ ಕಲಾಮಂಡಲಂ ಮೋಹನಕೃಷ್ಣನ್ ತಂಡದವರಿಂದ ಓಟ್ಟಂ ತುಳ್ಳಲ್ ಪ್ರದರ್ಶನ ನಡೆಯಲಿದೆ.
ಫೆ.2 ರಂದು ಬೆಳಿಗ್ಗೆ 9ರಿಂದ ಪಂಚರತ್ನ ಆಲಾಪನೆ, 10.30ರಿಂದ ನಾದೋಪಾಸನೆ, ಅಪರಾಹ್ನ 3.30ರಿಂದ ಮುರಳೀರವಂ, ಸಂಜೆ 4.15ರಿಂದ ವೀಣಾವಾದಿನಿ ಪ್ರಶಸ್ತಿ ಪ್ರದಾನ ಸಮಾರಂಬ ನಡೆಯಲಿದೆ. ಶ್ರೀಮದ್ ಎಡನೀರು ಮಠಾಧೀಶ ಶ್ರೀಕೇಶವಾನಂದ ಭಾರತೀ ಶ್ರೀಗಳು ಆಶೀರ್ವಚನ ನೀಡುವರು. ಸಂಸದ ರಾಜಮೋಹನ ಉಣ್ಣಿತ್ತಾನ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು. ಗಂಗಾಧರ ಎಚ್.ಕುಷ್ಠಗಿ ಉಪಸ್ಥಿತರಿರುವರು. ಹಿರಿಯ ಸಂಗೀತ ಗಾಯಕ ಟಿ.ಪಿ.ಶ್ರೀನಿವಾಸನ್ ಕಾಞಂಗಾಡ್ ಹಾಗೂ ಗಂಗಾಧರ ಮಾಸ್ತರ್ ನೀಲೇಶ್ವರ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಪ್ರೊ.ಕೆ.ವೆಂಕಟರಮಣನ್ ತಿರುವನಂತಪುರ, ರಾಧಾಕೃಷ್ಣ ಭಟ್ ಬಳ್ಳಪದವು ಮೊದಲಾದವರು ಉಪಸ್ಥಿತರಿರುವರು. ಸಂಜೆ 6 ರಿಂದ ಸಿಕ್ಕಿಲ್ ಗುರುಚರಣ್ ಚೆನ್ನೈ ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಚೇರಿ ನಡೆಯಲಿದ್ದು ತಿರುವಿಳ ವಿಜು ಎಸ್ ಆನಂದ್ ವಯೋಲಿನ್, ಡಾ.ಜಿ.ಬಾಬು ತಿರುವನಂತಪುರ ಮೃದಂಗ, ಮಂಜೂರ್ ಉಣ್ಣಿಕೃಷ್ಣನ್ ಘಟಂ ನಲ್ಲಿ ಸಹಕರಿಸುವರು.