ಕಾಸರಗೋಡು: ಸತತ ಮೂರನೇ ಬಾರಿಯೂ ರಾಜ್ಯ ಮಟ್ಟದ ಕುಟುಂಬಶ್ರೀ ಕಲೋತ್ಸವದಲ್ಲಿ ಸವಾರ್ಂಗೀಣ ಪ್ರಶಸ್ತಿಪಡೆದುಕೊಂಡಿದೆ. ಈ ಬಗ್ಗೆ ಚೆರ್ವತ್ತೂರಿನಲ್ಲಿ ನಡೆದ ಸಮಾರಂಭದಲ್ಲಿ ಕುಟುಂಬಶ್ರಿ ಕಲೋತ್ಸವದಲ್ಲಿ ಪಾಲ್ಗೊಂಡ ಕಲಾವಿದರಿಗೆ ಅಭಿನಂದನೆ ನಡೆಯಿತು.
ಚೆರುವತ್ತೂರಿನಲ್ಲಿ ಕುಟುಂಬಶ್ರೀ ಜಿಲ್ಲಾಮಿಶನ್ ವತಿಯಿಂದಈ ಅಭಿನಂದನೆ ಸಮಾರಂಭ ಆಯೋಜಿಸಲಾಗಿತ್ತು. ಪಾಲಕ್ಕಾಡ್ ರಾಜ್ಯ ಮಟ್ಟದ ಕಲೋತ್ಸವ ಜರುಗಿತ್ತು. ಅಭಿನಂದನಾ ಸಮಾರಂಬವನ್ನು ಸಿನಿಮಾ ನಟ ಉಣ್ಣಿರಾಜ್ ಉದ್ಘಾಟಿಸಿದರು. ಕಾಞಂಗಾಡ್ ನಗರಸಭೆ ಅಧ್ಯಕ್ಷ ವಿವಿ.ರಮೇಶನ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾಧಿಕಾರಿಡಾ.ಡಿ.ಸಜಿತ್ ಬಾಬು ಬಹುಮಾನ ವಿತರಿಸಿದರು. ಕುಟುಂಬಶ್ರೀ ಜಿಲ್ಲಾ ಸಮಿತಿ ಸಂಚಾಲಕ ಸುರೆಂದ್ರನ್ ಟಿ.ಟಿ., ಎ.ಡಿ.ಎಂ.ಸಿ.ಗಳಾದ ಹರಿದಾಸನ್, ಪ್ರಕಾಶನ್ ಪಾಲಾಯಿ,ಸಿ.ಹರಿದಾಸನ್ ಮೊದಲಾದವರು ಉಪಸ್ಥಿತರಿದ್ದರು.