ಉಪ್ಪಳ: ಕನ್ನಡ ಹೋರಾಟ ಸಮಿತಿ ಹಾಗು ಕನ್ನಡಾಭಿಮಾನಿಗಳ ಸಭೆ ನಾಳೆ(ಜ.3) ಸಂಜೆ 4 ಕ್ಕೆ ಉಪ್ಪಳ ಕೈಕಂಬದ ಪಂಚಮಿ ಹಾಲ್‍ನಲ್ಲಿ ಜರಗಿಸಲು ತೀರ್ಮಾನಿಸಲಾಗಿದೆ.
ಭಾಷಾ ಅಲ್ಪಸಂಖ್ಯಾತ ಕಾಸರಗೋಡು ತಾಲೂಕಿನಿಂದ ಬೇರ್ಪಡಿಸಿ ರೂಪೀಕರಿಸಿದ ಮಂಜೇಶ್ವರ ತಾಲೂಕಿಗೆ ಕನ್ನಡ ಭಾಷಾ ಅಲ್ಪಸಂಖ್ಯಾತ ತಾಲೂಕು ಎಂಬ ಮಾನ್ಯತೆಯನ್ನು ನೀಡದೆ ಇಲ್ಲಿನ ಕನ್ನಡಿಗರನ್ನು ವಂಚಿಸುವುದನ್ನು ಪ್ರತಿಭಟಿಸುವ ಮೂಲಕ ಮಂಜೇಶ್ವರ ತಾಲೂಕನ್ನು ಭಾಷಾ ಅಲ್ಪಸಂಖ್ಯಾತ ತಾಲೂಕು ಎಂಬುದಾಗಿ ಘೋಷಿಸಬೇಕೆಂಬ ಬೇಡಿಕೆಯನ್ನು ಮುಂದಿಟ್ಟುಕೊಂಡು ಜ.16 ರಂದು ಬೆಳಗ್ಗೆ 10 ಗಂಟೆಯಿಂದ ಉಪ್ಪಳದಲ್ಲಿ ಕಾರ್ಯಾಚರಿಸುವ ತಾಲೂಕು ಕಚೇರಿ ಮುಂದೆ ಸತ್ಯಾಗ್ರಹ ನಡೆಸಲು ತೀರ್ಮಾನಿಸಲಾಗಿದೆ.
ಈ ಕುರಿತು ಚರ್ಚಿಸಿ, ಸತ್ಯಾಗ್ರಹವನ್ನು ಯಶಸ್ವಿಗೊಳಿಸಲು ಬೇಕಾದ ತೀರ್ಮಾನ ಕೈಗೊಳ್ಳಲು ಜ.3 ರಂದು ಸಭೆ ಜರಗಲಿದೆ. ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡಿಗರು ಭಾಗವಹಿಸಬೇಕೆಂದು ಕನ್ನಡ ಹೋರಾಟ ಸಮಿತಿಯ ಪದಾಧಿಕಾರಿಗಳು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.