HEALTH TIPS

ರಾಷ್ಟ್ರೀಯ ಅಧ್ಯಾಪಕ ಪರಿಷತ್ (ಎನ್.ಟಿ.ಯು) ನ ಮಂಜೇಶ್ವರ ಉಪಜಿಲ್ಲಾ ಸಮಾವೇಶ


      ಮಂಜೇಶ್ವರ: ರಾಷ್ಟ್ರೀಯ ಅಧ್ಯಾಪಕ ಪರಿಷತ್ (ಎನ್.ಟಿ.ಯು)ನ ಮಂಜೇಶ್ವರ ಉಪಜಿಲ್ಲಾ ಸಮಾವೇಶವು ಇತ್ತೀಚೆಗೆ ಹೊಸಂಗಡಿ ವಾಮಂಜೂರಿನ ಶ್ರೀ ಗುರು ನರಸಿಂಹ ಕಲ್ಯಾಣ ಮಂಟಪದಲ್ಲಿ ನಡೆಯಿತು.
      ಮಂಜೇಶ್ವರ ಉಪಜಿಲ್ಲಾ ಅಧ್ಯಕ್ಷ ಅರವಿಂದಾಕ್ಷ ಭಂಡಾರಿ ಧ್ವಜಾರೋಹಣಗೈದು ಚಾಲನೆ ನೀಡಿದರು. ಬಳಿಕ ನಡೆದ ಸಭೆಯನ್ನು ಶ್ರೀಧರ ರಾವ್ ಆರ್.ಎಂ ದೀಪ ಬೆಳಗಿಸಿ ಉದ್ಘಾಟಿಸಿದರು. ಉಪಜಿಲ್ಲಾ ಅಧ್ಯಕ್ಷ ಅರವಿಂದಾಕ್ಷ ಭಂಡಾರಿ ಅಧ್ಯಕ್ಷತೆ ವಹಿಸಿದ್ದರು. ಭಾಸ್ಕರ.ಬಿ, ಚಂದ್ರಹಾಸ ಪಿ, ರೇವತಿ,  ವಿಘ್ನೇಶ್ವರ ಕೆದುಕೋಡಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ವಿಘ್ನೇಶ್ವರ ಕೆದುಕೋಡಿ ಸಹಕಾರ ಭಾರತೀಯ ಮೂಲಕ ವಲಯ ಸಹಕಾರಿಯಾಗಿ ಚುನಾಯಿತರಾದುದಕ್ಕೆ ಸನ್ಮಾನಿಸಿ ಗೌರವಿಸಲಾಯಿತು. ಉಪಜಿಲ್ಲಾ ಕಾರ್ಯದರ್ಶಿ ರಘುವೀರ್ ಎಂ ಸ್ವಾಗತಿಸಿ, ಜೊತೆ ಕಾರ್ಯದರ್ಶಿ ಶ್ರೀಧರ ಭಟ್ ವಂದಿಸಿದರು. ಕೋಶಾಧಿಕಾರಿ ಈಶ್ವರ ಕಿದೂರು ವಂದಿಸಿದರು.
   ಬಳಿಕ ನಡೆದ ಗೋಷ್ಠಿಗಳಲ್ಲಿ ಹಲವಾರು ಪ್ರಸಕ್ತ ವಿದ್ಯಮಾನಗಳ ಕುರಿತು ಚರ್ಚೆಗಳು ನಡೆಯಿತು. ವಿದ್ಯಾಭ್ಯಾಸದ ಕ್ಷೇತ್ರದಲ್ಲಿರುವ ಸಮಸ್ಯೆಗಳು ಹಾಗೂ ಅದನ್ನು ಯಾವ ರೀತಿ ಎದುರಿಸಬೇಕು ಎಂಬುದರ ಕುರಿತಾಗಿ ಚರ್ಚಿಸಲಾಯಿತು. ಜೊತೆಗೆ ದೇಶದ ಸಂಪನ್ಮೂಲದ ಬಳಕೆಯನ್ನು ರಾಜ್ಯದಲ್ಲಿ ಶಿಕ್ಷಣಕ್ಕೆ ಅಳವಡಿಸುವ ವಿಚಾರದ ಕುರಿತು ವಿಮರ್ಶೆ ನಡೆಸಲಾಯಿತು. ಜಾರಿಯಾದ ಪೌರತ್ವ ಸಂಶೋಧನೆ ಕಾಯ್ದೆ (ಸಿ.ಎ.ಎ) ಬೆಂಬಲವಾಗಿ ಸಮಾಜದಲ್ಲಿ ಜಾಗೃತಿ ಮಾಡುವ ಬಗ್ಗೆ ಗಣ್ಯರು ಮಾಹಿತಿ ನೀಡಿದರು. ಎರಡನೇ ಸಭೆಯಲ್ಲಿ ರಾಷ್ಟ್ರೀಯ ಅಧ್ಯಾಪಕ ಪರಿಷತ್ ನ ಸಂಘಟನಾತ್ಮಕ ವಿಷಯಗಳ ಕುರಿತಾದ ಚರ್ಚೆ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಎನ್.ಟಿ.ಯು ಉಪಜಿಲ್ಲಾ ಅಧ್ಯಕ್ಷ ಅರವಿಂದಾಕ್ಷ ಭಂಡಾರಿ ವಹಿಸಿದ್ದರು. ರಾಷ್ಟ್ರೀಯ ಅಧ್ಯಾಪಕ ಪರಿಷತ್ ರಾಜ್ಯ ಸಮಿತಿ ಕಾರ್ಯದರ್ಶಿ ವೆಂಕಪ್ಪ ಶೆಟ್ಟಿ ಸಭೆಯಲ್ಲಿ ಉಪಸ್ಥಿತರಿದ್ದು ಸಂಘಟನಾತ್ಮಕವಾಗಿ ಸಂಘಟನೆಯ ಮುಂದಿನ ಕಾರ್ಯ ಯೋಜನೆಗಳ ಚರ್ಚೆ ನಡೆಸಿದರು. ಭೋಜನ ವಿರಾಮದ ಬಳಿಕ ಅಧ್ಯಾಪಕ ಪರಿಷತ್‍ನ ಮಂಜೇಶ್ವರ ಉಪಜಿಲ್ಲಾ ಮಟ್ಟದ ನೂತನ ಸಮಿತಿ ರಚಿಸಲಾಯಿತು. ನೂತನ ಅಧ್ಯಕ್ಷರಾಗಿ ಚಂದ್ರಿಕ ಟೀಚರ್, ಉಪಾಧ್ಯಾಕ್ಷರಾಗಿ ರವೀಂದ್ರ ರೈ ಹಾಗೂ ದಿನೇಶ್, ಪ್ರಧಾನ ಕಾರ್ಯದರ್ಶಿಯಾಗಿ ರಘುವೀರ ಎಂ, ಕಾರ್ಯದರ್ಶಿಯಾಗಿ ಶ್ರೀಧರ ಭಟ್ ಸಜಂಕಿಲ, ದೇವಿಪ್ರಸಾದ್ ಹಾಗೂ ರಾಮಚಂದ್ರ ಕೋಡಿಯಡ್ಕ ಮತ್ತು ಖಜಾಂಚಿಯಾಗಿ ಈಶ್ವರ ಕಿದೂರು ಅವಿರೋಧವಾಗಿ ಆಯ್ಕೆಗೊಂಡರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries