ಬದಿಯಡ್ಕ: ಕೇರಳ ಬಾರ್ಬರ್ಸ್ ಬ್ಯೂಟಿಶಿಯನ್ ಅಸೋಸಿಯೇಷನ್ ಕಾಸರಗೋಡು ತಾಲೂಕು ಸಮಿತಿಯ ಆಶ್ರಯದಲ್ಲಿ ಮಹಿಳಾ ಸಂಗಮ ಬದಿಯಡ್ಕ ಶ್ರೀ ರಾಮಲೀಲ ಸಭಾಂಗಣದಲ್ಲಿ ಇತ್ತೀಚೆಗೆ ಜರಗಿತು.
ಕಾರ್ಯಕ್ರಮವನ್ನು ಬದಿಯಡ್ಕ ಆರೋಗ್ಯ ಅಧಿಕಾರಿ ವಿನೋದ್ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ತಾಲೂಕು ಸಮಿತಿ ಅಧ್ಯಕ್ಷ ಎಂ. ಗೋಪಿ ಅಧ್ಯಕ್ಷತೆ ವಹಿಸಿದ್ದರು. ಇನ್ನೋರ್ವ ಆರೋಗ್ಯ ಅಧಿಕಾರಿ ದೇವಿದಾಸ್ ಅವರು ಸ್ವಚ್ಚತೆ, ಆರೋಗ್ಯವನ್ನು ನಿರ್ವಹಣೆ ಬಗ್ಗೆ ಮಾತನಾಡಿದರು. ಜಿಲ್ಲಾ ಸಮಿತಿ ಅಧ್ಯಕ್ಷ ಎನ್ ಸೇತು, ಜಿಲ್ಲಾ ಕಾರ್ಯದರ್ಶಿ ರಮೇಶನ್, ಶ್ಯಾಮ.ಪಿ ನಾಯರ್, ಎಂಬಿ.ನಾರಾಯಣನ್, ನಟರಾಜನ್, ಬ್ಲಾಕ್ ಸಮಿತಿ ಪದಾಧಿಕಾರಿಗಳಾದ ರಾಮನಾಥನ್, ಸತ್ಯನಾರಾಯಣ, ಮುಳ್ಳೇರಿಯ ಬ್ಲಾಕ್ ಸಮಿತಿ ಪದಾಧಿಕಾರಿಗಳಾದ ಸಂತೋಷ್ ಮುಳ್ಳೇರಿಯ, ಗೋಪಾಲ ಕುಂಟಾರು ಸಹಿತ ಹಲವರು ಉಪಸ್ಥಿತರಿದ್ದರು. ಕೆ. ಗೋಪಿ ಸ್ವಾಗತಿಸಿ, ಸತ್ಯನಾರಾಯಣ ಬದಿಯಡ್ಕ ವಂದಿಸಿದರು.