ಕಾಸರಗೋಡು: ತ್ರಿಶೂರು ಶ್ರೀನಾರಾಯಣನಪುರಂ ಕೆ.ಕೆ.ಎಂ. ಸನ್ಸ್ ನಿರ್ಮಿಸುತ್ತಿರುವ ಕೈರಳಿ ಕೋಕನಟ್ ಆಯಿಲ್ ನ ವಿತರಣೆ, ಮಾರಾಟ ಜಿಲ್ಲೆಯಲ್ಲಿ ನಿಷೇಧಿಸಲಾಗಿದೆ ಎಂದು ಕಾಸರಗೋಡು ಆಹಾರ ಸುರಕ್ಷೆ ಅಸಿಸ್ಟೆಂಟ್ ಕಮೀಷನರ್ ತಿಳಿಸಿರುವರು.
ಕೋಯಿಕೋಡ್ ರೀಜನಲ್ ಅನಲೆಟಿಕಲ್ ಲ್ಯಾಬ್ ನಲ್ಲಿ ನಡೆಸಿದ ತಪಾಸಣೆಯಲ್ಲಿ ಇದು ಕಳಪೆ ಗುಣಮಟ್ಟ ಹೊಂದಿರುವುದು ಮತ್ತು ಮಿಸ್ ಬ್ರಾಂಡೆಡ್ ಆಗಿರುವುದು ಖಚಿತವಾಗಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದವರು ತಿಳಿಸಿದರು. ಎಲ್ಲಾದರೂ ಈ ಉತ್ಪನ್ನ ಮಾರಾಟ ನಡೆಯುತ್ತಿರುವುದು ಗಮನಕ್ಕೆ ಬಂದರೆ ಮಾರಾಟಗಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಅವರು ಮುನ್ನೆಚ್ಚರಿಕೆ ನೀಡಿದರು.