ಮಂಜೇಶ್ವರ: ಕೋಳ್ಯೂರು ಶ್ರೀ ಶಂಕರನಾರಾಯಣ ದೇವಸ್ಥಾನದ ವರ್ಷಾವಧಿ ಜಾತ್ರೆ ಮತ್ತು ಮಂಡಲ ಪೂಜೆ ಜ.2 ರಿಂದ 4 ರ ವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಲಿದೆ.
ಜ.2 ರಂದು ರಾತ್ರಿ 6.30 ರಿಂದ ಭಜನೆ, 8 ಕ್ಕೆ ಶ್ರೀ ದೇವರಲ್ಲಿ ಪ್ರಾರ್ಥಿಸಿ ಕಾಣಿಕೆ ಇರಿಸಿ ಪದಾರ್ಥಕ್ಕೆ ಹಚ್ಚುವುದು, ಶ್ರೀ ದೇವರಿಗೆ ಕಾರ್ತಿಕ ಪೂಜೆ, ಬಲಿ ಉತ್ಸವ, ಜ.3 ರಂದು ಬೆಳಗ್ಗೆ 6 ಕ್ಕೆ ಉಷ:ಪೂಜೆ, ಶ್ರೀ ನಾರಾಯಣ ದೇವರ ಬಲಿ ಉತ್ಸವ, 9 ರಿಂದ ಶಾಸ್ತ್ರೀಯ ಸಂಗೀತ, 10.30 ರಿಂದ ತುಲಾಭಾರ ಸೇವೆ, ಮಹಾಪೂಜೆ, ಬಲಿ ಉತ್ಸವ, ಸಂಜೆ 6 ರಿಂದ ಬಡುಗು ತಿಟ್ಟಿನ ಯಕ್ಷಗಾನ ಬಯಲಾಟ, ರಾತ್ರಿ 8.30 ರಿಂದ ಬಯ್ಯತ ಬಲಿ, ಕಟ್ಟೆ ಪೂಜೆ, ಉತ್ಸವ, ರಾತ್ರಿಯ ಪೂಜೆ ಬಲಿ ನಡೆಯಲಿದೆ.
ಜ.4 ರಂದು ಬೆಳಗ್ಗೆ 9 ರಿಂದ ಕುಣಿತ ಭಜನೆ. 10 ರಿಂದ ಶ್ರೀ ದೇವರ ಬೆಳಗಿನ ಬಲಿ ಉತ್ಸವ, ಅಪರಾಹ್ನ 3 ರಿಂದ ಯಕ್ಷಗಾನ ಬಯಲಾಟ, ರಂಗಪೂಜೆ, ಶ್ರೀ ಭೂತಬಲಿ ಉತ್ಸವ, ಮಂತ್ರಾಕ್ಷತೆ ಜರಗಲಿದೆ.