ಮುಳ್ಳೇರಿಯ: ಬೆಳ್ಳೂರು ಗ್ರಾಮಪಂಚಾಯತಿ ಎಡಮುಗರು ತೋಡಿನ ಶುಚೀಕರಣ ನಡೆಯಿತು. ಹರಿತ ಕೇರಳಂ ಮಿಷನ್ ನ ಮೂರನೇ ವಾರ್ಷಿಕೋತ್ಸವ ಅಂಗವಾಗಿ ನಡೆಯುತ್ತಿರುವ "ಇನ್ನು ನಾ ಹರಿಯಲೇ..?" ಯೋಜನೆ ಅಂಗವಾಗಿ ಕಾಮಗಾರಿ ಜರುಗಿತು. ಹರಿತ ಕ್ರಿಯಾ ಸೇನೆ, ಕುಟುಂಬಶ್ರೀ, ಸ್ವಯಂ ಸೇವಾ ಸಂಘಟನೆಗಳ ಕಾರ್ಯಕರ್ತರ ಸಹಾಯದೊಂದಿಗೆ ಶುಚೀಕರಣ ನಡೆಯಿತು. ಬೆಳ್ಳೂರು ಗ್ರಾಮಪಂಚಾಯತಿ ಅಧ್ಯಕ್ಷೆ ಎಂ.ಲತಾ ಉದ್ಘಾಟಿಸಿದರು. ಅಭಿವೃದ್ಧಿ ಸ್ಥಾಯೀ ಸಮಿತಿ ಅಧ್ಯಕ್ಷೆ ಮಾಲತಿ ಜೆ.ರೈ, ಸದಸ್ಯರಾದ ವಿ.ರಾಧಾ, ಕೆ.ಜಯಕುಮಾರ್, ಬಿ.ರಾಧಾಕೃಷ್ಣ ನೇತೃತ್ವ ವಹಿಸಿದ್ದರು.
ಎಡಮುಗರು ತೋಡು ಶುಚೀಕರಣ
0
ಜನವರಿ 04, 2020