ಬದಿಯಡ್ಕ: ಕುಕ್ಕಂಗೋಡ್ಲು ಶ್ರೀಕಂಠಪಾಡಿ ಶ್ರೀ ಸುಬ್ರಹ್ಮಣ್ಯ ಸ್ವಾಮೀ ಕ್ಷೇತ್ರದಲ್ಲಿ ಕಿರುಷಷ್ಠಿ ಮಹೋತ್ಸವವು ಜ. 1 ಮತ್ತು 2 ರಂದು ದೇಲಂಪಾಡಿ ಬಾಲಕೃಷ್ಣ ತಂತ್ರಿಗಳ ನೇತೃತ್ವದಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಲಿದೆ.
ಬೆಳಿಗ್ಗೆ 6 ಕ್ಕೆ ಗಣಪತಿ ಹವನ, 7ಕ್ಕೆ ದೀಪ ಪ್ರತಿಷ್ಠೆ ಉಷಪೂಜೆ, 11 ರಿಂದ ಗಣೇಶ ನೀರ್ಚಾಲು ಬಳಗದ ರಾಗಸುದಾ ಮೇಲೊಡೀಸ್ ನೀರ್ಚಾಲು ಇವರಿಂದ ಟ್ರಾಕ್ ಭಕ್ತಿಗೀತೆಗಳು, 11.30 ನವಕಾಭಿಷೇಕ, 12.30 ಮಹಾಪೂಜೆ,ಪ್ರಸಾದ ವಿತರಣೆ,ಅನ್ನ ಸಂತರ್ಪಣೆ ನಡೆಯಲಿದೆ.
ಸಂಜೆ 5.30 ರಿಂದ ಶೀ ಧರ್ಮಶಾಸ್ತಾ ಸೇವಾ ಸಮಿತಿ ನೀರ್ಚಾಲು ಇವರಿಂದ ಭಜನಾ ಕಾರ್ಯಕ್ರಮ, 5.45 ಶ್ರೀ ರಕ್ತಶ್ವರಿ ತಂಬಿಲಸೇವೆ, 6 ರಿಂದ ಪಡಿಯಡ್ಪು ಬಾಲ ಕಲಾವಿದರಿಂದ ನೃತ್ಯ ವೈವಿಧ್ಯ, 8 ರಿಂದ ಏಣಿಯರ್ಪು ಕೋದಂಬರತ್ತ್ ತರವಾಡಿನಿಂದ ಶ್ರೀ ವಿಷ್ಣು ಮೂರ್ತಿ ಭಂಡಾರ ಬರುವುದು, 8.15 ತೊದಂಙಲ್, 9 ರಿಂದ ಕು.ಜ್ಯೋಸ್ನಾ ಕೊಲ್ಲಂಗಾನ ಮತ್ತು ಬಳಗ ನಾಟ್ಯ ಮಂಟಪ ಮಧೂರು ಇವರಿಂದ ಭರತ ನಾಟ್ಯ, 9.30 ರಾತ್ರಿಯ ಪೂಜೆ, ಪ್ರಸಾದ ವಿತರಣೆ ನಡೆಯಲಿದೆ.
ಜ.2 ರಂದು ಬೆಳಿಗ್ಗೆ 10.30 ಶ್ರೀ ವಿಷ್ಣುಮೂರ್ತಿ ದೈವದ ಕೋಲ ಪ್ರಸಾದ ವಿತರಣೆ, 12.30 ಮಹಾಪೂಜೆ ಪ್ರಸಾದ ವಿತರಣೆ, ಭಂಡಾರ ಎಣಿಯರ್ಪಿಗೆ ತೆರಳುವುದರೊಂದಿಗೆ ಕಿರುಷಷ್ಠಿ ಮಹೋತ್ಸವ ಸಂಪನ್ನಗೊಳ್ಳಲಿದೆ.