ಮುಳ್ಳೇರಿಯ: ಇತಿಹಾಸ ಪ್ರಸಿದ್ಧ ನಾರಂಪಾಡಿ ಶ್ರೀ ಉಮಾಮಹೇಶ್ವರ ಕ್ಷೇತ್ರದ ವರ್ಷಾವಧಿ ಉತ್ಸವವು ಬುಧವಾರದಿಂದ ಆರಂಭಗೊಂಡಿದ್ದು, ಫೆ 2ರ ತನಕ ವೇದಮೂರ್ತಿ ಬ್ರಹ್ಮಶ್ರೀ ದೇಲಂಪಾಡಿ ಬಾಲಕೃಷ್ಣ ತಂತ್ರಿಯವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ.
ಬುಧವಾರ ಬೆಳಗ್ಗೆ ಗಣಪತಿಹವನ, ಧ್ವಜಾರೋಹಣದೊಂದಿಗೆ ಉತ್ಸವ ಚಾಲನೆಗೊಂಡಿತು. ಬಳಿಕ ಶ್ರೀಬಲಿ, ನವಕಾಭಿಷೇಕ, ತುಲಾಭಾರ ಸೇವೆ ನಡೆಯಿತು. 11ರಿಂದ ಸಪ್ತಸ್ವರ ಸಂಗೀತ ಶಾಲಾ ವಿದ್ಯಾರ್ಥಿಗಳಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನದಾನ ನಡೆಯಿತು. ಅಪರಾಹ್ನ 2:30ರಿಂದ ಕಯ್ಯಾರು ಮಹಿಳಾ ಯಕ್ಷಕೂಟ ಪೊನ್ನೆತ್ತೋಡು ಇವರಿಂದ ಯಕ್ಷಗಾನ ಕೂಟ, ಸಂಜೆ 6:30ರಿಂದ ನಾರಂಪಾಡಿ ಶ್ರೀ ಉಮಾಮಹೇಶ್ವರ ಭಜನ ಸಮಿತಿ ಮತ್ತು ಮವ್ವಾರು ಶ್ರೀ ಕೃಷ್ಣ ಭಜನ ಸಮಿತಿ ಇವರಿಂದ ಭಜನೆ, ರಾತ್ರಿ 8 ರಾತ್ರಿ ಪೂಜೆ, ಹವಿಸ್ಸು ಪೂಜೆ, ಶ್ರೀಭೂತಬಲಿ, 10:30ರಿಂದ ವಿದುಷಿ ನಿಶಿತಾ ಪುತ್ತೂರು, ಮಾ. ಸಾತ್ವಿಕ್‍ರಾಜ್, ಮಾ. ಸಾಕೇತ್‍ರಾಜ್ ಇವರಿಂದ ಭರತನಾಟ್ಯ ಪ್ರದರ್ಶನಗೊಂಡಿತು.
ಇಂದಿನ ಕಾರ್ಯಕ್ರಮ:
ಜ.30 ರಂದು ಬೆಳಗ್ಗೆ 7:30ಕ್ಕೆ ಶ್ರೀಬಲಿ, 8ರಿಂದ ಶ್ರೀ ವಿಶ್ವಪ್ರಿಯ ಮಹಿಳಾ ಭಜನ ಮಂಡಳಿ ಏತಡ್ಕ ಇವರಿಂದ ಭಜನೆ, 9:30 ರಿಂದ ಮಾ. ವಿಜೇತ ಸುಬ್ರಹ್ಮಣ್ಯ ಕಬೆಕ್ಕೋಡು, ಮಾ. ವೆಂಕಟ ಯಶಸ್ವಿ ಕಬೆಕ್ಕೋಡು, ಮಾ. ಕಾರ್ತಿಕ್‍ಶ್ಯಾಂ ಮುಂಡೋಳುಮೂಲೆ ಇವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ, 11ರಿಂದ ತುಲಾಭಾರ ಸೇವೆ, ಮಧ್ಯಾಹ್ನ ಮಹಾಪೂಜೆ, ಪ್ರಸಾದ, ಅನ್ನದಾನ, 2 ರಿಂದ ಸ್ಮøತಿಲಯಂ ಸಿಂಗರ್ಸ್ ಪೈಕ ಇವರಿಂದ ಭಕ್ತಿಗಾನಸುಧಾ, ಸಂಜೆ 6:30ರಿಂದ ಅಗಲ್ಪಾಡಿ ಜಯನಗರ ಶ್ರೀ ಗೋಪಾಲಕೃಷ್ಣ ಭಜನ ಸಂಘ ಇವರಿಂದ ಭಜನೆ, 8ರಿಂದ ರಾತ್ರಿ ಪೂಜೆ, ಹವಿಸ್ಸು ಪೂಜೆ, ಶ್ರೀಭೂತಬಲಿ ನಡೆಯಲಿದೆ.