HEALTH TIPS

ನಾಳೆಯಿಂದ ಅಗಲ್ಪಾಡಿ ಶ್ರೀಕ್ಷೇತ್ರದ ವರ್ಷಾವಧಿ ಉತ್ಸವ

       
           ಬದಿಯಡ್ಕ: ಅಗಲ್ಪಾಡಿ ಶ್ರೀದುರ್ಗಾಪರಮೇಶ್ವರಿ ಕ್ಷೇತ್ರದ ವಾರ್ಷಿಕ ಉತ್ಸವ ನಾಳೆಯಿಂದ(ಜ.30) ಫೆ.4ರ ವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
          ಕಾರ್ಯಕ್ರಮದ ಅಂಗವಾಗಿ ಜ.30 ರಂದು ಬೆಳಿಗ್ಗೆ 8ಕ್ಕೆ ಗಣಪತಿಪೂಜೆ, ಧ್ವಜಾರೋಹಣ, ಸಂಜೆ 7.30ಕ್ಕೆ ಭಜನೆ, 8.30ಕ್ಕೆ ಮಹಾಪೂಜೆ, ಶ್ರೀಭೂತಬಲಿ, ನೃತ್ತ, ನಡೆಯಲಿದೆ. ಜ.31 ರಂದು ಬೆಳಿಗ್ಗೆ 7.30ಕ್ಕೆ ಉಷಃಪೂಜೆ, ಶ್ರೀಭೂತಬಲಿ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಸಂತರ್ಪಣೆ, ಸಂಜೆ 5.30 ರಿಂದ ಭಜನೆ, ರಾತ್ರಿ 8 ಕ್ಕೆ ಮಹಾಪೂಜೆ, ಶ್ರೀಭೂತಬಲಿ, ನೃತ್ತ ನಡೆಯಲಿದೆ. ಫೆ.1 ರಂದು ಬೆಳಿಗ್ಗೆ 7.30ಕ್ಕೆ ಉಷಃಪೂಜೆ, ಶ್ರೀಭೂತಬಲಿ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಸಂತರ್ಪಣೆ ನಡೆಯಲಿದೆ. ಸಂಜೆ 5.30ಕ್ಕೆ ಭಜನೆ, 8ಕ್ಕೆ ಮಹಾಪೂಜೆ, ಶ್ರೀಭೂತಬಲಿ, ನೃತ್ತ ನಡೆಯಲಿದೆ. ಫೆ.2 ರಿಂದ ಬೆಳಿಗ್ಗೆ 7.30ಕ್ಕೆ ಉಷಃಪೂಜೆ, ಶ್ರೀಭೂತಬಲಿ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಸಂತರ್ಪಣೆ ನಡೆಯಲಿದೆ. ಸಂಜೆ 5.30ಕ್ಕೆ ಭಜನೆ, 8ಕ್ಕೆ ನಡುದೀಪೋತ್ಸವ, ಮಹಾಪೂಜೆ, ಶ್ರೀಭೂತಬಲಿ, ಪಲ್ಲಕಿ ಉತ್ಸವ, ರಥೋತ್ಸವ, ನೃತ್ತ ನಡೆಯಲಿದೆ. ಫೆ.3 ರಂದು ಬೆಳಿಗ್ಗೆ 7.30ಕ್ಕೆ ಉಷಃ ಪೂಜೆ, ಶ್ರೀಭೂತಬಲಿ, 11.30ರಿಂದ ಶ್ರೀಜಟಾಧಾರಿ ದೈವದ ಭಂಡಾರ ರಾಜಾಂಗಣಕ್ಕೆ ಆಗಮನ, ಸ್ವೀಕಾರ, 12.30ಕ್ಕೆ ಮಹಾಪೂಜೆ, ಸಮತರ್ಪಣೆ, 5.30ಕ್ಕೆ ಭಜನೆ, ರಾತ್ರಿ 8 ರಿಂದ ಮಹಾಪೂಜೆ, ಶ್ರೀಭೂತಬಲಿ, ಅಶ್ವತ್ಥಕಟ್ಟೆಯಲ್ಲಿ ಶ್ರೀದೇವರಿಗೆ ಮಹಾಪೂಜೆ, ಸುಡುಮದ್ದು ಪ್ರದರ್ಶನ, ನವಮಿ ಮಹೋತ್ಸವ, ಪಲ್ಲಕಿ ಉತ್ಸವ, ರಥೋತ್ಸವ, ನೃತ್ತ, ಶಯನ ನಡೆಯಲಿದೆ. ಫೆ.4 ರಂದು ಬೆಳಿಗ್ಗೆ 7ಕ್ಕೆ ಕವಾಟೋದ್ಘಾಟನೆ, ಉಷಃಪೂಜೆ, 10 ರಿಂದ ಶ್ರೀಭೂತಬಲಿ, ಅವಭೃತ, ನೃತ್ತ, ಬಟ್ಳು ಕಾಣಿಕೆ, ಧ್ವಜಾವರೋಹಣ, ಮಂತ್ರಾಕ್ಷತೆ, ಮಹಾಪೂಜೆ, ಸಂತರ್ಪಣೆ, ಸಂಜೆ 6.30 ರಿಂದ ಭಜನೆ, ರಾತ್ರಿ 8 ರಿಂದ ಮಹಾಪೂಜೆ, ರಾತ್ರಿ 2.30 ರಿಂದ ಶ್ರೀಜಟಾಧಾರಿ ದೈವಗಳ ಮಹಿಮೆ, ಅರಸಿನಹುಡಿ ಪ್ರಸಾದ ವಿತರಣೆ ನಡೆಯಲಿದೆ.
        ಸಾಂಸ್ಕøತಿಕ ಕಾರ್ಯಕ್ರಮಗಳ ಅಂಗವಾಗಿ ಜ.31 ರಂದು ಸಂಜೆ 6.30 ರಿಂದ ಶ್ರೀದುರ್ಗಾಕೃಷ್ಣ ಮಕ್ಕಳ ಮೇಳ ಅಗಲ್ಪಾಡಿ ಜಯನಗರ ತಂಡದಿಂದ ಯಕ್ಷಗಾನ ಬಯಲಾಟ, ಫೆ.1 ರಂದು ಬೆಳಿಗ್ಗೆ 10 ರಿಂದ ಜಯಕುಮಾರಿ ಓಡಂಗಲ್ಲು ಅವರಿಂದ ಸಂಗೀತ, 11 ರಿಂದ ಮಾ.ಅಭಿಷೇಕ ಎಂ. ಅವರಿಂದ ಸಂಗೀತ ಕಚೇರಿ, ಸಂಜೆ 7 ರಿಂದ ನಾಟ್ಯಧ್ವನಿ ಕಲಾಕ್ಷೇತ್ರದವರಿಂದ ನೃತ್ಯ-ನಾಟ್ಯ-ವೈಭವ, ಫೆ.2 ರಂದು ಬೆಳಿಗ್ಗೆ 10 ರಿಂದ ರಂಗಸಿರಿ ಬದಿಯಡ್ಕ ತಂಡದವರಿಂದ ಯಕ್ಷಗಾನ ಕೂಟ, ಸಂಜೆ 5ಕ್ಕೆ ರವೀಂದ್ರ ಭಟ್ ಗೋಸಾಡ ಅವರಿಂದ ಶಾಸ್ತ್ರೀಯ ಸಂಗೀತ ಕಚೇರಿ, ರಾತ್ರಿ 7 ರಿಂದ ಅಗಲ್ಪಾಡಿ ಕಿರಿಯ ಪ್ರಾಥಮಿಕ ಶಾಲಾ ಮಕ್ಕಳಿಂದ ಕಾರ್ಯಕ್ರಮ ವೈವಿಧ್ಯಗಳು ನಡೆಯಲಿವೆ. ಫೆ.3 ರಂದು ಬೆಳಿಗ್ಗೆ 10 ರಿಂದ ವಯಲಿನ್ ವಾದಕ ಕೋಳಿಕ್ಕಜೆ ವಿಷ್ಣು ಭಟ್ ಅವರಿಂದ ಸಂಗೀತಾರಾಧನೆ, ಸಂಜೆ 6 ರಿಂದ ವಿದ್ಯಾಲಕ್ಷ್ಮೀ ಕುಂಬಳೆ ಅವರ ಶಿಷ್ಯವೃಂದದವರಿಂದ ನೃತ್ಯಸಂಭ್ರಮ 2020 ನಡೆಯಲಿದೆ. ಫೆ.4 ರಂದು ಸಂಜೆ 6.30ರಿಂದ ಪೆರ್ಲದ ಶಿವಾಂಜಲಿ ನೃತ್ಯ ಕಲಾಕೇಂದ್ರದವರಿಂದ ನೃತ್ಯ ಕಾರ್ಯಕ್ರಮ, ರಾತ್ರಿ 9.30ರಿಂದ ಬದಿಯಡ್ಕದ ರಂಗಸಿರಿ ತಮಡದವರಿಂದ ಯಕ್ಷಗಾನ ಬಯಲಾಟ ಪ್ರದರ್ಶನ ನಡೆಯಲಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries