ಮುಳ್ಳೇರಿಯ: ಬೆಳ್ಳೂರು ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಗೆ ಕಾಸರಗೋಡು ಶಾಸಕರ ಅಭಿವೃದ್ಧಿ ನಿಧಿಯಿಂದ ಮಂಜೂರಾದ ಶಾಲಾ ಬಸ್ ಉದ್ಘಾಟನಾ ಕಾರ್ಯಕ್ರಮ ಮಂಗಳವಾರ ನಡೆಯಿತು.
ಶಾಸಕ ಎನ್.ಎ.ನೆಲ್ಲಿಕ್ಕುನ್ನು ಹಸಿರು ನಿಶಾನೆ ತೋರಿಸಿ ಬಸ್ ಸೇವೆ ಉದ್ಘಾಟಿಸಿದರು.ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಎನ್.ಎಚ್.ಮೊಹಮ್ಮದ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು.ಬೆಳ್ಳೂರು ಗ್ರಾ.ಪಂ. ಅಧ್ಯಕ್ಷೆ ಲತಾ ಯುವರಾಜ್, ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ, ವಾರ್ಡ್ ಸದಸ್ಯೆ ಗೀತಾ ಕೆ., ಮಾತೃ ಮಂಡಳಿ ಅಧ್ಯಕ್ಷೆ ಶಾಂತಾ, ಎಸ್.ಎಂ.ಸಿ.ಅಧ್ಯಕ್ಷ ಶಶಿಧರ ಗೋಳಿಕಟ್ಟೆ, ಹಿರಿಯ ಅಧ್ಯಾಪಕ ಕುಂಞರಾಮ ಮಣಿಯಾಣಿ, ಸಿಬ್ಬಂದಿ ಕಾರ್ಯದರ್ಶಿ ಮೋಹನನ್ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕಿ ವಾರಿಜಾ ನೇರೋಳು ಸ್ವಾಗತಿಸಿದರು.ಶಿಕ್ಷಕ ನವೀನ ಕುಮಾರ್ ನಿರ್ವಹಿಸಿದರು.