ಕಾಸರಗೋಡು: ಪ್ಲಾಸ್ಟಿಕ್ ನಿಷೇಧ ಹಿನ್ನೆಲೆಯಲ್ಲಿ ಬದಲಿ(ಪ್ರಕೃತಿಸ್ನೇಹಿ) ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಸ್ಟಾಲ್ ಗಳು ನುಳ್ಳಿಪ್ಪಾಡಿಯಲ್ಲಿ ನಡೆಯುತ್ತಿರುವ ರಾಜ್ಯ ಸರಕಾರದ ಕಿಫ್ ಬಿ ಪ್ರದರ್ಶನದಲ್ಲಿ ವೀಕ್ಷಕರನ್ನು ಸೆಳೆಯುತ್ತಿವೆ. ಜಿಲ್ಲಾ ಕುಟುಂಬಶ್ರೀ ಮಿಷನ್ ಮತ್ತು ಕೇರಳ ನಿರ್ಮಿತಿ ಸ್ಟಾಲ್ ಗಳು "ಪುನರ್ ಜ್ಜನಿ" ಎಂಬ ಹೆಸರಿನಲ್ಲಿ ಇಲ್ಲಿ ಸಕ್ರಿಯವಾಗಿವೆ. ಗೃಹೋಪಯೋಗಿ ಮತ್ತು ಅಲಂಕಾರ ಸಾಮಾಗ್ರಿಗಳು ಇಲ್ಲಿ ಪ್ರದರ್ಶನಗೊಳ್ಳುತ್ತಿವೆ ಜಿಲ್ಲೆಯ 560 ಕುಟುಂಬಗಳ 268 ಮಹಿಳೆಯರು ತಯಾರಿಸಿದ ಉತ್ಪನ್ನಗಳು ಇಲ್ಲಿವೆ. ಈನಿಟ್ಟಿನಲ್ಲಿ ಕೊರಗ ಜನಾಂಗದವರು ಸಿದ್ಧಪಡಿಸುವ ಉತ್ಪನ್ನ ಗಳಿಗೆ ಬೇಡಿಕೆ ಅಧಿಕವಾಗಿದೆ. ಬೆತ್ತದ ಕಿರು ಬುಟ್ಟಿಗಳು, ಹೂದಾನಿಗಳು, ಹಾಳೆ ತಟ್ಟೆಗಳು, ಮಣ್ಣಿನ ಲೋಟ, ಪಾತ್ರೆ, ಕುಡಿಕೆ ಇತ್ಯಾದಿಗಳು, ಬಟ್ಟೆ ಚೀಲಗಳು, ಬಡ್ಸ್ ಶಾಲೆಗಳ ಮಕ್ಕಳ ತಾಯಂದಿರು ನಿರ್ಮಿಸಿರುವ ಬೀಜಗಳ ಪೆನ್ ಗಳು ಇತ್ಯಾದಿಗಳು ಗಮನ ಸೆಳೆಯುತ್ತಿವೆ.
ಕುಟುಂಬಶ್ರೀಯಿಂದ ಬದಲಿ ಉತ್ಪನ್ನಗಳ ಪ್ರದರ್ಶನ
0
ಜನವರಿ 29, 2020