ನವದೆಹಲಿ: ಭಾರತ ಮತ್ತು ಪಾಕಿಸ್ತಾನ ಬುಧವಾರ ರಾಜತಾಂತ್ರಿಕ ಮಾರ್ಗಗಳ ಮೂಲಕ ನವದೆಹಲಿ ಮತ್ತು ಇಸ್ಲಾಮಾಬಾದ್‍ನಲ್ಲಿ ಏಕಕಾಲದಲ್ಲಿ ತಮ್ಮ ವಶದಲ್ಲಿರುವ ನಾಗರಿಕ ಕೈದಿಗಳು ಮತ್ತು ಮೀನುಗಾರರ ಪಟ್ಟಿಯನ್ನು ಪರಸ್ಪರ ವಿನಿಮಯ ಮಾಡಿಕೊಂಡಿವೆ.
"2008 ರ ಒಪ್ಪಂದದ ನಿಬಂಧನೆಗಳಿಗೆ ಅನುಗುಣವಾಗಿ, ಪ್ರತಿ ವರ್ಷ ಜನವರಿ 1 ಮತ್ತು ಜುಲೈ 1 ರಂದು ಅಂತಹ ಪಟ್ಟಿಗಳನ್ನು ವಿನಿಮಯ ಮಾಡಿಕೊಳ್ಳಲಾಗುತ್ತದೆ" ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಇಂದು ಹೇಳಿಕೆಯಲ್ಲಿ ತಿಳಿಸಿವೆ. ಇದಲ್ಲದೆ, ಪಾಕಿಸ್ತಾನದ ವಶದಲ್ಲಿರುವ 14 ಭಾರತೀಯ ನಾಗರಿಕ ಕೈದಿಗಳು ಮತ್ತು 100 ಭಾರತೀಯ ಮೀನುಗಾರರಿಗೆ ತಕ್ಷಣ ಕಾನ್ಸುಲರ್ ಭೇಟಿಗೆ ಅವಕಾಶ ಒದಗಿಸಲು ಪಾಕಿಸ್ತಾನವನ್ನು ಕೇಳಲಾಗಿದೆ ಎಂದು ಅದು ಹೇಳಿದೆ.
1988ರ ಪರಮಾಣು ಸ್ಥಾವರಗಳ ವಿರುದ್ಧದ ದಾಳಿಯ ನಿಷೇಧದ ಒಪ್ಪಂದ ಅನ್ವಯ ಉಭಯ ದೇಶಗಳು ಮಾಹಿತಿ ಹಂಚಿಕೊಂಡಿದ್ದು, ಎರಡೂ ದೇಶಗಳ ಪರಮಾಣು ಸ್ಥಾವರಗಳ ಕುರಿತ ಮಾಹಿತಿ ಪರಸ್ಪರ ಹಂಚಿಕೊಳ್ಳಲಾಗಿದೆ. ಪ್ರತೀ ವರ್ಷ ಜನವರಿ 1 ರಂದು ಭಾರತ ಮತ್ತು ಪಾಕಿಸ್ತಾನ ದೇಶಗಳು ಪರಸ್ಪರ ತಮ್ಮ ತಮ್ಮ ಅಣು ಸ್ಥಾವರಗಳ ಕುರಿತು ಮಾಹಿತಿ ಹಂಚಿಕೊಳ್ಳುತ್ತವೆ.