HEALTH TIPS

ಪೈವಳಿಕೆಯಲ್ಲಿ ಗಡಿನಾಡ ಜಾನಪದ ಮೇಳ, ತುಳು ಕಾವ್ಯಯಾನ- ಕಾಸರಗೋಡಿನ ಕನ್ನಡಿಗರು ಹೋರಾಟ ನಡೆಸಲು ವಿಶಿಷ್ಟ ಶಕ್ತಿ ಹೊಂದಿರುವರು-ಸಚಿವ ಕೋಟ ಶ್ರೀನಿವಾಸ ಪೂಜಾರಿ

   
          ಉಪ್ಪಳ: ರಾಷ್ಟ್ರದ ಭವ್ಯ ಪರಂಪರೆಯನ್ನು ಕಾಪಿಡುವಲ್ಲಿ ಜಾನಪದೀಯ ಸಂಸ್ಕøತಿ, ಆಚರಣೆ, ಜೀವನಶೈಲಿಗಳು ಮಹತ್ತರ ಪಾತ್ರ ವಹಿಸಿವೆ. ಕನ್ನಡ ಜಾನಪದ ಸಾಂಸ್ಕøತಿಕ ನೆಲೆಗಟ್ಟು ಕರಾವಳಿಯಲ್ಲಿ ಪ್ರಬುದ್ದತೆಯ ವಲಯವೊಂದನ್ನು ನಿರ್ಮಾಣಗೊಳಿಸಿದ್ದು ಇಲ್ಲಿಯ  ಜನಪದೀಯ ಮೂಲ ಸೊಗಡು ಇಂದಿಗೂ ನೆಲೆನಿಲ್ಲುವಲ್ಲಿ ಗ್ರಾಮೀಣ ಪ್ರದೇಶಗಳ ಜನಸಾಮಾನ್ಯರ ಪಾತ್ರ ಹಿರಿದಾದುದು ಎಂದು ಕರ್ನಾಟಕ ಸರ್ಕಾರದ ಮುಜರಾಯಿ ಮತ್ತು ಮೀನುಗಾರಿಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅಭಿಪ್ರಾಯ ವ್ಯಕ್ತಪಡಿಸಿದರು.
       ಕರ್ನಾಟಕ ಜಾನಪದ ಪರಿಷತ್ ಕೇರಳ ಗಡಿನಾಡ ಘಟಕ ಮತ್ತು ತುಳು ವರ್ಲ್ಡ್ ಮಂಗಳೂರು ಇದರ ಜಂಟಿ ಆಶ್ರಯದಲ್ಲಿ ಪೈವಳಿಕೆ ಕಾಯರ್ಕಟ್ಟೆ ಕುಲಾಲ ಮಂದಿರದಲ್ಲಿ ಶನಿವಾರ ಆಯೋಜಿಸಲಾಗಿದ್ದ ಗಡಿನಾಡ ಜಾನಪದಮೇಳ ಮತ್ತು ತುಳು ಕಾವ್ಯಯಾನದ ಉದ್ಘಾಟನೆಯನ್ನು ದೀಪಬೆಳಗಿಸಿ ಸಚಿವರು ಉದ್ಘಾಟಿಸಿ ಮಾತನಾಡಿದರು.
       ವರ್ತಮಾನದಲ್ಲಿ ಗಡಿನಾಡು ಕಾಸರಗೋಡು ಕೇರಳದ ಭಾಗವಾಗಿದ್ದರೂ, ಇಲ್ಲಿಯ ಬಹುಭಾಷೆ, ಸಂಸ್ಕøತಿಯ ಮಧ್ಯೆ ಕನ್ನಡ-ತುಳು ಭಾಷೆಗಳು ಸಕ್ರಿಯವಾಗಿ ಪ್ರಬಲವಾಗಿರುವುದು ವಿಶಿಷ್ಟತೆಯಾಗಿದೆ. ಬಹುಭಾಷಾ ಸಂಗಮದ ಮಧ್ಯೆ ತುಳುವಿನ ಸೊಗಡು ಕೊಂಡಿಯಾಗಿ ಜನರನ್ನು ಬೆರೆತು ಬೆಸೆಯುತ್ತಿದೆ. ಇಲ್ಲಿಯ ಕನ್ನಡ ಅಸ್ಮಿತೆಗೆ ಉಂಟಾಗುವ ಹೊಡೆದ, ಧಾಳಿಗಳ ಸಂದರ್ಭ ಅನಿವಾರ್ಯವಾದಾಗ ಕನ್ನಡಿಗರು ಸೆಟೆದು ನಿಂತು ಹೋರಾಟ ನಡೆಸಲು ಶಕ್ತರಾಗಿರುವುದು ಕರ್ನಾಟಕಕ್ಕೇ ಮಾದರಿಯಾಗಿದೆ ಎಂದು ಸಚಿವರು ತಿಳಿಸಿದರು. ಭಾಷಾ ಸಂಸ್ಕøತಿಯ ಸೊಗಡು, ಜನಪದ ವಿಚಾರ, ಭಾಷಾ ಸಾಹಿತ್ಯದ ಮೂಲಕ ಬದುಕನ್ನು ಕಟ್ಟಲು ಸಾಧ್ಯ. ಆಧುನಿಕ ತಂತ್ರಜ್ಞಾನ ಮುಂದುವರಿದಂತೆ ಜನಪದ ಕಲೆಗಳು ತೆರೆಮರೆಗೆ ಸರಿಯುತ್ತಿದ್ದು ಇದನ್ನು ಉಳಿಸುವ ಕಾರ್ಯ ಜಾನಪದ ಪರಿಷತ್‍ನಿಂದ ಆಗಬೇಕಾಗಿದೆ. ಮಣ್ಣಿನ ಸಂಸ್ಕøತಿ, ಗತಿಸಿಹೋದ ಕನ್ನಡ ತುಳು ಜಾನಪದಕಲೆಗಳನ್ನು ಉಳಿಸಲು ಕರ್ನಾಟಕ ಸರ್ಕಾರ ಸದಾ ಸಿದ್ಧ ಎಂದು ಸಚಿವರು ಈ ಸಂದರ್ಭ ಅಭಿಪ್ರಾಯ ವ್ಯಕ್ತಪಡಿಸಿದರು.
        ಬನ್ನಿರೋ ಬನ್ನಿರೋ ಕನ್ನಡದ ಮನೆ ಉರಿಯುತಿದೆ...ಕನ್ನಡವ ಉಳಿಸಬನ್ನಿ ಎಂಬುದಾಗಿ ಕನ್ನಡಕ್ಕಾಗಿ ಹೋರಾಡಿದ ಡಾ.ಕಯ್ಯಾರ ಕಿಞಂಣ್ಣ ರೈ ಮತ್ತು ರಾಷ್ಟ್ರ ಕವಿ ಗೋವಿಂದ ಪೈ ಕವಿಯತ್ರಯರು ನಮಗೆ ಬಿಟ್ಟು ಹೋದ ವಿಚಾರಗಳು ಹಾಗೂ ಗ್ರಾಮೀಣ ಸೊಗಡುಗಳ ಕಡೆಗೆ ನಾವು ಗಮನ ಹರಿಸಬೇಕಾಗಿದೆ ಎಂದರು. ಉಭಯ ಕವಿಗಳ ಮನೆಗಳಿಗೆ ತೆರಳಿ ಅಲ್ಲಿನ ಪುಸ್ತಕ ಭಂಡಾರ ಸಹಿತ ವಿವಿಧ ನೆನಪುಗಳ ದಾಖಲೆಗಳನ್ನು ಗಮನಿಸಿರುವೆ. ಇವುಗಳ ಸಂರಕ್ಷಣೆ ದೃಷ್ಟಿಯಿಂದ ಕರ್ನಾಟಕ ಸರ್ಕಾರದಿಂದ ಹೊಸ ಯೋಜನೆಯೋದನ್ನು ರೂಪಿಸುವುದಾಗಿ ಭರವಸೆ ನೀಡಿದರು. ಬದುಕಿನ ವೈವಿಧ್ಯತೆಯನ್ನು ಸಾರುವ ಗಡಿನಾಡ ಕಲೆ ವಿಭಿನ್ನ ಜನಪದ ಶೈಲಿಯನ್ನು ಸಾರುವ ಕಲಾವಿದರಿಗೆ ಕರ್ನಾಟಕ ಸರ್ಕಾರ ಸದಾ ಪೆÇ್ರೀತ್ಸಾಹ ನೀಡುವುದಾಗಿ ತಿಳಿಸಿದರು.
        ಸಮಾಜದ ಕಟ್ಟ ಕಡೆಯವರನ್ನು ಸಂದಿಸಿ ಅಗಲಿದ ಪೂಜ್ಯ ಪೇಜಾವರ ಸ್ವಾಮೀಜಿಯವರಿಗೆ ಸಚಿವರು ನುಡಿ ನಮನ ಸಲ್ಲಿಸಿದರು. ಕರ್ನಾಟಕ ಜಾನಪದ ಪರಿಷತ್ ಕೇರಳ ಘಟಕಾಧ್ಯಕ್ಷ ಎ.ಆರ್.ಸುಬ್ಬಯಕಟ್ಟೆ ಅಧ್ಯಕ್ಷತೆ ವಹಿಸಿದ ಸಮಾರಂಭದಲ್ಲಿ ಮಂಜೇಶ್ವರ ಶಾಸಕ ಎಂಸಿ.ಕಮರುದ್ದೀನ್, ಉದ್ಯಮಿ ಡಾ.ತಲ್ಲೂರು ಶಿವರಾಮ ಶೆಟ್ಟಿ, ಕಸಾಪ ದ.ಕ.ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಪೈವಳಿಕೆ ಅರಮನೆಯ ರಂಗತ್ರೈ ಬಲ್ಲಾಳ ಅರಸರು, ಮಂಜೇಶ್ವರ ಬ್ಲಾಕ್ ಪಂಚಾಯತಿ ಅಧ್ಯಕ್ಷ ಎ.ಕೆಎಂ.ಅಶ್ರಫ್, ಕುಂಬಳೆ ಗ್ರಾಮ ಪಂಚಾಯತಿ ಅಧ್ಯಕ್ಷ ಪುಂಡರೀಕಾಕ್ಷ ಕೆ.ಎಲ್, ಪೈವಳಿಕೆ ಗ್ರಾ.ಪಂ. ಸದಸ್ಯೆ ರಝಿಯಾ ರಝಾಕ್ ಚಿಪ್ಪಾರು, ಸದಸ್ಯ ಹರೀಶ್ ಬೊಟ್ಟಾರಿ, ಪೈವಳಿಕೆ ಅಣ್ಣತಮ್ಮ ಜೋಡುಕೆರೆ ಕಂಬಳ ಸಮಿತಿ ಅಧ್ಯಕ್ಷ ಅಜಿತ್ ಎಂ.ಸಿ.ಲಾಲ್‍ಬಾಗ್, ಪೈವಳಿಕೆ ಸೇವಾ ಸಹಕಾರಿ ಬ್ಯಾಂಕ್ ನಿರ್ದೇಶಕ ಅಝೀಜ್ ಕಳಾಯಿ, ಗಡಿನಾಡ ಸಾಹಿತ್ಯ ಸಾಂಸ್ಕøತಿಕ ಅಕಾಡೆಮಿ ಅಧ್ಯಕ್ಷ ಪ್ರಭಾಕರ ಕಲ್ಲೂರಾಯ ಬನದಗದ್ದೆ, ಪ್ರೊ.ಎ.ಶ್ರೀನಾಥ್ ಕಾಸರಗೋಡು, ವಿದ್ಯಾನಂದ ಕಾರಂತ ಪೆÇಳಲಿ, ಹಮೀದ್ ಕುಂಞõÁಲಿ, ಸೈಫುಲ್ಲ ತಂಙಳ್ ಅತಿಥಿಗಳಾಗಿ ಉಪಸ್ಥಿತರಿದ್ದರು.
     ಸಮಾರಂಭದಲ್ಲಿ ಮೂಡಂಬೈಲು ಡಾ. ರವಿ ಶೆಟ್ಟಿ, ಲಯನ್ ಗೋಪಾಲ ಸಿ.ಬಂಗೇರ, ಜ್ಯೋತಿಷ್ಯರತ್ನ ಅಶೋಕ ಪುರೋಹಿತ ಅವರಿಗೆ ಸಚಿವರು ಗಡಿನಾಡ ಸಿರಿ ಪ್ರಶಸ್ತಿ ಪ್ರದಾನಗೈದರು. ಸಮಾಜದ ವಿವಿಧ ಸಾಧಕರನ್ನು ಗೌರವಿಸಲಾಯಿತು.
   ತುಳುವ ವಾಲ್ಮೀಕಿ ವಾಚನ-ಪ್ರವಚನ ಸರಣಿ ಅಭಿಯಾನದಂಗವಾಗಿ ಶಿವಪ್ರಸಾದ್ ಎಡಪದವು ಹಾಗೂ ಶಾಲಿನಿ ಹೆಬ್ಬಾರ್ ಕಾವ್ಯ ವಾಚನದಲ್ಲಿ ಮತ್ತು ಡಾ.ದಿನಕರ ಪಚ್ಚನಾಡಿ ಅವರು ಪ್ರವಚನದಲ್ಲಿ ಭಾಗವಹಿಸಿದರು.ಹರಿದಾಸ ಜಯಾನಂದ ಕುಮಾರ್ ಪ್ರಾರ್ಥನೆ ಹಾಡಿದರು.ಜಾನಪದ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಬಟ್ ಕೆ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಡಾ.ರಾಜೇಶ್ ಆಳ್ವ ಬದಿಯಡ್ಕ ವಂದಿಸಿದರು. ಕೋಶಾಧಿಕಾರಿ ರವಿ ನಾಯ್ಕಾಪು ಕಾರ್ಯಕ್ರಮ ನಿರೂಪಿಸಿದರು.
   ಸಭಾ ಕಾರ್ಯಕ್ರಮದ ಬಳಿಕ ಗೌರಿ ಗಣೇಶ ಭಜನಾ ಸಂಘ ಪ್ರತಾಪನಗರ(ಜನಪದ ಕುಣಿತ), ಶ್ರೀದುರ್ಗಾ ಸಪ್ತಸ್ವರ ಸಿಂಗಾರಿ ಮೇಳ ಆವಳ(ಸಿಂಗಾರಿ ಮೇಳ),ಇತರ ತಂಡಗಳಿಂದ ಕಂಸಾಳೆ, ಪೂಜಾ ಕುಣಿತ, ಕುಣಿತ ಭಜನೆ, ಡೊಳ್ಳು ಕುಣಿತ, ಮಂಗಳ ಕಳಿ, ಏಕ ವ್ಯಕ್ತಿ ಯಕ್ಷಗಾನ, ಧಪ್ಪ್ ಮುಟ್ಟ್, ಕೋಲ್ ಕಳಿ, ಕೈಮುಟ್ಟ್ ಪಾಟ್ಟ್, ತಿರುವಾದಿರ ನೃತ್ಯ,ಗಜಮೇಳ,ಡೊಳ್ಳು ಕುಣಿತ,ನಾಸಿಕ್ ಬ್ಯಾಂಡ್  ಮೊದಲಾದ ಕಲಾ ಪ್ರಕಾರಗಳ ಪ್ರದರ್ಶನಗೊಂಡಿತು. ಆರಂಭದಲ್ಲಿ ನಾಡು-ನುಡಿಯ ಪರಂಪರೆಯನ್ನು ಸಾರುವ ಜಾನಪದ ಶೋಭಾಯಾತ್ರೆಗೆ  ಕಾಯರ್ಕಟ್ಟೆ ಲಾಲ್‍ಬಾಗ್ ಪರಿಸರದಿಂದ ಪೈವಳಿಕೆ ಗ್ರಾ.ಪಂ.ಅಧ್ಯಕ್ಷೆ ಭಾರತಿ ಜೆ.ಶೆಟ್ಟಿ ಚಾಲನೆ ನೀಡಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries