ಪೆರ್ಲ:ಸ್ವರ್ಗ ಸ್ವಾಮಿ ವಿವೇಕಾನಂದ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು 'ವಿದ್ಯಾಲಯ ಪ್ರತಿಭೆಗಳೊಂದಿಗೆ' ಕಾರ್ಯಕ್ರಮದ ಭಾಗವಾಗಿ ಸ್ವರ್ಗ ಸಮೀಪದ ಕೊಡೆಂಕಿರಿ ಕಾಲನಿಯ ಕವಯತ್ರಿ, ಸುಪ್ತ ಪ್ರತಿಭೆ ಸುಜಯ ಅವರ ಮನೆಗೆ ಭೇಟಿ ನೀಡಿ ಸಂವಾದ ನಡೆಸಿದರು.
ಕಡು ಬಡತನದ ಜೀವನ ಸಾಗಿಸುತ್ತಿರುವ ಸುಜಯಾ ಕಲಿತಿರುವುದು ಕೇವಲ 7ನೇ ತರಗತಿಯಾದರೂ ಕವನ ರಚನೆ ಹವ್ಯಾಸ ಮುಂದುವರಿಸುತ್ತಾರೆ.ಕವನ ಬರೆಯುವುದು, ಬರೆದ ಕವನಗಳನ್ನು ಸ್ವತಃ ರಾಗ ಸಂಯೋಜನೆ ಮಾಡಿ ಸೊಗಸಾಗಿ ಹಾಡುವುದು ಸುಜಯಳ ವಿಶೇಷತೆ. ಸಾಂಸಾರಿಕ ಜೀವನಕ್ಕೆ ಕಟ್ಟು ಬಿದ್ದು ಕನಸುಗಳು ಕಮರಿ ಹೋದರೂ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮದರ್ಶಿ ಡಾ. ವೀರೇಂದ್ರ ಹೆಗ್ಗಡೆಯವರ ಸಹಕಾರದಿಂದ 'ದೇವರಕೃಪೆ' ಕವನ ಸಂಕಲನ ಬಿಡುಗಡೆ ಗೊಂಡಿದೆ.ಬಳಿಕ ಹಲವು ತುಳು, ಕನ್ನಡ ಕವನಗಳನ್ನು ರಚಿಸಿದರೂ ಆರ್ಥಿಕ ಸಮಸ್ಯೆಯಿಂದ ಪ್ರಕಟಿಸಲು ಸಾಧ್ಯವಾಗಿಲ್ಲ ಎಂದವರು ಮಾಹಿತಿ ನೀಡಿದರು. ಸ್ವರ್ಗ ಶಾಲೆಯ ನಿವೃತ್ತ ಮುಖ್ಯ ಶಿಕ್ಷಕ ಕೆ.ವೈ.ಸುಬ್ರಹ್ಮಣ್ಯ ಭಟ್ ಅವರ ಮುತುವರ್ಜಿಯಲ್ಲಿ ತುಳು ಅಕಾಡೆಮಿಯ ಸದಸ್ಯೆಯಾನ್ನಾಗಿ ಸೇರಿಸಲಾಗಿದೆ. ಮಕ್ಕಳೊಂದಿಗೆ ತನ್ನ ಜೀವನ ವೃತ್ತಾಂತಗಳನ್ನು ಎಳೆ ಎಳೆಯಾಗಿ ವಿವರಿಸಿದ ಕವಯತ್ರಿ, ಮಕ್ಕಳ ಸುಪ್ತ ಪ್ರತಿಭೆ ಹೊರಹೊಮ್ಮಲು ಪೆÇೀಷಕರು, ಶಿಕ್ಷಕರು ಹಾಗೂ ಸಮಾಜ ಕಾಳಜಿ ತೋರಬೇಕು ಎಂದರು.ಮುಖ್ಯ ಶಿಕ್ಷಕಿ ಗೀತಾಕುಮಾರಿ ಮನೆ ಭೇಟಿಗೆ ನೇತೃತ್ವ ನೀಡಿದರು.