ಮಂಜೇಶ್ವರ: ಮೀಯಪದವು ಸೇವಾ ಸಹಕಾರಿ ಬ್ಯಾಂಕ್ ನಲ್ಲಿ 39 ವರ್ಷ ಸುದೀರ್ಘ ಕಾಲ ಸೇವೆ ಸಲ್ಲಿಸಿ ನಿವೃತ್ತರಾದ ಕಾರ್ಯದರ್ಶಿ ಕೆ.ವಿಶ್ವನಾಥ ಶೆಟ್ಟಿಯವರ ಬೀಳ್ಕೊಡುಗೆ ಸಮಾರಂಭ ಇತ್ತೀಚೆಗೆ ಜರಗಿತು.
ಬ್ಯಾಂಕ್ ನ ಅಧ್ಯಕ್ಷ ಡಿ.ಹರೀಶ್ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಆಡಳಿತ ಮಂಡಳಿಯ ಪರವಾಗಿ ಶಾಲು ಹೊದಿಸಿ ಸನ್ಮಾನಿಸಿದರು. ಮತ್ತು ಬ್ಯಾಂಕಿನ ಸಿಬ್ಬಂದಿಯ ಪರವಾಗಿ ಡಿ. ವಿಶ್ವನಾಥ ಶೆಟ್ಟಿ ಜಯಶ್ರೀ ಫಲಪುಷ್ಪವನ್ನಿತ್ತು ಶಾಲು ಹೊದಿಸಿ ಸನ್ಮಾನಿಸಿದರು. ಕಾರ್ಯಕ್ರಮದಲ್ಲಿ ಬ್ಯಾಂಕಿನ ಮಾಜಿ ಅಧ್ಯಕ್ಷ ಸದಾಶಿವ ರೈ ವರ್ಕಾಡಿ, ಬ್ಯಾಂಕಿನ ಮಾಜಿ ಕಾರ್ಯದರ್ಶಿ ನಾರಾಯಣ ಪೂಜಾರಿ ಬೆಜ್ಜಂಗಳ, ಬ್ಯಾಂಕಿನ ಉಪಾಧ್ಯಕ್ಷೆ ನಬೀಸತ್ ಮಿಸ್ರಿಯ, ನಿರ್ದೇಶಕರುಗಳಾದ ಡಿ.ಪ್ರಭಾಕರ ಚೌಟ, ವಿಜಯಲಕ್ಷ್ಮಿ, ಶೋಭ, ಡೆನ್ನಿಸ್ ಮೊಂತೇರೊ, ಮಾರ್ಶಲ್ ಮೊಂತೇರೊ, ಅಶ್ರಫ್, ಅಬೂಬಕ್ಕರ್ ಸಿದ್ದೀಕ್ ಮತ್ತು ಮಾಜಿ ನಿರ್ದೇಶಕರುಗಳಾದ ಉದಯಕುಮಾರ್ ಟಿ.ಆರ್, ಜಯರಾಮ, ಸದಸ್ಯರುಗಳಾದ ಚಂದ್ರಶೇಖರ ಶೆಟ್ಟಿ, ಇಬ್ರಾಹಿಂ ಕುಂಞ, ಎಸ್.ಟಿ ಉಮ್ಮರ್, ಗಂಗಾಧರ ಮತ್ತಿತರರು ಉಪಸ್ಥಿತರಿದ್ದರು. ನೂತನ ಕಾರ್ಯದರ್ಶಿ ಜಯಶ್ರೀ ಸ್ವಾಗತಿಸಿ, ಡಿ.ವಿಶ್ವನಾಥ ಶೆಟ್ಟಿ ವಂದಿಸಿದರು.