HEALTH TIPS

ಸಂಘಟನೆಗಳ ಮೂಲಕ ಸಾಮಾಜಿಕ ಸ್ಪಂದನೆಗೆ ಯುವ ಸಂಘಟನೆಗಳು ತೊಡಗಿಸಿಕೊಳ್ಳಬೇಕು-ಅರವಿಂದ ಬೋಳಾರ್


        ಮಂಜೇಶ್ವರ: ಸಾಮಾಜಿಕ ಸ್ಪಂದನೆ ನೀಡುವಲ್ಲಿ ಯುವ ಜನತೆ ಸಂಘಟನೆಗಳ ಮೂಲಕ ಕಾರ್ಯೋನ್ಮುಖವಾಗುವುದು ನಾಡಿನ ಪ್ರಗತಿಯ ದ್ಯೋತಕ ಎಂದು ಚಲನಚಿತ್ರ ನಟ, ರಂಗಭೂಮಿ ಕಲಾವಿದ ಅರವಿಂದ ಬೋಳಾರ್ ನುಡಿದರು.
       ಅವರು ಶ್ರೀ ಅಯ್ಯಪ್ಪ ಭಜನಾ ಮಂದಿರ ಮೀಯಪದವಿನಲ್ಲಿ ಜರಗಿದ 41ನೇ ವರ್ಷದ ಶ್ರೀ ಅಯ್ಯಪ್ಪ ದೀಪೋತ್ಸವದ ಅಂಗವಾಗಿ ಸೋಮವಾರ ನಡೆದ ಭಗತ್ ಫ್ರೆಂಡ್ಸ್ ಬಾನಬೆಟ್ಟು ಮುನ್ನಿಪ್ಪಾಡಿ ಇದರ 5ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ದಿ.ನವೀನ್ ಆಳ್ವ ಬಾನಬೆಟ್ಟು ಇವರ ಸ್ಮರಣಾರ್ಥ ನಡೆದ ಸಾಂಸ್ಕøತಿಕ ಕಾರ್ಯಕ್ರಮದ ಸಮಾರಂಭವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.
        ಕೆಲವೆಡೆ ಯುವಕರು ಸಾಮಾಜಿಕ ವಿರೋಧ ನೀತಿ ಅಥವಾ ದುಶ್ಚಟಗಳ ದಾಸರಾಗುವುದಕ್ಕಿಂತ ಇಂತಹ ಆಧ್ಯಾತ್ಮಿಕ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದು ದೇಶಕ್ಕೆ ಯುವಜನತೆಯ ಉತ್ತಮ ಕೊಡುಗೆಯಾಗಬಲ್ಲುದು ಎಂದರು.
    ಸಮಾರಂಭದ ಅಧ್ಯಕ್ಷತೆಯನ್ನು ಮೀಯಪದವು ವಿದ್ಯಾವರ್ಧಕ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ಶ್ರೀಧರ ರಾವ್.ಆರ್.ಎಂ ವಹಿಸಿದ್ದರು. ಕಾರ್ಯಕ್ರಮದಲ್ಲಿ ಯೋಗಾಚಾರ್ಯ ಪುಂಡರೀಕಾಕ್ಷ ಬೆಳ್ಳೂರು ಧಾರ್ಮಿಕ ಭಾಷಣ ಮಾಡಿದರು. ಸಮಾರಂಭದಲ್ಲಿ ದಕ್ಷಿಣ ಕನ್ನಡ ಹಾಗು ಕಾಸರಗೋಡು ಜಿಲ್ಲಾ ಕಂಬಳ ಸಮಿತಿಯ ಅಧ್ಯಕ್ಷ ಪಿ.ಆರ್.ಶೆಟ್ಟಿ ಕುಳೂರು ಪೊಯ್ಯೆಲು, ಮಂಜೇಶ್ವರ ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷ ನ್ಯಾಯವಾದಿ ನವೀನ್ ರಾಜ್ ಕೆ.ಜೆ, ಯುವ ಉದ್ಯಮಿ ರಾಮಚಂದ್ರ ಗಟ್ಟಿ, ಧಾರ್ಮಿಕ ಸಾಮಾಜಿಕ ಮುಂದಾಳು ಡಾ.ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ, ಮೀಂಜ ಗ್ರಾಮ ಪಂಚಾಯತಿ ಮಾಜಿ ಸದಸ್ಯ ಪದ್ಮನಾಭ ರೈ ಉಂಬಲ್ತೋಡಿ, ಭಗತ್ ಫ್ರಂಡ್ಸ್‍ನ ಗೌರವ ಸಲಹೆಗಾರ ರಾಜ ಬರೆಮನೆ, ಗೌರವಾಧ್ಯಕ್ಷ ಸುಬ್ಬಣ್ಣ ಆಳ್ವ ಬಾನಬೆಟ್ಟು, ಮೀಯಪದವು ಶ್ರೀ ಅಯ್ಯಪ್ಪ ಭಜನಾ ಮಂದಿರದ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ಪಳ್ಳತಡ್ಕ, ಮೀಯಪದವು ವಿದ್ಯಾವರ್ಧಕ ಹೈಸ್ಕೂಲಿನ ಅಧ್ಯಾಪಕ ರಾಜಾರಾಮ್ ರಾವ್ ಉಪಸ್ಥಿತರಿದ್ದರು. ಈ ವೇಳೆ ನಿವೃತ್ತ ಮುಖ್ಯೋಪಾಧ್ಯಾಯ ಶಂಕರ ನಾರಾಯಣ ಭಟ್ ಕುಡಿಯಮೂಲೆ, ದೈಗೋಳಿ ಶ್ರೀ ಸಾಯಿ ಸೇವಾ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಡಾ. ಉದಯಕುಮಾರ್ ಇವರನ್ನು ಶಾಲು ಹೊದಿಸಿ ಸ್ಮರಣಿಕೆ ಫಲಪುಷ್ಪಗಳನ್ನಿತ್ತು ಸನ್ಮಾನಿಸಲಾಯಿತು. ಕುಮಾರಿಯರಾದ ಕೃಪ ಸುಮನ ಸಜಲಿ ಧನ್ಯಶ್ರೀ ಪ್ರಾರ್ಥನೆ ಹಾಡಿದರು. ಮೀಯಪದವು ವಿದ್ಯಾವರ್ಧಕ ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ಅಧ್ಯಾಪಕ ಅರವಿಂದಾಕ್ಷ ಭಂಡಾರಿ ಸ್ವಾಗತಿಸಿ, ಕು.ವರ್ಷಿತಾ ಶೆಟ್ಟಿ ಬೆಜ್ಜಂಗಳ ಗತ ವರ್ಷದ ವರದಿ ವಾಚಿಸಿದರು. ರಾಜಾರಾಮ ರಾವ್ ಅಭಿನಂದನಾ ಮಾತುಗಳನ್ನಾಡಿದರು. ಪುಷ್ಪರಾಜ ಶೆಟ್ಟಿ ತಲೇಕಳ ವಂದಿಸಿದರು. ಬಳಿಕ ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಆರ್ಯಭಟ ಪ್ರಶಸ್ತಿ ಪುರಸ್ಕøತ ಪುತ್ತೂರು ಜಗದೀಶ ಆಚಾರ್ಯ ಬಳಗದವರಿಂದ ಸಂಗೀತ ಗಾನ ವೈಭವ, ನಮ್ಮ ಟಿ.ವಿ ಬಲೇ ತೆಲಿಪಾಲೆ ವಿಜೇತ ಕಲರ್ಸ್ ಸೂಪರ್ ಮಜಾ ಭಾರತ ಖ್ಯಾತಿಯ ಮಸ್ಕಿರಿ ಕುಡ್ಲ ಇವರಿಂದ ತೆಲಿಕೆ ಬಂಜಿ ನಿಲಿಕೆ ಹಾಸ್ಯ ಪ್ರಹಸನ ನಡೆಯಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries