HEALTH TIPS

ಗಡಿನಾಡ ಜಾನಪದ ಮೇಳ ಮತ್ತು ತುಳು ಕಾವ್ಯಯಾನ ಇಂದು ಕಾಯರ್ಕಟ್ಟೆಯಲ್ಲಿ

       ಉಪ್ಪಳ: ಕರ್ನಾಟಕ ಜಾನಪದ ಪರಿಷತ್ತು ಕೇರಳ ಗಡಿನಾಡ ಘಟಕ ಮತ್ತು ತುಳು ವಲ್ರ್ಡ್ ಮಂಗಳೂರು ಜಂಟಿ ಆಶ್ರಯದಲ್ಲಿ ಗಡಿನಾಡ ಜಾನಪದ ಮೇಳ ಮತ್ತು ತುಳು ಕಾವ್ಯಯಾನ ಕಾರ್ಯಕ್ರಮ ಇಂದು(ಜ.4) ಬೆಳಿಗ್ಗೆ 9 ರಿಂದ ಪೈವಳಿಕೆ ಸಮೀಪದ ಕಾಯರ್ಕಟ್ಟೆಯ ಕುಲಾಲ ಮಂದಿರದಲ್ಲಿ ಆಯೋಜಿಸಲಾಗಿದೆ.
     ಸಮಾರಂಭದ ಆರಂಭದಲ್ಲಿ ನಾಡು-ನುಡಿಯ ಪರಂಪರೆಯನ್ನು ಸಾರುವ ಜಾನಪದ ಶೋಭಾಯಾತ್ರೆ ಕಾಯರ್ಕಟ್ಟೆ ಲಾಲ್‍ಬಾಗ್ ಪರಿಸರದಿಂದ ಹೊರಡಲಿದ್ದು, ಪೈವಳಿಕೆ ಗ್ರಾ.ಪಂ.ಅಧ್ಯಕ್ಷೆ ಭಾರತಿ ಜೆ.ಶೆಟ್ಟಿ ಚಾಲನೆ ನೀಡುವರು. 10.30ಕ್ಕೆ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಕರ್ನಾಟಕ ಜಾನಪದ ಪರಿಷತ್ತು ಅಧ್ಯಕ್ಷ ಟಿ.ತಿಮ್ಮೇ ಗೌಡ ಅಧ್ಯಕ್ಷತೆ ವಹಿಸುವರು. ಕರ್ನಾಟಕ ರಾಜ್ಯ ಉಪಮುಖ್ಯಮಂತ್ರಿ ಗೋವಿಂದ ಎಂ.ಕಾರಜೋಳ ಉದ್ಘಾಟಿಸುವರು.
   ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲ್‍ಸಾರ್, ಕಸಾಪ ದ.ಕ.ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಉದ್ಯಮಿ ತಲ್ಲೂರು ಶಿವರಾಮ ಶೆಟ್ಟಿ, ಪೈವಳಿಕೆ ಅರಮನೆಯ ರಂಗತ್ರೈ ಬಲ್ಲಾಳ ಅರಸರು, ಗ್ರಾ.ಪಂ.ಸದಸ್ಯೆ ರಝಿಯಾ ರಝಾಕ್ ಚಿಪ್ಪಾರು, ಸದಸ್ಯ ಹರೀಶ್ ಬೊಟ್ಟಾರಿ, ಅಣ್ಣತಮ್ಮ ಜೋಡುಕೆರೆ ಕಂಬಳ ಸಮಿತಿ ಪೈವಳಿಕೆಯ ಅಧ್ಯಕ್ಷ ಅಜಿತ್ ಎಂ.ಸಿ.ಲಾಲ್‍ಬಾಗ್, ಪೈವಳಿಕೆ ಸೇವಾ ಸಹಕಾರಿ ಬ್ಯಾಂಕ್‍ನ ಅಝೀಜ್ ಕಳಾಯಿ, ಗಡಿನಾಡ ಸಾಹಿತ್ಯ ಸಾಂಸ್ಕøತಿಕ ಅಕಾಡೆಮಿ ಅಧ್ಯಕ್ಷ ಪ್ರಭಾಕರ ಕಲ್ಲೂರಾಯ ಬನದಗದ್ದೆ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು. ಸಮಾರಂಭದಲ್ಲಿ ಡಾ.ಮೂಡಂಬೈಲು ರವಿ ಶೆಟ್ಟಿ, ಲಯನ್ ಗೋಪಾಲ ಸಿ.ಬಂಗೇರ, ಜ್ಯೋತಿಷ್ಯರತ್ನ ಅಶೋಕ ಪುರೋಹಿತ ಅವರಿಗೆ  ಕರ್ನಾಟಕ ಸರ್ಕಾರದ ಮುಜರಾಯಿ, ಮೀನುಗಾರಿಕಾ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಗಡಿನಾಡ ಸಿರಿ ಪ್ರಶಸ್ತಿ ಪ್ರದಾನ ಮಾಡುವರು. ಈ ಸಂದರ್ಭ ಮಂಜೇಶ್ವರ ಶಾಸಕ ಎಂ.ಸಿ.ಖಮರುದ್ದೀನ್ ಅವರು ತುಳುವ ವಾಲ್ಮೀಕಿ ವಾಚನ-ಪ್ರವಚನ ಸರಣಿ ಅಭಿಯಾನಕ್ಕೆ ಚಾಲನೆ ನೀಡುವರು. ಶಿವಪ್ರಸಾದ್ ಎಡಪದವು ಹಾಗೂ ಶಾಲಿನಿ ಹೆಬ್ಬಾರ್ ಕಾವ್ಯ ವಾಚನದಲ್ಲಿ ಮತ್ತು ಡಾ.ದಿನಕರ ಪಚ್ಚನಾಡಿ ಅವರು ಪ್ರವಚನದಲ್ಲಿ ಅಭಿಯಾನ ಪ್ರಾರಂಭಗೊಳ್ಳುವುದು. ಸಭಾ ಕಾರ್ಯಕ್ರಮದ ಬಳಿಕ ಗೌರಿ ಗಣೇಶ ಭಜನಾ ಸಂಘ ಪ್ರತಾಪನಗರ(ಜನಪದ ಕುಣಿತ), ಶ್ರೀದುರ್ಗಾ ಸಪ್ತಸ್ವರ ಸಿಂಗಾರಿ ಮೇಳ ಆವಳ(ಸಿಂಗಾರಿ ಮೇಳ),ಇತರ ತಂಡಗಳಿಂದ ಕಂಸಾಳೆ, ಪೂಜಾ ಕುಣಿತ, ಕುಣಿತ ಭಜನೆ, ಡೊಳ್ಳು ಕುಣಿತ, ಮಂಗಳ ಕಳಿ, ಏಕ ವ್ಯಕ್ತಿ ಯಕ್ಷಗಾನ, ಧಪ್ಪ್ ಮುಟ್ಟ್, ಕೋಲ್ ಕಳಿ, ಕೈಮುಟ್ಟ್ ಪಾಟ್ಟ್, ತಿರುವಾದಿರ ನೃತ್ಯ ಮೊದಲಾದ ಕಲಾ ಪ್ರಕಾರಗಳ ಪ್ರದರ್ಶನ ನಡೆಯಲಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries