ತಿರುವನಂತಪುರ: ವಾರವಿಡೀ ಅಸ್ಥಿರತೆ ಮತ್ತು ಊಹಾಪೆÇೀಹಗಳ ನಂತರ ಕೇರಳ ರಾಜ್ಯಪಾಲ ಅರಿಫ್ ಮೊಹಮ್ಮದ್ ಖಾನ್ ಇಂದು ಬೆಳಿಗ್ಗೆ ಬಜೆಟ್ ಅಧಿವೇಶನ ಆರಂಭಕ್ಕೆ ಮೊದಲು ವಿಧಾನಸಭೆಯಲ್ಲಿ ಸರ್ಕಾರದ ನೀತಿ ನಿರೂಪಣೆಗಳನ್ನು ಪ್ರಕಟಿಸಿದರು.
ಇಂದು ಸದನಕ್ಕೆ ಭಾಷಣ ಮಾಡಲು ಆಗಮಿಸಿದಾಗ ಅವರಿಗೆ ವಿರೋಧ ಪಕ್ಷದ ಸದಸ್ಯರು ಗೋ ಬ್ಯಾಗ್ ಗವರ್ನರ್ ಎಂದು ಬರೆದ ಫಲಕಗಳನ್ನು ಪ್ರದರ್ಶಿಸಿ ಘೋಷಣೆಗಳನ್ನು ಕೂಗುತ್ತಾ ಸ್ವಾಗತ ಕೋರಿದರು. ಅವುಗಳನ್ನು ಲೆಕ್ಕಿಸದೆ ಭದ್ರತೆಗಾರರ ರಕ್ಷಣೆಯೊಂದಿಗೆ ಸ್ಪೀಕರ್ ವೇದಿಕೆಗೆ ಬಂದು ರಾಜ್ಯಪಾಲರು ಭಾಷಣ ಮಾಡಿದರು. ರಾಜ್ಯ ಸರ್ಕಾರದ ಪೌರತ್ವ ತಿದ್ದುಪಡಿ ಕಾಯ್ದೆ ಹೇಳಿಕೆಗಳನ್ನು ಸಹ ಓದಿದರು. ಆದರೆ ತಾವು ರಾಜ್ಯ ಸರ್ಕಾರದ ಸಿಎಎ ವಿರೋಧಿ ನಿಲುವನ್ನು ಬೆಂಬಲಿಸುವುದಿಲ್ಲ ಎಂದು ಸಹ ಭಾಷಣದಲ್ಲಿ ತೋರಿಸಿಕೊಟ್ಟರು.
ಸರ್ಕಾರದ ಯೋಜನಾ ಭಾಷಣದಲ್ಲಿ ಸಿಎಎ ಬಗ್ಗೆ ವಿವಾದಿತ ಹೇಳಿಕೆ ನೀಡುವ ಮುನ್ನ ರಾಜ್ಯಪಾಲರು ತಾವು ಸಿಎಎ ಬಗ್ಗೆ ವಿಭಿನ್ನ ನಿಲುವು ಹೊಂದಿದ್ದರೂ ಮುಖ್ಯ ಮಂತ್ರಿಗಳ ಪರವಾಗಿ ವಿವಾದಿತ ಹೇಳಿಕೆಗಳನ್ನು ಓದುವುದಾಗಿ ಹೇಳಿದರು.
ನಾನೀಗ 18ನೇ ವಾಕ್ಯವನ್ನು ಓದುತ್ತೇನೆ, ಇದು ಸರ್ಕಾರದ ನೀತಿ ನಿರೂಪಣೆ ಕಾರ್ಯಕ್ರಮದ ಭಾಗವಾಗಿರದಿದ್ದರೂ ಸಹ ಮುಖ್ಯಮಂತ್ರಿಗಳ ಪರವಾಗಿ ನಾನಿದನ್ನು ಓದುತ್ತೇನೆ. ಇದು ಸರ್ಕಾರದ ನಿಲುವು ಎಂದು ಸ್ವತಃ ಮುಖ್ಯಮಂತ್ರಿಗಳೇ ಹೇಳಿದ್ದಾರೆ. ಆದರೆ ನಾನು ಇದನ್ನು ವಿರೋಧಿಸುತ್ತೇನೆ, ಆದರೆ ಅವರ ಆಶಯಕ್ಕೆ ಗೌರವ ಕೊಟ್ಟು ನಾನು ಇದನ್ನು ಓದುತ್ತೇನೆ ಎಂದು ರಾಜ್ಯಪಾಲರು ಓದಿದರು.
ಈ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಪ್ರತಿಪಕ್ಷ ಯುಡಿಎಫ್ ಸದನದಲ್ಲಿ ಗುಲ್ಲೆಬ್ಬಿಸಿತು. ಸಿಎಎ ಕಾಯ್ದೆಗೆ ಆರಂಭದಿಂದಲೇ ವಿರೋಧವನ್ನು ಬಹಿರಂಗವಾಗಿವೇ ವ್ಯಕ್ತಪಡಿಸುತ್ತಿದ್ದ ರಾಜ್ಯಪಾಲರು ಇಂದಿಲ್ಲಿ ರಾಜ್ಯ ಸರ್ಕಾರದೊಂದಿಗೆ ಶಾಮೀಲಾಗುವಂತೆ ಸಂಶಯಾಸ್ಪದವಾಗಿ ಸರ್ಕಾರದ ನಿಲುವನ್ನು ಓದಿರುವುದು ಅವಮಾನವಾಗಿದೆ. ಇದು ರಾಜ್ಯದ ಜನತೆಗೆ ಸರ್ಕಾರ ಹಾಗೂ ರಾಜ್ಯಪಾಲರು ಎಸಗಿದ ದ್ರೋಹವೆಂದು ಪ್ರತಿಪಕ್ಷ ನೇತಾರ ರಮೇಶ್ ಚೆನ್ನಿತ್ತಲ ಆರೋಪಿಸಿರುವರು.