ಕಾಸರಗೋಡು: ಭೂಮಸೂದೆ ರಾಜ್ಯದ ಮೊದಲ ಸರ್ಕಾರ ನೀಡಿದ ಐತಿಹಾಸಿಕ ಪರಂಪರೆಯಾಗಿದೆ ಎಂದು ರಾಜ್ಯ ಯೋಜನೆ ಸಮಿತಿ ಮಂಡಳಿ ಸದಸ್ಯ ಡಾ.ರವಿರಾಮನ್ ಅಭಿಪ್ರಾಯಪಟ್ಟರು. ಪುರಭವನದಲ್ಲಿ ಸೋಮವಾರ ನಡೆದ ಜಿಲ್ಲಾ ಮಟ್ಟದ ಭೂಹಕ್ಕು ಪತ್ರ ವಿತರಣೆ ಮೇಳ ಅಂಗವಾಗಿ ಭೂಮಸೂದೆಯ 50ನೇ ವರ್ಷಾಚರಣೆಯ ಸುವರ್ಣ ಮಹೋತ್ಸವ ಸಲುವಾಗಿ ಜಿಲ್ಲಾಡಳಿತೆ ವತಿಯಿಂದ ಜರುಗಿದ 'ಭೂಮಸೂದೆ ಮತ್ತು ಕೇರಳದ ಅಭಿವೃದ್ಧಿ'ಎಂಬ ವಿಚಾರಸಂಕಿರಣದಲ್ಲಿ ಅವರು ಉಪನ್ಯಾಸ ನೀಡಿದರು.
ಮಸೂದೆ ಒಂದು ಪ್ರತ್ಯೇಕ ಕಾಲಾವಧಿಯಲ್ಲಿ ಆರಂಭಗೊಂಡಿದ್ದು, ಇದು ನಿರಂತರ ಪ್ರಕ್ರಿಯೆಯಾಗಿದೆ. ಜಾತಿ-ಅಧಿಕಾರ-ಸ್ವಜನಪಕ್ಷಪಾತಗಳನ್ನು ತೊಡೆದು ಹಾಕಿ ಜನತೆಗೆ ಮಣ್ಣಿನೊಂದಿಗೆ ಜೈವಿಕ ಸಂಬಂಧ ಒದಗಿಸುವ ಕಾರ್ಯವಾಗಿದೆ. ಈ ನಿಟ್ಟಿನಲ್ಲಿ ಭೂಹಕ್ಕು ಪತ್ರ ವಿತರಣೆ ಮೇಳಗಳು ಐತಿಹಾಸಿಕ ಮಹತ್ವ ಪಡೆಯುತ್ತವೆ ಎಂದು ತಿಳಿಸಿದರು.
650 ಒಕ್ಕೂಟ ರೀತಿಗಳು ಹಿಂದೆ ಕೇರಳದಲ್ಲಿ ಜಾರಿಯಲ್ಲಿದ್ದುವು. ಅದರಲ್ಲಿ ಪ್ರಜಾಪ್ರಭುತ್ವ ನೀತಿಗೆ ವಿರುದ್ಧವಾಗಿರುವ ಅಂಶಗಳನ್ನು ಹೊರತುಪಡಿಸಿ ಸಾಮಾಜಿಕ ಕಲ್ಯಾಣ ಮನಗಂಡು ಭೂಮಸೂದೆ ಜಾರಿಗೊಳಿಸಲಾಗಿದೆ. ಅನೇಕ ಮಿತಿಗಳೊಂದಿಗೆ ಜಾರಿಗೊಂಡ ಮೊದಲ ಹಂತದಲ್ಲಿ ಅನೇಕ ಕೊರತೆಗಳಿದ್ದುದು ಸ್ವಾಭಾವಿಕ. ಅವುಗಳನು ಪರಿಹರಿಸಿ ಮುನ್ನಡೆಸಲು ನಂತರದ ಸರ್ಕಾರಗಳು ಪ್ರಯತ್ನ ಮುಂದುವರಿಸಿದೆ. ಒಕ್ಕಲು ಹಕ್ಕು ಸಂಬಂಧ ಸಮಸ್ಯೆಗಳನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಶೀಲಿಸುತ್ತಿದೆ. ಇವನ್ನು ಶೀಘ್ರದಲ್ಲಿ ಪರಿಹರಿಸುವ ನಿಟ್ಟಿನಲ್ಲಿ ಭೂಹಕ್ಕು ಪತ್ರ ವಿತರಣೆ ಮೇಳ ನಡೆಸಲಾಗುತ್ತಿದೆ. ಈ ನಿಟ್ಟಿನಲ್ಲಿ ತೋಟಗಳ ಮಾಲೀಕರಿಗೆ ಅನೇಕ ರಿಯಾಯಿತಿಗಳನ್ನು ಸರ್ಕಾರ ಒದಗಿಸಿದೆ. ಆದರೆ ತೋಟಗಳ ಮಾಲೀಕರು ಕಾರ್ಮಿಕರ ಸಮಸ್ಯೆ ಬಗೆಹರಿಸಲು ಪರಿಣಾಮಕಾರಿ ಕ್ರಮಕೈಗೊಳ್ಳುತ್ತಿಲ್ಲ.ಈ ಸಮಸ್ಯೆ ಪರಿಹಾರಕ್ಕೆ ರಾಜ್ಯಸರ್ಕಾರ ನೂತನ ತೋಟಗಾರಿಕೆ ನೀತಿ ಶೀಘ್ರದಲ್ಲಿ ಘೋಷಿಸಲಿದೆ. ಇದರ ಕರಡು ರೂಪುರೇಷೆ ಸಿದ್ಧವಾಗುತ್ತಿದೆ ಎಂದು ತಿಳಿಸಿದರು.