ಕಾಸರಗೋಡು: ವಿಶೇಷ ಚೇತನರನ್ನು ಸ್ವಾವಲಂಬಿಗಳಾಗಿಸುವ ನಿಟ್ಟಿನಲ್ಲಿ ವಿಶೇಷ ಚೇತನರ ತರಬೇತಿ ಕೇಂದ್ರ ನಿರ್ಮಾಣಗೊಂಡಿದ್ದು, ಶೀಘ್ರದಲ್ಲೇ ಉದ್ಘಾಟನೆಗೊಳ್ಳಲಿದೆ.
ಜಿಲ್ಲಾ ಪಂಚಾಯತ್ ಮತ್ತು ಪರಪ್ಪ ಬ್ಲೋಕ್ ಪಂಚಾಯತ್ ಜಂಟಿ ವತಿಯಿಂದ ಪನತ್ತಡಿಯಲ್ಲಿ ಈ ಕೇಂದ್ರದ ನಿರ್ಮಾಣ ನಡೆಸಲಾಗಿದೆ. ವಿಶೇಷ ಚೇತನರನ್ನು ಸ್ವಾವಲಂಬಿಗಳಾಗಿಸುವ ಯೋಜನೆ ಅನ್ವಯ ಬಟ್ಟೆ ಚೀಲ, ಕಾಗದದ ಚೀಲ, ಕಾದದ ಪೆನ್ ಇತ್ಯಾದಿ ನಿರ್ಮಾಣದ ತರಬೇತು ನೀಡಲಾಗುವುದು. ಪರಪ್ಪ ಬ್ಲೋಕ್ ಈ ಕೇಂದ್ರದ ಉಸ್ತುವಾರಿ ಹೊಂದಿದೆ. ಮೊದಲ ಹಂತದಲ್ಲಿ 21 ಮಂದಿಗೆ ತರಬೇತು ನೀಡಲಾಗುವುದು.