ಬದಿಯಡ್ಕ: ಕೇರಳ ರಾಜ್ಯ ಸ್ಪೋಟ್ರ್ಸ್ ಕೌನ್ಸಿಲ್ ವತಿಯಿಂದ ಕಣ್ಣೂರು ಪೊಲೀಸ್ ಮೈದಾನದಲ್ಲಿ ನಡೆದ ದಕ್ಷಿಣ ವಲಯ ಮಟ್ಟದ ಅಥ್ಲೆಟಿಕ್ ಮೀಟ್‍ನಲ್ಲಿ ಜೂನಿಯರ್ ಮಟ್ಟದ 50,100,800 ಶಟಲ್ ರನ್ ವಿಭಾಗದಲ್ಲಿ ಪೆರಡಾಲ ನವಜೀವನ ಹೈಯರ್ ಸೆಕೆಂಡರಿ ಶಾಲೆಯ 10ನೇ ತರಗತಿಯ ವಿದ್ಯಾರ್ಥಿ ವಿನೀತ್ ರಾಜ್ ಪ್ರಥಮ ಸ್ಥಾನವನ್ನು ಪಡೆದಿರುತ್ತಾನೆ. ಈತನ ಸಹೋದರ ಇದೇ ಶಾಲೆಯ 7ನೇ ತರಗತಿಯ ತಿಲಕ್ ರಾಜ್ 50,100,600 ಶಟಲ್ ರನ್ ಹಾಗೂ ಬಾಸ್ಕೆಟ್ ಬಾಲ್ ಎಸೆತದಲ್ಲಿ ಪ್ರಥಮ ಸ್ಥಾನ ಪಡೆದು ಪ್ರತಿಭೆಯನ್ನು ಮೆರೆದಿದ್ದಾರೆ. ಈ ಮೂಲಕ ಸೆಂಟ್ರಲೈಸ್ಡ್ ಸ್ಪೋಟ್ರ್ಸ್ ಹೋಸ್ಟೆಲ್ ಆಯ್ಕೆಗೆ ಅರ್ಹರಾಗಿರುತ್ತಾರೆ. ವಿದ್ಯಾರ್ಥಿಗಳ ಅಪ್ರತಿಮ ಸಾಧನೆಗೆ ಶಾಲಾ ಆಡಳಿತ ಮಂಡಳಿ, ಮುಖ್ಯೋಪಾಧ್ಯಾಯಿನಿ, ರಕ್ಷಕ ಶಿಕ್ಷಕ ಸಂಘ ಅಭಿನಂದನೆಯನ್ನು ಸಲ್ಲಿಸಿದೆ. ಈ ಸಹೋದರರು ಪೈವಳಿಕೆ ಏದಾರು ರಾಘವ ಹಾಗೂ ಭಾಗೀರಥಿ ದಂಪತಿಗಳ ಪುತ್ರರು.
ಕ್ರೀಡೆಯಲ್ಲಿ ಜಿಲ್ಲೆಗೆ ಕೀರ್ತಿ ತಂದ ನವಜೀವನ ಶಾಲೆಯ ಸಹೋದರ ವಿದ್ಯಾರ್ಥಿಗಳು
0
ಜನವರಿ 28, 2020