HEALTH TIPS

ಯಕ್ಷಗಾನ ಪರಂಪರೆಯ ಉಳಿವಿಗೆ ಪ್ರೇಕ್ಷಕರ ಪಾತ್ರವೂ ಹಿರಿದು-ಜಬ್ಬಾರ್ ಸಮೋ


          ಕುಂಬಳೆ: ಕಾವ್ಯ, ಕಲೆಗಳು ಅಭಿವ್ಯಕ್ತಿಯ ಮಾಧ್ಯಮಗಳಾಗಿವೆ. ಯಕ್ಷಗಾನವು ಸಾರ್ವಭೌಮ ಕಲೆಯಾಗಿ ಬದಲಾಗಿದ್ದು, ತನ್ನ ವಾಚಿಕಾಭಿನಯದ ಮೂಲಕ ಇತರ ಕಲೆಗಳಿಗಿಂತ ವಿಭಿನ್ನವಾಗಿ ಮಣ್ಣಿನ ಸಾಂಸ್ಕøತಿಕ ಶ್ರೀಮಂತಿಕೆಯ ದ್ಯೋತಕ ಎಂದು ಖ್ಯಾತ ಯಕ್ಷಗಾನ ಅರ್ಥಧಾರಿ, ಕರ್ನಾಟಕ ಯಕ್ಷಗಾನ ಅಕಾಡೆಮಿ ಮಾಜಿ ಸದಸ್ಯ ಜಬ್ಬಾರ್ ಸಮೋ ಸಂಪಾಜೆ ಅವರು ತಿಳಿಸಿದರು.
      ಸೂರಂಬೈಲಿನ ಸ್ವಸ್ತಿಶ್ರೀ ಕಲಾ ಪ್ರತಿಷ್ಠಾನ ಎಡನಾಡು ಮತ್ತು ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ಇವುಗಳ ಜಂಟಿ ಆಶ್ರಯದಲ್ಲಿ ಸೂರಂಬೈಲು ಶ್ರೀಗಣೇಶ ಕಲಾಮಂದಿರದಲ್ಲಿ ಆಯೋಜಿಸಲಾದ ಎರಡು ದಿನಗಳ ವಿಶೇಷ ಕಾರ್ಯಕ್ರಮ "ಹಿರಿಯರ ನೆನಪು ಮತ್ತು ಯಕ್ಷಗಾನ ಪೂರ್ವರಂಗ ಅಧ್ಯಯನ ಶಿಬಿರ"ದ ಎರಡನೇ ದಿನವಾದ ಭಾನುವಾರ ನಡೆದ ಮಾತಿನ ಮಂಟಪ-ಯಕ್ಷಕವಿ ಕಾವ್ಯ ವಿಚಾರ ಸಂವಾದದಲ್ಲಿ ಅವರು ಸಮನ್ವಯಕಾರರಾಗಿ ಉಪಸ್ಥಿತರಿದ್ದು ಮಾತನಾಡಿದರು.
      ಸಂಕಲ್ಪ, ಚಿಂತನ, ಕ್ರಿಯೆಗಳ ಬಗ್ಗೆ ಯಕ್ಷಗಾನ ಪ್ರಸಂಗ ಸಾಹಿತ್ಯ ಅಪೂರ್ವ ದೃಷ್ಟಿ ಹೊಂದಿದೆ. ತನ್ನ ಮಿತಿಯೊಳಗೆ ಪ್ರಸಂಗಗಳು ಕಥಾನಕಗಳ ಮೂಲಕ ಪ್ರೇಕ್ಷಕನ ಮನತಣಿಸುವಲ್ಲಿ, ಮನಸ್ಸಿನ ಭಾವಪ್ರಪಂಚವನ್ನು ಸನ್ನಡೆತೆಯೆಡೆಗೆ ಪ್ರೇರೇಪಿಸುವಲ್ಲಿ ಅತ್ಯಪೂರ್ವ ಕಾಣ್ಕೆಯೊಂದಿಗೆ ಸಾಗಿಬಂದಿದೆ. ಆದರೆ ವರ್ತಮಾನದ ವಿದ್ಯಮಾನಗಳು ಮೂಲ ಪ್ರಸಂಗಗಳನ್ನು ಬಳಸುವ ರೀತಿ, ಪ್ರೇಕ್ಷಕರು ಸ್ವೀಕರಿಸುವ ಕ್ರಮಗಳಲ್ಲಿ ವಿರೋದಾಭಾಸದಂತೆ ವರ್ತಿಸುತ್ತಿರುವುದು ಕಳವಳಕಾರಿಯಾಗಿದ್ದು, ಅಗತ್ಯದ ಎಚ್ಚರಿಕೆಯ ಕ್ರಮಗಳ ಅಗತ್ಯ ಇದೆ ಎಂದು ಅವರು ತಿಳಿಸಿದರು.
       ಜಿಲ್ಲಾ ವಾರ್ತಾ ಇಲಾಖೆಯ ಕನ್ನಡ ಮಾಹಿತಿ ಸಹಾಯಕ ಅಧಿಕಾರಿ ವಿ.ಜಿ.ಕಾಸರಗೋಡು, ಪತ್ರಕರ್ತ ಪುರುಷೋತ್ತಮ ಭಟ್ ಕೆ.,ಡಾ.ಸತೀಶ್ ಪುಣಿಚಿತ್ತಾಯ ಪೆರ್ಲ ಅವಲೋಕನ ನಡೆಸಿದರು. ಕಣಿಪುರ ಯಕ್ಷಗಾನ ಮಾಸಪತ್ರಿಕೆಯ ಸಂಪಾದಕ ಎಂ.ನಾ.ಚಂಬಲ್ತಿಮಾರ್ ಸಂಯೋಜನೆಗೈದು ಮಾತನಾಡಿದರು. ಕಾರ್ಯಕ್ರಮ ಆಯೋಜಕ, ಸ್ವಸ್ತಿಶ್ರೀ ಕಲಾ ಪ್ರತಿಷ್ಠಾನದ ಅಧ್ಯಕ್ಷ ದಿವಾಣ ಶಿವಶಂಕರ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.
    ಸಂವಾದ ಬಳಿಕ ದಿವಾಣ ಶಿವಶಂಕರ ಭಟ್ ಅವರ ನಿರ್ದೇಶನದಲ್ಲಿ ಕರ್ಣಭೇದನ ಪ್ರಸಂಗದ ಯಕ್ಷಗಾನ ಕೂಟ ನಡೆಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ಸಚಿನ್ ಶೆಟ್ಟಿ ಕುದ್ರೆಪ್ಪಾಡಿ, ಚೆಂಡೆ ಮತ್ತು ಮದ್ದಳೆಯಲ್ಲಿ ರಾಜೇಂದ್ರಪ್ರಸಾದ ಪುಂಡಿಕಾೈ ಹಾಗೂ ಶ್ರೀಸ್ಕಂದ ದಿವಾಣ ಭಾಗವಹಿಸಿದರು. ಮುಮ್ಮೇಳದಲ್ಲಿ ನಾರಾಯಣ ಮಣಿಯಾಣಿ ಬೆಳ್ಳಿಗೆ(ಕೃಷ್ಣ), ಬಾಲಕೃಷ್ಣ ಆಚಾರ್ಯ ನೀರ್ಚಾಲು(ಕರ್ಣ), ಪುರುಷೋತ್ತಮ ಭಟ್ ಕೆ.ಪುದುಕೋಳಿ(ಸೂರ್ಯ), ದಿವಾಣ ಶಿವಶಂಕರ ಭಟ್(ಕುಂತಿ) ಪಾತ್ರಗಳನ್ನು ನಿರ್ವಹಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries