ಕುಂಬಳೆ: ರಂಗಚೇತನ ಕಾಸರಗೋಡು ರಂಗತಂಡದ ಈವರ್ಷದ ಮೊದಲ ನಾಟಕವಾದ "ನೆರೆಕರೆ ಎಡ್ಡೆದಿತ್ತ್‍ಂಡ ಎಡ್ಡೆ" ತುಳು ನಾಟಕದ ಮುಹೂರ್ತ ಇತ್ತೀಚೆಗೆ ಪೆರ್ಮುದೆ ಶ್ರೀದುರ್ಗಾಪರಮೇಶ್ವರಿ ಭಜನ ಮಂದಿರದಲ್ಲಿ ನಡೆಯಿತು.
ತಂಡದ ಉಪಾಧ್ಯಕ್ಷ ವಿಜಯಕುಮಾರ್ ಪಾವಳ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶಿವರಾಮ ಕಾಟುಕುಕ್ಕೆ, ಮೆಲ್ವಿನ್, ಪ್ರಸಾದ್ ಮುಗು, ಶಿವಪ್ರಸಾದ್ ಚೆರುಗೋಳಿ, ದೇವಾನಂದ ಮಾಸ್ತರ್, ಸುಜಿತ್ ಮಾಸ್ತರ್ ಚೇವಾರು ಹಾಗೂ ಭಜನ ಮಂದಿರದ ಪದಾಧಿಕಾರಿಗಳು ಉಪಸ್ಥಿತರಿದ್ದರು. ರಂಗ ಚೇತನದ ಕಾರ್ಯದರ್ಶಿ ಅಶೋಕ ಕೊಡ್ಲಮೊಗರು ಸ್ವಾಗತಿಸಿ, ಜೊತೆ ಕಾರ್ಯದರ್ಶಿ ಸದಾಶಿವ ಮಾಸ್ತರ್ ಪೊಯ್ಯೆ ವಂದಿಸಿದರು. ಕಿರಣ್ ಪುತ್ತಿಗೆ ರಚಿಸಿದ, ಸದಾಶಿವ ಮಾಸ್ತರ್ ಪೊಯ್ಯೆ ಅವರ ನಿರ್ದೇಶನದಲ್ಲಿ ಈ ನಾಟಕದ ಮೊದಲ ಪ್ರಯೋಗ ಮಾ.1 ರಂದು ತೊಟ್ಟೆತ್ತೋಡಿಯಲ್ಲಿ ನಡೆಯಲಿದೆ.