ಪೆರ್ಲ:ಎಣ್ಮಕಜೆ ಪಂಚಾಯಿತಿ, ಕುಂಞÂಪ್ಪಾರೆ ನಿವಾಸಿ ಉಮೇಶ್ ಅವರ ಪತ್ನಿ ಪಂಚಾಯಿತಿ ಆಶಾ ಕಾರ್ಯಕರ್ತೆ ಉಷಾ ಎಲುಬಿನ ರೋಗದ ಸಮಸ್ಯೆಯಿಂದ ಬಳಲುತ್ತಿದ್ದು ಚೇರ್ಕಬೆ ಶ್ರೀ ಶಾಸ್ತಾರ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ಟ್ರಸ್ಟ್ ವತಿಯಿಂದ ಶ್ರೀ ದೇವರ ಪ್ರಸಾದ ಹಾಗೂ ಚಿಕಿತ್ಸೆಗೆ 10,000 ರೂ. ಧನ ಸಹಾಯವನ್ನು ನೀಡಲಾಯಿತು.
ಸ್ವರ್ಗ ಶಾಲೆಯ ನಿವೃತ್ತ ಮುಖ್ಯ ಶಿಕ್ಷಕ ಕೆ.ವೆ`.ಸುಬ್ರಹ್ಮಣ್ಯ ಭಟ್ ಸಹಾಯ ಧನ ಹಸ್ತಾಂತರಿಸಿದರು. ಚೇರ್ಕಬೆ ದೇವಳದ ಆಡಳಿತ ಮೊಕ್ತೇಸರರ ಪರವಾಗಿ ಚಂದ್ರಶೇಖರ ಭಟ್ ಕೋಟೆ, ಸೇವಾ ಟ್ರಸ್ಟ್ ಖಜಾಂಚಿ ಪ್ರಸಾದ್ ನೆಲ್ಲಿಕುಂಜೆ, ಟ್ರಸ್ಟ್ ಸದಸ್ಯ ಜಗದೀಶ್ ಸೈಪಂಗಲ್ಲು, ಸೆಟ್ಟಿಬೈಲು ಗಣಪತಿ ಭಟ್ ಉಪಸ್ಥಿತರಿದ್ದರು.