ಕಾಸರಗೋಡು: ಮಹಾತ್ಮಾ ಗಾಂಧಿ ಅವರ 150 ನೇ ಜನ್ಮ ವಾರ್ಷಿಕೋತ್ಸವ ಅಂಗವಾಗಿ ಪಾಕಂ ಮೌಲವಿ ಫೌಂಡೇಷನ್, ನೆಹರೂ ಯುವ ಕೇಂದ್ರ ಜಂಟಿ ವತಿಯಿಂದ ಪ್ರಬಂಧ ಸ್ಪರ್ಧೆ ನಡೆಯಲಿದೆ. " ಗ್ರಾಮಸಭೆಗಳ ಮೂಲಕ ಸುಸ್ಥಿರ ಅಭಿವೃದ್ಧಿ-ಯುವಜನತೆಯ ಪಾಲುದಾರಿಕೆ" ಎಂಬ ವಿಷಯದಲ್ಲಿ ಸ್ಪರ್ಧೆ ಜರುಗಲಿದ್ದು, 18ರಿಂದ 35 ವರ್ಷ ಪ್ರಾಯದ ನಡುವಿನ ವಯೋಮಾನದವರು ಭಾಗವಹಿಸಬಹುದು. 10ಪುಟಗಳಿಗಿಂತ ಕಡಿಮೆಯಿಲ್ಲದ, 15 ಪುಟಗಳಿಗೆ ಮೀರದ ಪ್ರಬಂಧವನ್ನು ಫೆ.5ರ ಮುಂಚಿತವಾಗಿ "ಅಧ್ಯಕ್ಷರು, ಪಾಕಂ ಮೌಲವಿ ಫೌಂಡೇಷನ್, ಪಾಕಂ ಫೌಂಡೇಷನ್ ರಸ್ತೆ, ತಿರುವನತಪುರಂ-695035." ಎಂಬ ವಿಳಾಸಕ್ಕೆ ಸಲ್ಲಿಸಬೇಕು. ದೂರವಾಣಿ ಸಂಖ್ಯೆ: 8330841099.ಆಯ್ದ 10 ಸ್ಪರ್ಧಾಳುಗಳನ್ನು ಸೇರಿಸಿಕೊಂಡು ಪಾಕಂ ಮೌಲವಿ ಫೌಂಡೇಷನ್ ಸಭಾಂಗಣದಲ್ಲಿ ಫೆ.15ರಂದು ಬೆಳಗ್ಗೆ 10 ಗಂಟೆಗೆ ಕಾರ್ಯಾಗಾರ ನಡೆಯಲಿದೆ. ವಿಜೇತರಿಗೆ ನಗದು, ಸ್ಮರಣಿಕೆ, ಪುಸ್ತಕ, ಅರ್ಹತಾಪತ್ರ ಬಹುಮಾನ ರೂಪದಲ್ಲಿ ಲಭಿಸಲಿದೆ.
ಪ್ರಬಂಧ ಸ್ಪರ್ಧೆ
0
ಜನವರಿ 30, 2020