ಕಾಸರಗೋಡು:ಬಳ್ಳಪದವು ವೀಣಾವಾದಿನಿ ಸಂಗೀತ ವಿದ್ಯಾಪೀಠದ ವತಿಯಿಂದ 'ವೇದ ನಾದ ಯೋಗ ತರಂಗಿಣಿ-2020'ಕಾರ್ಯಕ್ರಮ ಜನವರಿ 31ರಿಂದ ಫೆಬ್ರವರಿ 2ರ ವರೆಗೆ ಬಳ್ಳಪದವು ನಾರಾಯಣೀಯಂನಲ್ಲಿ ಜರುಗಲಿದೆ.
31ರಂದು ಬೆಳಗ್ಗೆ ಮಹಾಗಣಪತಿ ಹೋಮ, ಉಪಾ ಯೋಗ ಕಾರ್ಯಕ್ರಮ, ಸಮಾರಂಭದ ಉದ್ಘಾಟನೆ ನಡೆಯುವುದು. ಮಧ್ಯಾಹ್ನ 1.30ಕ್ಕೆ ಮಹಾಶ್ರೀಚಕ್ರ, ವೇದಘೋಷ, ಸೋಪಾನ ಸಂಗೀತ, ನವಾವರಣ ಕೃತಿ ಆಲಾಪನೆ, ಶ್ರೀದೇವೀ ಸಂಕೀರ್ತನೆ, ಸಾಯಂಕಾಲ 7.30ಕ್ಕೆ ನವಾವರಣ ಪೂಜೆ, ಮಂಗಳ ನೀರಾಜನಂ ನಡೆಯುವುದು.
ಫೆ.1ರಂದು ಬೆಳಗ್ಗೆ 9ಕ್ಕೆ ನವಗ್ರಹ ಕೃತಿ ಆಲಾಪನೆ, ವೀಣಾವಾದಿನಿ ವಿದ್ಯಾರ್ಥಿಗಳಿಂದ ಸಂಗೀತ ಕಾರ್ಯಕ್ರಮ'ರಸಿಕಪ್ರಿಯ', ಸಾಯಂಕಾಲ 4ಕ್ಕೆ ವಿದುಷಿ ಅಯನಾ ಪೆರ್ಲ ಅವರಿಂದ ಭರತನಾಟ್ಯ, 5ಕ್ಕೆ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, 7.30ರಿಂದ ಕಲಾಮಂಡಲ ಮೋಹನಕೃಷ್ಣ ಮತ್ತು ಬಳಗದವರಿಂದ ಓತ್ತಂತುಳ್ಳಲ್ ನಡೆಯುವುದು.
2ರಂದು ಬೆಳಗ್ಗೆ 9ಕ್ಕೆ ಪಂಚರತ್ನ ಆಲಾಪನೆ, 10.30ಕ್ಕೆ ವೀಣಾವಾದಿನಿ ಸಂಗೀತ ವಿದ್ಯಾರ್ಥಿಗಳಿಂದ ನಾದೋಪಾಸನ, ಮಧ್ಯಾಹ್ನ 3.30ಕ್ಕೆ ವೀಣಾವಾದಿನಿ ತಂಡದಿಂದ 'ಮುರಳೀರವಂ'ಕಾರ್ಯಕ್ರಮ ನಡೆಯುವುದು. ಸಾಯಂಕಾಲ 4.15ಕ್ಕೆ ವೀಣಾವಾದಿನಿ ಪುರಸ್ಕಾರ ವಿತರಣಾ ಸಮಾರಂಭ ನಡೆಯುವುದು. ಎಡನೀರು ಶ್ರೀ ಕೇಶವಾನಂದ ಭಾರತೀ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡುವರು.ಸಂಸದ ರಾಜ್‍ಮೋಹನ್ ಉಣ್ಣಿತ್ತಾನ್, ಕೇದಾರನಾಥ-ಬದರೀನಾಥ ಜೀರ್ಣೋದ್ಧಾರ ಸಮಿತಿ ಸದಸ್ಯ ಗಂಗಾಧರ ಎಚ್.ಕುಷ್ಟಗಿ ಮುಖ್ಯ ಅತಿಥಿಯಾಗಿ ಭಾಗವಹಿಸುವರು. 6ರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಯುವುದು. ಹಾಡುಗಾರಿಕೆಯಲ್ಲಿ ಸಿಕ್ಕಿಲ್ ಗುರುಚರಣ್ ಚೆನ್ನೈ , ವಯಲಿನ್‍ನಲ್ಲಿ ತಿರುವಿಯ ವಿಜು ಎಸ್. ಆನಂದ್, ಮೃದಂಗದಲ್ಲಿ ಡಾ. ಜಿ.ಬಾಬು ತಿರುವನಂತಪುರ, ಘಟಂನಲ್ಲಿ ಮಂಜೂರ್ ಉಣ್ಣಿಕೃಷ್ಣನ್ ಸಹಕರಿಸುವರು.