ಮುಳ್ಳೇರಿಯ: ಇಂದಿನ ಕಾಲಕ್ಕೆ ಅನುಸಾರವಾಗಿ ಧಾರ್ಮಿಕ ಜಾಗೃತಿ ಹಿಂದೂ ಸಮಾಜದಲ್ಲಿ ಮೂಡಿಸಬೇಕಾದದ್ದು ಅತಿ ಅಗತ್ಯವಾಗಿದೆ ಎಂದು ಹಿಂದೂ ಐಕ್ಯವೇದಿ ಜಿಲ್ಲಾ ಕೋಶಾಧಿಕಾರಿ, ಧಾರ್ಮಿಕ ಮುಂದಾಳು ವಾಮನ ಅಚಾರ್ಯ ಬೋವಿಕ್ಕಾನ ಅಭಿಪ್ರಾಯಪಟ್ಟರು.
ಅವರು ಬಂದಡ್ಕ ಮಾನಡ್ಕ ಶ್ರೀ ಅಯ್ಯಪ್ಪ ಕ್ಷೇತ್ರದಲ್ಲಿ ಇತ್ತೀಚೆಗೆ ನಡೆದ ಕ್ಷೇತ್ರದ ವಾರ್ಷಿಕೋತ್ಸವದ ಸಂದರ್ಭದಲ್ಲಿ ನಡೆದ ಧರ್ಮ ಜಾಗೃತಿ ಅನುಷ್ಠಾನ ಎಂಬ ವಿಷಯದಲ್ಲಿ ದಾರ್ಮಿಕ ಉಪನ್ಯಾಸ ನೀಡಿ ಮಾತನಾಡಿದರು.
ಮುಂದಿನ ತಲೆಮಾರಿಗೆ ಧರ್ಮದ ಬಗ್ಗೆ ತಿಳಿ ಹೇಳಿ ಅವರಿಗೆ ಪಠ್ಯ ಪುಸ್ತಕದ ಜೊತೆ ಪುರಾಣ ಗ್ರಂಥಗಳನ್ನು ಪರಿಚಯಿಸುವುದು ನಮ್ಮ ಆದ್ಯ ಕರ್ತವ್ಯವಾಗಿದೆ ಎಂದರು. ದೇವಸ್ಥಾನ, ಭಜನಾ ಮಂದಿರಗಳಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಹಾಗೆ ಕ್ಷೇತ್ರ ಸಮಿತಿಗಳು ಕಾರ್ಯಪ್ರವೃತರಾಗಬೇಕೇಂದು ಈ ಸಂದರ್ಭದಲ್ಲಿ ತಿಳಿಸಿದರು.
ದಿವಾಕರನ್ ಅವರ ಅಧ್ಯಕ್ಷತೆಯಲ್ಲಿ ಜರಗಿದ ಸಭೆಯಲ್ಲಿ ಮಧುಸೂದನ ಶಿಬರೂರಾಯ ಉಪಸ್ಥಿತರಿದ್ದರು. ಕಾರ್ಯಕ್ರಮ ಸಮಿತಿಯ ಅಧ್ಯಕ್ಷ ನಾರಾಯಣನ್ ನಾಯರ್ ಸ್ವಾಗತಿಸಿ, ವಂದಿಸಿದರು.