ಉಪ್ಪಳ : ಕುಬಣೂರು ಶ್ರೀ ಶಾಸ್ತಾವೇಶ್ವರ ದೇವಸ್ಥಾನದ ವಾರ್ಷಿಕ ಶತರುದ್ರಾಭಿಷೇಕ, ಬಲಿವಾಡು ಕೂಟ ಹಾಗೂ ರಂಗಪೂಜೆಯು ಫೆಬ್ರವರಿ 10 ರಂದು ವಿವಿಧ ವೈದಿಕ ಧಾರ್ಮಿಕ ಕಾರ್ಯಕ್ರಮಗಳಿಂದಿಗೆ ಜರಗಲಿದೆ.
ಸಮಾರಂಭದ ಆಮಂತ್ರಣ ಪತ್ರಿಕೆಯನ್ನು ಇತ್ತೀಚೆಗೆ ಶ್ರೀ ಕ್ಷೇತ್ರದಲ್ಲಿ ಸೇವಾ ಸಮಿತಿಯ ಗೌರವ ಸಲಹೆಗಾರ ಕುಬಣೂರು ಅಶೋಕ ಕುಮಾರ್ ಹೊಳ್ಳ ಬಿಡುಗಡೆಗೊಳಿಸಿದರು.
ಈ ಸಂದರ್ಭ ಶ್ರೀ ಕ್ಷೇತ್ರದ ಮೊಕ್ತೇಸರ ಶಂಕರನಾರಾಯಣ ಕುಬಣೂರಾಯ, ಹರಿನಾಥ ಭಂಡಾರಿ, ದುಗ್ಗಪ್ಪ ಶೆಟ್ಟಿ ತಿಂಬರ ಸೇವಾ ಸಮಿತಿ ಅಧ್ಯಕ್ಷ ರಮೇಶ್ ಆಳ್ವ ತಿಂಬರ ಮತ್ತು ಮಹಿಳಾ ಸಮಿತಿಯ ಅಧ್ಯಕ್ಷೆ ರೇಖಾ ರಾಮಚಂದ್ರ ಬಲ್ಲಾಳ್ ಉಪಸ್ಥಿತರಿದ್ದರು. ಉತ್ಸವ ಸಮಿತಿ ಅಧ್ಯಕ್ಷ ವಸಂತ ಕುಮಾರ್ ಮಯ್ಯ ತಿಂಬರ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಗುರುಪ್ರಸಾದ ಹೊಳ್ಳ ತಿಂಬರ ವಂದಿಸಿದರು. . ಸತೀಶ ಶೆಟ್ಟಿ ಒಡ್ಡಂಬೆಟ್ಟು ಗುತ್ತು ಕಾರ್ಯಕ್ರಮ ನಿರೂಪಿಸಿದರು.