ಕಾಸರಗೋಡು: ಕಾಸರಗೋಡು ನಗರಸಭೆ ಲೈಫ್ ಫಲಾನುಭವಿಗಳ ಸಂಗಮಕ್ಕೆ ಆಗಮಿಸಿದವರ ಮುಖದಲ್ಲಿ ತುಂಬು ನಗು ಕಂಡುಬಂದಿತ್ತು. ಬದುಕು ಸಾರ್ಥಕವಾದ ಮತ್ತು ಅದುಮಿ ಹಿಡಿದಿದ್ದ ಕನಸು ನನಸಾದ ನೆಮ್ಮದಿ ಇವರಿಗೆ ಈ ಸಂತೋಷವನ್ನು ತಂದಿತ್ತಿತ್ತು.
ಕಾಸರಗೋಡು ನಗರಸಭೆಯಲಲಿ ಲೈಫ್ ಯೋಜನೆ ಮೂಲಕ ನಿರಾಣ ಪೂತಿಗೊಂಡ 309 ಕುಟುಂಬಗಳ ಸಂಗಮ ಪುರಭವನದಲ್ಲಿ ನಡೆಯಿತು. ಅದಾಲತ್ ನಲ್ಲಿ ನೋಂದಣಿ ನಡೆಸಿದ ನಂತರ ವಿವಿಧ ಇಲಖೆಗಳು ಜನತೆಗಾಗಿ ಸಿದ್ಧಪಡಿಸಿದ ಆಯಾ ಸ್ಟಾಲ್ ಗಳಲ್ಲಿ ಜನಸಹಭಾಗಿತ್ವ ಕಂಡುಬಂದಿತ್ತು. ಪಿ.ಎಂ.ಎ.ವೈ., ಕೃಷಿ, ಪಿ.ಆರ್.ಡಿ., ಸಿವಿಲ್ ಸಪ್ಲೈಸ್, ಕೆ.ಎಸ್.ಇ.ಬಿ., ಉದ್ದಿಮೆ, ಮೀಣುಗಾರಿಕೆ, ಕುಟುಂಬಶ್ರೀ, ಎಸ್.ಎಸ್.ಟಿ., ಶುಚಿತ್ವ ಮಿಷನ್, ಕಂದಾಯ, ಸರ್ವವಿಧ ಖಾಸಗಿ ಏಜೆನ್ಸಿಗಳು ಸಹಿತ ವಿಭಾಗಗಳು ಸೇವೆಯೊಂದಿಗೆ ಅದಾಲತ್ ಗೆ ಆಗಮಿಸಿದ್ದುವು. ಫಲಾನುಭವಿಗಳು ವಿವಿಧ ಸೇವೆಗಳ ಪ್ರಯೋಜ ಪಡೆದಿದ್ದಾರೆ. ವಿವಿಧ ಯೋಜನೆಗಳಿಗಿರುವ ಆನ್ ಲೈನ್ ಅರ್ಜಿ ಅಕ್ಷಯ ಸೌಲಭ್ಯ ಇತ್ಯಾದಿಗಳೂ ಇದ್ದುವು.
ಫಲಾನುಭವಿಗಳ ಸಂಗಮವನ್ನು ಶಾಸಕ ಎನ್.ಎ.ನೆಲ್ಲಿಕುನ್ನು ಉದ್ಘಾಟಿಸಿದರು. ನಗರಸಭೆ ಅಧ್ಯಕ್ಷೆ ಬಿಫಾತಿಮಾ ಇಬ್ರಾಹಿಂ ಅಧ್ಯಕ್ಷತೆ ವಹಿಸಿದ್ದರು. ಹರಿತ ಕೇರಳಂ ಮಿಷನ್ ಜಿಲ್ಲ ಸಂಚಾಲಕ ಪಿ.ಎಂ.ಸುಬ್ರಹ್ಮಣ್ಯನ್, ನಗರಸಭೆ ಕಾರ್ಯದರ್ಶಿ ಎಸ್.ಬಿಜು, ಸ್ಥಾಯೀ ಸಮಿತಿ ಅಧ್ಯಕ್ಷರಾದ ನೈಮೂನ್ನೀಸಾ, ಫರ್ಹಾನಾ ಶಿಹಾಬುದ್ದೀನ್, ಝಮೀನಾ ಮುಜೀಬ್, ಸದಸ್ಯರಾದ ರಾಷಿದ್ ಪೂರಣಂ, ಕೆ.ಜಿ.ಮನೋಹರನ್, ಮಾಜಿ ಸದಸ್ಯರಾದ ಎ.ಎಂ.ಕಡವತ್, ಜಿ.ನಾರಾಯಣನ್ ಮೊದಲಾದವರು ಉಪಸ್ಥಿತರಿದ್ದರು.
ಬಳಿಕ ಸಮಾಜ ಸುರಕ್ಷಾ ಯೋಜನೆ, ಡೈರಿ ಉತ್ಪನ್ನಗಳು ಮತ್ತು ಸೇವೆಗಳು, ಕುಟುಂಬಶ್ರೀ ಕಿರು ಘಟಕಗಳು,ವಿಮುಕ್ತಿ, ಗೃಹ ಶುಚಿತ್ವ, ತ್ಯಾಜ್ಯ ಪರಿಷ್ಕರಣೆ ಎಂಬ ವಿಷಯಗಳಲ್ಲಿ ಪರಿಣತರು ತರಗತಿ ನಡೆಸಿದರು.