ಕಾಸರಗೋಡು: ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ವತಿಯಿಂದ ಪಿ.ಎಸ್.ಸಿ. ಸ್ಪರ್ಧಾ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿರುವ ವಿಶೇಷಚೇತನ ಉದ್ಯೋಗಾರ್ಥಿಗಳಿಗೆ 30 ದಿನಗಳ ಉಚಿತ ಸ್ಪರ್ಧಾ ಪರೀಕ್ಷೆ ತರಬೇತಿ ಆರಂಭಗೊಂಡಿದೆ. ಕೇಂದ್ರದ ಉದ್ಯೋಗ ಶೀಲತಾ ಕೇಂದ್ರ ಸಭಾಂಗಣದಲ್ಲಿ ನಡೆಯುತ್ತಿರುವ ತರಬೇತಿಯನ್ನು ಚೆಂಗಳ ಗ್ರಾಮಪಂಚಾಯತ್ ಅಧ್ಯಕ್ಷೆ ್ವಆಹಿನಾ ಸಲೀಂ ಉದ್ಘಾಟಿಸಿದರು. ಜಿಲ್ಲ ಉದ್ಯೋಗಾಧಿಕಾರಿ ಜಯಶಂಕರ ಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು. ಹೊಸದುರ್ಗ ನಗರ ಉದ್ಯೋಗ ಅಧಿಕಾರಿ ಪಿ.ಟಿ.ಜಯಪ್ರಕಾಶ್, ಇಂಗ್ಲೀಷ್ ಶಿಕ್ಷಕ ಕುಂಞಬ್ದುಲ್ಲ ಮೊದಲಾದವರು ಉಪಸ್ಥಿತರಿದ್ದರು. ಉದ್ಯೋಗಾಧಿಕಾರಿ(ವಿ.ಜಿ.) ಪಿ.ಎಸ್.ನೌಷಾದ್ ಸ್ವಾಗತಿಸಿದರು. ಕಿರಿಯ ಉದ್ಯೋಗಾಧಿಕಾರಿ ಪಿ.ಕೆ.ಅಜೇಷ್ ವಂದಿಸಿದರು.
ಸೀಟುಗಳು ಬರಿದು:
ಈ ತರಬೇತಿಗೆ ಸಂಬಂಧಿಸಿ ಉದ್ಯೋಗಾರ್ಥಿಗಳ ಕೆಲವು ಸೀಟುಗಳು ಬರಿದಾಗಿವೆ. ಆಸಕ್ತ ಅರ್ಹರು ನೇರವಾಗಿ ಕೇಂದ್ರವನ್ನು ಸಂಪರ್ಕಿಸಬಹುದು.