ಕಾಸರಗೋಡು: ದೇಶದಲ್ಲೇ ಅತಿದೊಡ್ಡ ಆರ್ಥಿಕ ಬಿಕ್ಕಟ್ಟು ವಿರುದ್ಧ ಪ್ಯಾಕೇಜ್ ರಾಜ್ಯದಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಹಣಕಾಸು ಸಚಿವ ಥಾಮಸ್ ಐಸಕ್ ಅಭಿಪ್ರಾಯಪಟ್ಟರು.
ನುಳ್ಳಿಪ್ಪಾಡಿಯಲ್ಲಿ ನಡೆದ ರಾಜ್ಯ ಸರಕಾರದ ಕಿಫ್ ಬಿ ಪ್ರದರ್ಶನದ ವೇಳೆ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಆರ್ಥಿಕ ಮುಗಟ್ಟು ದೇಶವನ್ನು ಕಂಗೆಡಿಸುತ್ತಿದ್ದರೆ, ಕೇರಳದಲ್ಲಿ ಮಾದರಿ ರೂಪದ ಪ್ಯಾಕೇಜ್ ಜಾರಿಯಾಗುತ್ತಿದೆ. ದೇಶದ ರಾಜ್ಯಗಳ ಹಣಕಾಸು ಸಂಸ್ಥೆಗಳಲ್ಲಿ ಬಿ.ಬಿ.ರೇಟಿಂಗ್ ಇರುವ ಏಕೈಕ ಸಂಸ್ಥೆ ರಾಜ್ಯದ ಕಿಫ್ ಬಿ ಆಗಿದ್ದು, ವಿವಿಧ ಅಭಿವೃದ್ಧಿ ಯೋಜನೆಗಳಿಗಾಗಿ ಸಂಗ್ರಹಿಸುತ್ತಿರುವ 50 ಸಾವಿರ ಕೋಟಿ ರೂ. ಮತ್ತು ಅದರ ಬಡ್ಡಿ ಹದಿನೈದು ವರ್ಷಗಳಲ್ಲಿ ಮರುಪಾವತಿ ನಡೆಸಲು ಸಾಧ್ಯವಾಗಲಿದೆ ಎಂದವರು ನುಡಿದರು.
ತ್ವರಿತಗತಿಯ ಅಭಿವೃದ್ಧಿ ಬಜೆಟ್ ನಿಂದ ಸಾಧ್ಯವಾಗದೇ ಇರುವ ಹಿನ್ನೆಲೆಯಲ್ಲಿ ಬಾಹ್ಯ ಹಣಕಾಸು ಸಂಸ್ಥೆಗಳಿಂದ ಅಗತ್ಯವಿರುವ ಸಂಪನ್ಮೂಲ ಪಡೆದು ಹಿನ್ನೆಲೆ ಸೌಲಭ್ಯ ಅಭಿವೃಧ್ಧಿ ಪಡಿಸಲಾಗುತ್ತಿದೆ. ಸಾಮಾನ್ಯ ಮುಂಗಡಪತ್ರದಲ್ಲಿ 7 ಸಾವಿರ ಕೋಟಿ ರೂ. ಯೋಜನೆಗಳನ್ನು ರಚಿಸಲಾಗಿದೆ. ಇದೇ ವೇಳೆ ಕಿಫ್ ಬಿ ಮುಂದಿನ ವರ್ಷ 20 ಸಾವಿರ ಕೋಟಿ ರೂ.ನ ಅಭಿವೃದ್ಧಿ ಯೋಜನೆಗಳನ್ನು ರಾಜ್ಯದಲ್ಲಿ ಜಾರಿಗೊಳಿಸಲಿದೆ. 2010ನೇ ರಾಜ್ಯ ಸರಕಾರ 5 ಸಾವಿರ ಕೋಟಿ ರೂ.ನ ಬಿಕ್ಕಟ್ಟು ವಿರುದ್ಧ ಪ್ಯಾಕೇಜ್ ಘೋಷಣೆ ನಡೆಸಿದ ವೇಳೆ ರಿಸರ್ವ್ ಬ್ಯಾಂಕ್ ನ ವಾರ್ಷಿಕ ವರದಿಯಲ್ಲಿ ರಾಜ್ಯ ಸರಕಾರದ ಬಗೆಗಿಬ ವಿಸೇಷ ಶ್ಲಾಘನೆ ನಡೆಸಲಾಗಿತ್ತು. ಇಂದು 50 ಸಾವಿರ ಕೋಟಿ ರೂ.ನ ಯೋಜನೆ ಸರಕಾರ ಜಾರಿಗೊಳಿಸಲಿದೆ. ಆರ್ಥಿಕ ಮುಗ್ಗಟ್ಟು ವೇಳೆ ದೇಶಕ್ಕೆ ಮಾದರಿ ರೂಪದಲ್ಲಿ ರಾಜ್ಯ ಸರಕಾರ ದಾಪುಹೆಜ್ಜೆಯಿರಿಸುತ್ತಿದೆ ಎಂದು ತಿಳಿಸಿದರು.
ಮಲಬಾರ್ ನ ಆರ್ಥಿಕ ಹಿಂದುಳಿಯುವಿಕೆ ಇನ್ನು ಹಳೆಯ ಕಥೆ!:
ಕೇರಳದ ದಕ್ಷಿಣ ಭಾಗದ ಜಿಲ್ಲೆಗಳಿಗೆ ಹೋಲಿಸಿದರೆ ಉತ್ತರದ ಜಿಲೆಗಳು(ಮಲಬಾರ್ ಪ್ರದೇಶ)ಅಭಿವೃದ್ಧಿ ನಡೆಸುವಲ್ಲಿ ಜಾಗದ ಸೌಕರ್ಯ ಬಳಸಬೇಕಾದುದು ಅನಿವಾರ್ಯವಾಗಿದೆ ಎಂದು ಸಚಿನ ಥಾಮಸ್ ಐಸಕ್ ತಿಳಿಸಿದರು. ಕಾಸರಗೋಡು ಮತ್ತು ಕಣ್ಣೂರು ಜಿಲ್ಲೆಗಳಲ್ಲಿ 5 ಸಾವಿರ ಎಕ್ರೆ ಜಾಗ ವಹಿಸಿಕೊಂಡು ಉದ್ಯಮ ಪಾರ್ಕ್ ನಿರ್ಮಿಸುವ ಕ್ರಮ ಕೈಗೊಳ್ಳಲಾಗುತ್ತಿದೆ. ಇದು ಅನುಷ್ಟಾನಗೊಳ್ಳುವ ಮೂಲಕ ಮಲಬಾರ್ ನ ಆರ್ಥಿಕ ಮುಗ್ಗಟ್ಟು ಪರಿಹಾರಗೊಳ್ಳಲಿದೆ. ಅಳಿಕೋಡ್ ಪಾರ್ಕ್, ಕಣ್ಣೂರು ಏರ್ ಪೆÇೀಟ್ರ್ಗಳ ಜೊತೆಗೆ ಹೈಸ್ಪೀಡ್ ರೈಲ್ವೇ, ಜಲಸಾರಿಗೆ, ವಿದ್ಯುತ್ ಟ್ರಾನ್ಸ್ ಗ್ರೀಡ್ ಇತ್ಯಾದಿ ವಲಯಗಳ ಮುಖಚರ್ಯೆ ಬದಲಾಗಲಿದೆ. 440 ಕೆ.ವಿ.ವಿದ್ಯುತ್ ಸಾಮಥ್ರ್ಯದ ಟ್ರಾನ್ಸ್ ಗ್ರೀಡ್ ಜಾರಿಗೊಳ್ಳುವ ಮೂಲಕ ವಲಯದ ವೋಲ್ಟೇಜ್ ಕ್ಷಾಮ, ಪವರ್ ಕಟ್ ಇತ್ಯಾದಿಗಳಿಗೆ ಪರಿಹಾರ ದೊರೆಯಲಿದ್ದು, ಉದ್ಯಮ ಪಾರ್ಕಿಗೂ ಪೂರಕವಾಗಲಿದೆ. ಒಂದು ಪ್ರದೇಶದ ಸಮಗ್ರ ಉದ್ದೇಶದೊಂದಿಗೆ ಕಿಫ್ ಬಿ ಠೇವಣಿ ಸಂಗ್ರಹ ಸಂಗ್ರಹ ನಡೆಸುತ್ತಿದೆ. ಒಂದು ಮಸಾಲಾಬಾಂಡ್ ನಂತೆ ಬಾಂಡ್ ಹೂಡಲೂ, ವಿದೇಶಿ ಮಾರುಕಟ್ಟೆಗಳಿಂದ ಸಾಲ ಪಡೆಯುವ ಅರ್ಹತೆ ಲಭಿಸುವಷ್ಟು ಕಿಫ್ ಬಿ ಮಾರ್ಪಟ್ಟಿದೆ. ಪಾಲಕ್ಕಾಡ್-ಕೊಚ್ಚಿ ಇಡನಾಳಿಯಲ್ಲೂ ಮಲಬಾರ್ ಪ್ರದೇಶಗಳು ಕೇರಳದ ಉದ್ಯಮ ಅಭಿವೃದ್ಧಿಗೆ ಕೇಂದ್ರಗಳಾಗಲಿವೆ ಎಂದು ಅವರು ತಿಳಿಸಿದರು.
ಮಲಬಾರ್ ಪ್ರವಾಸೋದ್ಯಮಕ್ಕೆ ಪ್ರತ್ಯೇಕ ಪರಿಶೀಲನೆ:
ಕಿಫ್ ಬಿ ಮೂಲಕ ಮಲಬಾರ್ ನ ಪ್ರವಾಸೋದ್ಯಮ ಅಭಿವೃದ್ಧಿಗೆ ಪ್ರತ್ಯೇಕ ಪರಿಶೀಲನೆ ನೀಡುವುದಾಗಿ ಸಚಿವ ಥಾಮಸ್ ಐಸಾಕ್ ಹೇಳಿದರು. ವಲಯದ ಸಾಂಸ್ಕøತಿಕ ಪರಂಪರೆಗೆ ಸಂಬಂಧಿಸಿ ಪ್ರವಾಸೋದ್ಯಮ ಯೋಜನೆಗಳನ್ನು ಜಾರಿಗೊಳಿಸಲಾಗುವುದು. ಟಿ.ಎಸ್.ತಿರುಮುಂಬ್ ಸಾಂಸ್ಕೃತಿಕ ಸಮುಚ್ಚಯ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಿರ್ಮಾಣಗೊಳ್ಳಲಿದೆ. ಕೋಟೆಗಳ ಸಹಿತ ಭೌಗೋಳಿಕ ಆಕರ್ಷಣೆ ಹೊಂದಿರುವುದು ಮತ್ತು ಪ್ರಾಚೀನ-ಆದಿವಾಸಿ ಸಂಸ್ಕೃತಿಗಳನ್ನು ಜಗತ್ತಿನ ಮುಂದೆ ತೆರೆದಿಡುವ ವಿಚಾರ ಯೋಜನೆಯಲ್ಲಿರವುದು. ಕಿಫ್ ಬಿ ಮಲಬಾರ್ ನ ಅಭಿವೃದ್ಧಿಯಲ್ಲಿ ದೊಡ್ಡ ಹೆಜ್ಜೆಗಾರಿಕೆಗೆ ಅವಕಶ ಒದಗಿಸಲಿದೆ. 20 ವರ್ಷದ ಮುಂಗಡ ಕಾಣ್ಕೆಯೊಂದಿಗೆ 5 ಸಾವಿರ ಎಕ್ರೆ ಜಾಗ ವಹಿಸಿಕೊಂಡು ನೂತನ ಅಭಿವೃದ್ಧಿ ಯೋಜನೆ ಜಾರಿಗೊಳಿಸಲಾಗುವುದು ಎಂದು ಹಣಕಾಸು ಸಚಿವ ನುಡಿದರು.
ಕೆಲ್-ಭೆಲ್ ಗೆ ಬಜೆಟ್ ನಲ್ಲಿ ನಿಧಿ ಮೀಸಲು:
ಭೆಲ್ ಸಂಸ್ಥೆಯ ಸಮಸ್ಯೆಗಳನ್ನು ಪರಿಹರಸಿ ಮುಂಗಡಪತ್ರದಲ್ಲಿ ನಿಧಿ ಮೀಸಲಿರಿಸಲಾಗುವುದು ಎಂದು ಸಚಿವ ಭರವಸೆ ನೀಡಿದರು. ಕಾಸರಗೋಡು ವೈದ್ಯಕೀಯ ಕಾಲೇಜ್ ನಿರ್ಮಾಣವನ್ನು ಕಿಫ್ ಬಿ ವಹಿಸಲಿದೆ. ಟಿ.ಎಸ್.ತಿರುಮುಂಬ್ ಸಾಂಸ್ಕೃತಿಕ ಕೇಂದ್ರ ಸಾಂಸ್ಕೃತಿಕ ಸಂಕೀರ್ಣ ದ ನಿರ್ಮಾಣ ಮುಂದಿನ ವರ್ಷ ಪೂರ್ಣಗೊಳ್ಳಲಿದೆ. ಕಿಫ್ ಬಿಯ ವಿವಿಧ ಯೋಜನೆಗಳು ಸೂಕ್ತ ಸಮಯಾವಧಿಯಲ್ಲೇ ಪೂರ್ಣಗೊಳ್ಳಲಿದೆ. ಯೋಜನೆಗಳಿಗೆ ಜನಪರ ಮೇಲ್ನೋಟ ಮತ್ತು ಮಾಧ್ಯಮಗಳ ಪಾಲುದಾರಿಕೆ ಲಭಿಸಿದರೆ ಯೋಜನೆಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಪೂರಕವಾಗಲಿದೆ. ನಿರ್ಮಾಣ ಚಟುವಟಿಕೆಗಳನ್ನು ವಹಿಸಿಕೊಂಡಿರುವ ಕರಾರುದಾರರ ಸಮಸ್ಯೆಗಳಿಗೆ ಒಂದೇ ವಾರದಲ್ಲಿ ಪರಿಹಾರ ದೊರೆಯಲಿದೆ ಎಂದು ತಿಳಿಸಿದರು.