HEALTH TIPS

ಅಡೂರು : ಜಾತ್ರೋತ್ಸವ ಸಮಿತಿ ರಚನೆ ಸಭೆ


    ಮುಳ್ಳೇರಿಯ: ಕುಂಬಳೆ ಸೀಮೆಯ ಪ್ರಥಮ ವಂದನೀಯ ಕ್ಷೇತ್ರವೆನಿಸಿದ ಅಡೂರು ಕ್ಷೇತ್ರದಲ್ಲಿ ವರ್ಷಂಪ್ರತಿ ನಡೆದು ಬರುವ ಜಾತ್ರೋತ್ಸವವು ಮಾ.11 ರಿಂದ 20 ರ ವರೆಗೆ ನಡೆಯಲಿದ್ದು, ಇದರ ಅಂಗವಾಗಿ ಜಾತ್ರೋತ್ಸವ ಸಮಿತಿಯನ್ನು ರಚಿಸಲಾಯಿತು.
        ಅಧ್ಯಕ್ಷರಾಗಿ ಅತ್ತನಾಡಿ ರಾಮಚಂದ್ರ ಮಣಿಯಾಣಿ, ಗೌರವಾಧ್ಯಕ್ಷರಾಗಿ ವಸಂತ ಪೈ ಬದಿಯಡ್ಕ, ರಕ್ಷಾಧಿಕಾರಿಯಾಗಿ ಬ್ರಹ್ಮಶ್ರೀ ವಾಸುದೇವ ತಂತ್ರಿ ಕುಂಟಾರು, ಕಾರ್ಯದರ್ಶಿಯಾಗಿ ಕಾಂತಡ್ಕ ಗಂಗಾಧರ ರಾವ್ ಅವರನ್ನು ಆಯ್ಕೆ ಮಾಡಲಾಯಿತು.
      ಸಮಿತಿಗೆ ನಾಲ್ಕು ಮಂದಿ ಉಪಾಧ್ಯಕ್ಷರನ್ನು, ಮೂರು ಮಂದಿ ಜೊತೆ ಕಾರ್ಯದರ್ಶಿಗಳನ್ನು ಆಯ್ಕೆ ಮಾಡಿ ಕಾರ್ಯ ನಿರ್ವಹಣಾಧಿಕಾರಿಯವರನ್ನು ಕೋಶಾಧಿಕಾರಿಯನ್ನಾಗಿ ಗೌರವಿಸಲಾಯಿತು. ಹಣಕಾಸು ಸಮಿತಿ, ಆಹಾರ ಸಮಿತಿ, ಸ್ವಾಗತ ಸಮಿತಿ, ಸಾಂಸ್ಕøತಿಕ ಸಮಿತಿ, ವೈದಿಕ ಸಮಿತಿ, ಪ್ರಚಾರ ಸಮಿತಿ, ವೇದಿಕೆ ಸಮಿತಿ ಹೀಗೆ ಹದಿನಾರು ಉಪಸಮಿತಿಗಳನ್ನು ಹಾಗೂ ಸಮಿತಿಗಳಿಗೆ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳನ್ನು ಆಯ್ಕೆ ಮಾಡಲಾಯಿತು. ವೇದಿಕೆಯಲ್ಲಿ ಪಾರಂಪರಿಕ ಮನೆತನಗಳ ಸದಸ್ಯರು ಉಪಸ್ಥಿತರಿದ್ದು, ಸಹಕರಿಸಿದರು.
      ಸಭೆಯನ್ನುದ್ದೇಶಿಸಿ ಬೆಳ್ಳಿಪ್ಪಾಡಿ ಸದಾಶಿವ ರೈ, ಎ.ಪಿ.ಕುಶಲನ್ ಪರಪ್ಪ, ಬಾಲಕೃಷ್ಣ ಮಾಸ್ತರ್ ಕರ್ನೂರು, ಕೃಷ್ಣಪ್ಪ ಮಾಸ್ತರ್ ಅಡೂರು, ಗಂಗಾಧರ ಮಾಸ್ತರ್ ಮೂಲಡ್ಕ, ಡಾ.ಜನಾರ್ಧನ ರಾವ್ ಅಡೂರು, ಶ್ರೀಪತಿ ರಾವ್ ಗುಂಡಿಮನೆ, ಗಿರಿಧರ ರಾವ್ ಗಂಧದಕಾಡು ಮೊದಲಾದವವರು ಜಾತ್ರೋತ್ಸವದ ಬಗ್ಗೆ ಮಾತನಾಡಿದರು. ಸಭೆಯಲ್ಲಿ ಸಂಜೀವ ಕೊಪ್ಪಳ, ಬಾಲಕೃಷ್ಣ ಮೂಡಿತ್ತಾಯ, ರವಿಶಂಕರ ಚಂದ್ರಂಬೈಲು, ಕೃಷ್ಣನ್ ಅಂಬಟೆಮೂಲೆ, ಕೃಷ್ಣ ಮಣಿಯಾಣಿ ಅಕ್ಕಪ್ಪಾಡಿ, ಪ್ರಕಾಶ್ ನಾಯ್ಕ ಮಂಡೆಬೆಟ್ಟಿ, ರಾಮುಂಞÂ ಅಡೂರು, ಗಂಗಾಧರ ಮಣಿಯಾಣಿ ಹೊಸಗದ್ದೆ ಉಪಸ್ಥಿತರಿದ್ದು, ಸಲಹೆ ಸೂಚನೆ ನೀಡಿದರು.
      ಜಾತ್ರೋತ್ಸವದಲ್ಲಿ ಸಾಂಸ್ಕøತಿಕ ಕಾರ್ಯಕ್ರಮವನ್ನು ನೀಡಲಿಚ್ಛಿಸುವವರು ಜ.14 ರ ಮೊದಲು ತಮ್ಮ ತಮ್ಮ ಸಂಘ ಸಂಸ್ಥೆಗಳ ವಿವರವನ್ನು ಕಾರ್ಯಕ್ರಮದ ವಿವರವನ್ನು ನೀಡಬೇಕೆಂದು ತೀರ್ಮಾನಿಸಲಾಯಿತು.  ಜನವರಿ 14 ರ ಮಕರ ಸಂಕ್ರಮಣದಂದು ಕ್ಷೇತ್ರದಲ್ಲಿ ನಡೆಯಲಿರುವ ಸಾವಿರಕೊಡ ಉತ್ಸವವನ್ನು ವೈಭವದಿಂದ ಆಚರಿಸಲಾಗುವುದೆಂದು ತೀರ್ಮಾನಿಸಲಾಯಿತು.
    ದೇವೈಕ್ಯರಾದ ಮಹಾನ್ ಯತಿ, ಪೇಜಾವರ ಮಠಾಧೀಶ ವಿಶ್ವೇಶ್ವರ ತೀರ್ಥ ಪಾದಂಗಳವರ ಅಗಲುವಿಕೆಗೆ ಸಂತಾಪ ಸೂಚಿಸಲಾಯಿತು. ಕಾರ್ಯದರ್ಶಿ ಕಾಂತಡ್ಕ ಗಂಗಾಧರ ರಾವ್ ಸ್ವಾಗತಿಸಿ, ಕಂದಾಯ ಅಧಿಕಾರಿ ಧನಂಜಯ ವಂದಿಸಿದರು. ಕ್ಷೇತ್ರದ ಪ್ರಬಂಧಕ ಗಂಗಾಧರ ರಾವ್ ಕಾರ್ಯಕ್ರಮ ನಿರೂಪಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries