ಮಂಜೇಶ್ವರ: ಹದಿನೆಂಟು ಪೇಟೆಗಳ ದೇವಾಲಯವೆಂಬ ಖ್ಯಾತಿಯ ಮಂಜೇಶ್ವರದ ಶ್ರೀಮದ್ ಅನಂತೇಶ್ವರ ದೇವಾಲಯದಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ಬುಧವಾರ ಸಂಪನ್ನಗೊಂಡಿತು.
ಡಿ.27 ರಿಂದ ಆರಂಭಗೊಂಡ ಕಿರುಷಷ್ಠಿ ಮಹೋತ್ಸವದ ಅಂಗವಾಗಿ ಪ್ರತಿನಿತ್ಯ ವಿಶೇಷ ಪೂಜೆ, ರಥೋತ್ಸವಗಳು ನೂರಾರು ಮಂದಿ ಭಕ್ತರ ಪಾಲ್ಗೊಳ್ಳುವಿಕೆಯೊಂದಿಗೆ ನೆರವೇರಿತು. ಪಂಚಮಿ ದಿನವಾದ ಮಂಗಳವಾರ ಅಪರಾಹ್ನ ಮಹಾಪೂಜೆ, ಆರತಿ, ಸಮಾರಾಧನೆ, ರಾತ್ರಿ ಮರದ ಲಾಲ್ಕಿ ಉತ್ಸವ, ಕಿರು ರಥೋತ್ಸವ, ವಸಂತಪೂಜೆ ನೆರವೇರಿತು. ಈ ವೇಳೆ ಶ್ರೀನರಸಿಂಹ ಹಾಗೂ ಶ್ರೀಶೇಷದೇವರ ಮರದ ಲಾಲ್ಕಿ ಉತ್ಸವ ವಿಶೇಷ ಆಕರ್ಷಣೆ ನೀಡಿತು.
ಬುಧವಾರ ಅಪರಾಹ್ನ ಮಹಾಪೂಜೆ, ಆರತಿ, ಸಮಾರಾಧನೆ, ಪೂರ್ಣೋತ್ಸವ ನೆರವೇರಿತು. ರಾತ್ರಿ ಲಾಲ್ಕಿ ಉತ್ಸವ, ಕಿರು ರಥೋತ್ಸವ, ವಸಂತ ಪೂಜೆಯೊಂದಿಗೆ ಉತ್ಸವ ಸಮಾರೋಪಗೊಂಡಿತು.