ಬದಿಯಡ್ಕ: ಪ್ರತಿಭಾವಂತ ಹಾಗೂ ಪ್ರಯೋಗಶೀಲ ನೃತ್ಯಪಟುವೆಂದು ಹೆಸರಾಗಿರುವ ದೂರದರ್ಶನ ಕಲಾವಿದೆ ವಿದುಷಿ ಅಯನಾ ಪೆರ್ಲ ಅವರ ವಿಶೇಷ ಭರತನಾಟ್ಯ ಪ್ರದರ್ಶನಗಳು ಇಂದು, ನಾಳೆ ಹಾಗೂ ಶನಿವಾರ (ಫೆ. 1) ಜಿಲ್ಲೆಯ ಎರಡು ಕಡೆಗಳಲ್ಲಿ ಆಯೋಜನೆಗೊಂಡಿದೆ.
ನಾರಂಪಾಡಿಯ ಶ್ರೀ ಉಮಾಮಹೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ ಸಂದರ್ಭದ ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಇಂದು , ಶುಕ್ರವಾರ ಮಧ್ಯಾಹ್ನ 2 ರಿಂದ ದೇವಸ್ಥಾನದ ಸಭಾಭವನದಲ್ಲಿ ಅಯನಾ ಪೆರ್ಲ ಅವರು ಭರತನಾಟ್ಯ ಪ್ರದರ್ಶನ ನೀಡಲಿದ್ದಾರೆ.
ಫೆ. 1 ರಂದು ಶನಿವಾರ, ಬದಿಯಡ್ಕ ಸಮೀಪದ ಬಳ್ಳಪದವು ಸಂಗೀತ ಶಾಲೆ ನಾರಾಯಣೀಯಂನ ವಾರ್ಷಿಕೋತ್ಸವದಲ್ಲಿ ಸಂಜೆ 4 ರಿಂದ ವಿಶೇಷ ಭರತನಾಟ್ಯ ಪ್ರದರ್ಶನ ಆಯೋಜನೆಗೊಂಡಿದೆ.