ಮಂಜೇಶ್ವರ ಶ್ರೀಕಟೀಲು ದುರ್ಗಾಪರಮೇಶ್ವರಿ ದೇವಾಲಯದಲ್ಲಿ ನಡೆಯುತ್ತಿರುವ ಬ್ರಹ್ಮಕಲಶೋತ್ಸವದ ಹಿನ್ನೆಲೆಯಲ್ಲಿ ಮಂಜೇಶ್ವರ ಉದ್ಯಾವರದ ಅರಸು ಶ್ರೀಮಂಜಿಷ್ಣಾರು ದೈವ ಕ್ಷೇತ್ರದ ಪರಿಸರದಿಂದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ ಮಂಗಳವಾರ ಸಂಜೆ ಕಟೀಲಿಗೆ ಹೊರಟಿತು.
ಉದ್ಯಾವರ ಮಾಡ ಅರಸು ಮಂಜಿಷ್ಣಾರು ದೈವಗಳ ಪಾತ್ರಿ ರಾಜಾ ಬೆಳ್ಚಪ್ಪಾಡ ಅವರು ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಕೊಂಡೆವೂರು ಶ್ರೀನಿತ್ಯಾನಂದ ಯೋಗಾಶ್ರಮದ ಶ್ರೀಯೋಗಾನಂದ ಸರಸ್ವತೀ ಸ್ವಾಮೀಜಿ ಮೆರವಣಿಗೆಗೆ ಚಾಲನೆ ನೀಡಿದರು. ಪ್ರಮುಖರಾದ ಶ್ರೀಕೃಷ್ಣ ಶಿವಕೃಪಾ ಕುಂಜತ್ತೂರು, ಸಂಜೀವ ಶೆಟ್ಟಿ ಮಾಡ, ತಿಮ್ಮಪ್ಪ ಕಾಂಜವ, ಹರೀಶ್ ಶೆಟ್ಟಿ ಮಾಡ, ಮೋಹನ್ ಶೆಟ್ಟಿ, ಚಂದ್ರಹಾಸ ಪೂಜಾರಿ ಮುಡಿಮಾರ್, ರವಿ ಮುಡಿಮಾರ್, ನಾರಾಯಣ ನಾಯ್ಕ್ ನಡುಹಿತ್ಲು ಕುಳೂರು ಸಹಿತ ಅನೇಕರು ಉಪಸ್ಥಿತರಿದ್ದರು. ಹೊರೆಕಾಣಿಕೆಯಲ್ಲಿ ಕೊಂಡೆವೂರು ಶ್ರೀನಿತ್ಯಾನಂದ ಯೋಗಾಶ್ರಮ, ಚಿಗುರುಪಾದೆ ಶ್ರೀಮಹಾಲಿಂಗೇರ್ಶವರ ದೇವಸ್ಥಾನ, ಸಂತಡ್ಕ ಶ್ರೀಅರಸು ಸಂಕಲ ದೈವಸ್ಥಾನ, ಶಿರಿಯ ಶ್ರೀಶಂಕರನಾರಾಯಣ ದೇವಸ್ಥಾನ, ಪಚ್ಲಂಪಾರೆ ಶ್ರೀಉಮಾಮಹೇಶ್ವರಿ ಭಜನಾ ಮಂದಿರ, ಉಪ್ಪಳ ಶ್ರೀಭಗವತೀ ಕ್ಷೇತ್ರ, ಮುಳಿಂಜ ಶ್ರೀಮಹಾಲಿಂಗೇಶ್ವರ ದೇವಸ್ಥಾನ, ತೂಮಿನಾಡು ಶ್ರೀಮಹಾಕಾಳಿ ಭಜನಾ ಮಂದಿರ, ಉದ್ಯಾವರ ಮಾಡ ಶ್ರೀಅರಸು ಮಂಜಿಷ್ಣಾರು ದೈವ ಕ್ಷೇತ್ರ, ಶ್ರೀಮಹಾವಿಷ್ಣು ದೇವಸ್ಥಾನ ದೇವಂದಪಡ್ಪು, ಬಾಲಾಂಜನೇಯ ವ್ಯಾಯಾಮ ಶಾಲೆ ಕುಂಜತ್ತೂರುಪದವು, ಸತ್ಯನಾರಾಯಣ ಭಜನಾ ಮಂದಿರ ಉದ್ಯಾವರ ಗುತ್ತು, ಮುಡಿಮಾರು ಶ್ರೀಮಹಾಮಲರಾಯಿ ಸೇವಾ ಸಮಿತಿ, ಪೊಯ್ಯೆ ಶ್ರೀ ಚಾಮುಂಡೇಶ್ವರಿ ಸೇವಾ ಸಮಿತಿ ಸಹಿತ ಅನೇಕ ಸಂಘಸಂಸ್ಥೆಗಳ ಸಹಕಾರದೊಂದಿಗೆ ಹೊರೆಕಾಣಿಕೆ ಸಮರ್ಪಿಸಲ್ಪಟ್ಟಿತು.