ನವದೆಹಲಿ: ರೈಲ್ವೇ ಸೇವೆಗಳ ಶುಲ್ಕ ಹಾಗೂ ಸಬ್ಸಿಡಿ ರಹಿತ ಎಲ್'ಪಿಜಿ ಗ್ಯಾಸ್ ದರ ಏರಿಕೆ ಮಾಡಿರುವ ಕೇಂದ್ರ ಸರ್ಕಾರದ ವಿರುದ್ಧ ವಿರೋಧ ಪಕ್ಷಗಳು ತೀವ್ರ ಕಿಡಿಕಾರಿವೆ.
ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಕಾಂಗ್ರೆಸ್, ರೈಲ್ವೇ ಪ್ರಯಾಣ ದರ ಏರಿಕೆ ಮಾಡಿರುವ ಬಿಜೆಪಿ ಸರ್ಕಾರ ಜನರಿಗೆ ಹೊಸವರ್ಷಕ್ಕೆ ನೀಡಿರುವ ಉಡುಗೊರೆಯಾಗಿದೆ ಎಂದು ಹೇಳಿದೆ.
BJP's #NewYear gift to people is increase in train fares.
People are suffering to make ends meet with raising prices & loss of jobs
Now this is adding salt to injury & this also cuts down developmental prospects of Railways & is a step towards showing loses & privatizing them.
36 people are talking about this
ಮೋದಿ ಸರ್ಕಾರ ಹೊಸ ವರ್ಷವನ್ನು ಆರಂಭಿಸಿದೆ. ರೈಲ್ವೇ ಪ್ರಯಾಣ ದರ ಏರಿಕೆ ಮಾಡಿದ ಬಳಿಕ ಜನರ ಜೀವನೋಪಾಯದ ಮೇಲೆ ದಾಳಿ ಮಾಡಿದೆ. ನಿರುದ್ಯೋಗ, ಹಣದುಬ್ಬರ, ಗ್ರಾಮೀಣ ವೇತನದಲ್ಲಿ ಕುಸಿತ ಕಂಡ ಬಳಿಕ ಇಂತಹ ಬೆಳವಣಿಗೆಗಳು ಕಂಡು ಬಂದಿವೆ. ಇದು ಮೋದಿ ಸರ್ಕಾರ ಹೊಸವರ್ಷಕ್ಕೆ ಜನರಿಗೆ ನೀಡಿರುವ ಉಡುಗೊರೆ ಎಂದು ತಿಳಿಸಿದ್ದಾರೆ.