ನವದೆಹಲಿ: ವಿಮಾನದಲ್ಲಿ ಅಶಿಸ್ತನ್ನು ತೋರುವ ಪ್ರಯಾಣಿಕರನ್ನು ನಿಷೇಧಿಸುವಂತೆಯೇ ಇನ್ನು ಮುಂದೆ ಅಂತಹಾ ಪ್ರಯಾಣಿಕರ ರೈಲು ಪ್ರಯಾಣವನ್ನೂ ನಿಷೇಧಿಸಲು ಭಾರತೀಯ ರೈಲ್ವೆ ಚಿಂತನೆ ನಡೆಸಿದೆ. ವಿಮಾನಯಾನ ಸಂಸ್ಥೆಗಳಿಂದ ನಿಷೇಧಕ್ಕೊಳಗಾದ ಪ್ರಯಾಣಿಕರನ್ನು ಕೆಲ ತಿಂಗಳ ಕಾಲ ರೈಲು ಪ್ರಯಾಣದಿಂದಲೂ ನಿಷೇಧಿಸಲು ಚಿಂತನ್ಹೆ ನಡೆದಿದೆ ಎಂದು ಎಂದು ರೈಲ್ವೆ ಸಚಿವಾಲಯದ ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.
ಪ್ರಯಾಣಿಕರು ವಿಮಾನ ಹಾರಾಟದ ಸಮಯದಲ್ಲಿ ಅಶಿಸ್ತು ಪ್ರದರ್ಶಿಸಿ ಸಹ ಪ್ರಯಾಣಿಕ ಪ್ರಾಣದ ಜತೆ ಚೆಲ್ಲಾಟವಾಡಿದರೆ ವಿಮಾನಯಾನ ಸಂಸ್ಥೆ ಅಂತಹವರ ಪ್ರಯಾಣವನ್ನು ನಿಷೇಧಿಸುತ್ತದೆ. ಹಾಗೆಯೇ ರೈಲ್ವೆ ಕೂಡ ಅಂತಹ ಪ್ರಯಾಣಿಕರನ್ನು ಕೆಲವು ತಿಂಗಳುಗಳ ಕಾಲ ನಿಷೇಧಿಸಲು ಮುಂದಾಗಿದೆ ಎಂದು ಈ ಬೆಳವಣಿಗೆಗಳ ಕುರಿತು ಮಾಹಿತಿ ಇರುವ ಉನ್ನತ ಅಧಿಕಾರಿಯೊಬ್ಬರು ಹೇಳಿದ್ದಾರೆ.
ವಿಮಾನದಲ್ಲಿ ಪ್ರಯಾಣಿಸಲು ನಿಬರ್ಂಧಿಸಲಾಗಿರುವ ಪ್ರಯಾಣಿಕರ ಹೆಸರು ಭಾರತೀಯ ರೈಲ್ವೆಯ ಯಾವುದೇ ಪ್ರಯಾಣ ಪಟ್ಟಿಯಲ್ಲಿಯೂ ಇರುವುದಿಲ್ಲ.ರೈಲ್ವೆ ಇಲಾಖೆ ವಿಮಾನಯಾನ ಸಂಸ್ಥೆಗಳಿಂದ ಪಟ್ಟಿಯನ್ನು ತೆಗೆದುಕೊಂಡು ನಂತರ ಅದನ್ನು ತಮ್ಮ ಲ್ಲಿ ಸಹ ಅಳವಡಿಸಿಕೊಳ್ಳುತ್ತದೆ. ಇದರಿಂದಾಗಿ ನಿಷೇಧಿತಗೆ ಕೆಲವು ತಿಂಗಳು ಸಮಯದವರೆಗೆ ಟಿಕೆಟ್ ಕಾಯ್ದಿರಿಸಲು ಸಾಧ್ಯವಿಲ್ಲ. ಅಂತಹ ಪ್ರಯಾಣಿಕರನ್ನು ಆರು ತಿಂಗಳ ಕಾಲ ನಿಷೇಧಿಸಲು ರೈಲ್ವೆ ಯೋಜಿಸುತ್ತಿದೆ ಎಂದು ಅವರು ಹೇಳಿದರು.
ಮುಂಬೈಯಿಂದ ಲಖನೌಗೆ ತೆರಳುವಾಗ ಪತ್ರಕರ್ತನೊಬ್ಬನಿಗೆ ಕಿರುಕುಳ ನೀಡಿದ್ದ ಕಾರಣ ಸ್ಟ್ಯಾಂಡ್-ಅಪ್ ಕಾಮಿಡಿಯನ್ ಕುನಾಲ್ ಕಮ್ರಾ ಅವರನ್ನು ಆರು ತಿಂಗಳ ಕಾಲ ನಿಬರ್ಂಧಿಸಿ ಇಂಡಿಗೋ ಸಂಸ್ಥೆ ಆದೇಶಿಸಿದೆ. ಈ ಘಟನೆ ಬಳಿಕ ರೈಲ್ವೆ ಇಲಾಖೆ ಈ ವಿಚಾರವನ್ನು ವಿಮಾನಯಾನ ಸಂಸ್ಥೆಗಳಿಂದ ತೆಗೆದುಕೊಳ್ಳಲು ಮುಂದಾಗಿದ್ದಾಗಿ ರೈಲ್ವೆ ಸಚಿವಾಲಯದ ಅಧಿಕಾರಿ ತಿಳಿಸಿದ್ದಾರೆ.