ಬದಿಯಡ್ಕ: ನೀರ್ಚಾಲು ಬೇಳ ಸಮೀಪದ ಕುಮಾರಮಂಗಲ ನಿವಾಸಿ ಸುಂದರ ಮುಖಾರಿ ಎಂಬವರು ಅನಾರೋಗ್ಯಕ್ಕೊಳಗಾಗಿ ಹಾಸಿಗೆ ಹಿಡಿದಿದ್ದು, ಕುಟುಂಬ ಅತಂತ್ರವಾಗಿದೆ.
ಕೆಂಪು ಕಲ್ಲಿನ ಕ್ವಾರೆಯಲ್ಲಿ ಕಾರ್ಮಿಕರಾಗಿ ದುಡಿಯುತ್ತಿದ್ದ ಇವರು ಕಳೆದ ಒಂದೂವರೆ ವರ್ಷಗಳಿಂದ ಹೊಟ್ಟೆ ನೋವಿನ ಅನಾರೋಗ್ಯಕ್ಕೊಳಗಾಗಿ ಬಳಲುತ್ತಿದ್ದು, ಪರಿಸರದ ವೈದ್ಯರ ಚಿಕಿತ್ಸೆ ಪಡೆಯುತ್ತಿದ್ದರು. ಕೆಲವು ತಿಂಗಳ ಹಿಂದೆ ನೋವು ಉಲ್ಬಣಗೊಂಡು ವೈದ್ಯರ ಸಲಹೆಯ ಮೇರೆಗೆ ಮಂಗಳೂರು ಎ.ಜೆ ಆಸ್ಪತ್ರೆಗೆ ತೆರಳಿ ಉನ್ನತ ಪರೀಕ್ಷೆ ಮಾಡಿದಾಗ ಹೊಟ್ಟೆಯಲ್ಲಿ ಗಡ್ಡೆ ಇರುವುದಾಗಿಯೂ ಅದನ್ನು ಶಸ್ತ್ರಚಿಕಿತ್ಸೆ ಮೂಲಕ ತೆಗೆಯಬೇಕೆಂದೂ ತಿಳಿಸಿದರು.
ಚಿಕಿತ್ಸೆಗೆ ಅಂದಾಜು ರೂ 2,50,000(ಎರಡೂವರೆ ಲಕ್ಷ) ಖರ್ಚು ಅಗತ್ಯವಿದ್ದು, ಆದರೆ ಅಷ್ಟೆಲ್ಲ ಖರ್ಚುಗಳನ್ನು ಭರಿಸುವ ಸಾಮಾಥ್ರ್ಯವಿಲ್ಲದ ಇವರ ಕುಟುಂಬ ಇವರನ್ನು ಇದೀಗ ತಲಶ್ಚೇರಿಯ ಕ್ಯಾನ್ಸರ್ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಚಿಕಿತ್ಸಾ ವೆಚ್ಚಕ್ಕಾಗಿ ಉದಾರ ದಾನಿಗಳ ನೆರವಿಗಾಗಿ ನಿರೀಕ್ಷೆ ಬಡ ಕುಟುಂಬದ್ದು. ಈ ನಿಟ್ಟಿನಲ್ಲಿ ನೀರ್ಚಾಲು ನಿವೇದಿತಾ ಸೇವಾ ಮಿಶನ್ ಸಹಾಯಕ್ಕೆ ಮುಂದೆ ಬಂದಿದ್ದು ದಾನಿಗಳ ಸಹಾಯ ನಿರೀಕ್ಷಿಸಲಾಗಿದೆ. ಉದಾರ ಮನಸ್ಸಿಸ ದಾನಿಗಳು ಈ ಕುಟುಂಬಕ್ಕೆ ನೆರವು ನೀಡಲು ನಿವೇದಿತಾ ಸೇವಾ ಮಿಶನ್, ನೀರ್ಚಾಲು ವಿನಂತಿಸಿದೆ..
ಬ್ಯಾಂಕ್ ಖಾತೆ ಸಂಖ್ಯೆ: ಸುಜಾತ ಎನ್. ಖಾತೆ ಸಂಖ್ಯೆ : 5322500100736801, ಐಎಫ್‍ಎಸ್‍ಸಿ ಸಂಖ್ಯೆ ಕೆಎಆರ್‍ಬಿ0000532, ಕರ್ನಾಟಕ ಬ್ಯಾಂಕ್ ನೀರ್ಚಾಲು ಶಾಖೆಗೆ ಸಂದಾಯವಾಗುವಂತೆ ಕಳಿಸಲು ವಿನಂತಿಸಲಾಗಿದೆ.