ಬದಿಯಡ್ಕ: ನೀರ್ಚಾಲು ಪರಮೇಶ್ವರ ಆಚಾರ್ಯರ 17ನೇ ವರ್ಷದ ಸಂಸ್ಮರಣಾ ಸಮಾರಂಭದ ಅಂಗವಾಗಿ ಯಕ್ಷಭಾರತಿ ನೀರ್ಚಾಲು ಮತ್ತು ಅತಿಥಿ ಕಲಾವಿದರ ಕೂಡುವಿಕೆಯಿಂದ ನೀರ್ಚಾಲು ಶ್ರೀ ಕುಮಾರಸ್ವಾಮಿ ಭಜನಾ ಮಂದಿರದಲ್ಲಿ ಯಕ್ಷಗಾನ ತಾಳಮದ್ದಳೆ ಗದಾಯುದ್ದ ಜರಗಿತು.
ಹಿಮ್ಮೇಳದಲ್ಲಿ ಭಾಗವತರಾಗಿ ವೆಂಕಟ್ರಾಜ ಕೆ.ಎಂ, ತಲ್ಪಣಾಜೆ ಶಿವಶಂಕರ ಭಟ್, ಸುರೇಶ ಆಚಾರ್ಯ ನೀರ್ಚಾಲು, ಚೆಂಡೆ -ಮದ್ದಳೆಯಲ್ಲಿ ರೀತೇಶ್ ಅಡ್ಕ, ಸುದರ್ಶನ ಕಲ್ಲೂರಾಯ ಮಧೂರು ಸಹಕರಿಸಿದರು.
ಪಾತ್ರವರ್ಗದಲ್ಲಿ ಪಕಳಕುಂಜ ಶ್ಯಾಂ ಭಟ್, ಶಿವರಾಮ ಭಂಡಾರಿ, ಮಾಧವ ಕುಂಟಾರು, ಪ್ರದೀಪ್ ಕೂಡ್ಲು,ಬಾಲಕೃಷ್ಣ ಆಚಾರ್ಯ ನೀರ್ಚಾಲು, ಡಾ.ಬೇ.ಸೀ.ಗೋಪಾಲಕೃಷ್ಣ, ವಿಷ್ಣು ಪ್ರಕಾಶ್ ಪೆರ್ವ, ಸದಾಶಿವ ಮುಳಿಯಡ್ಕ, ಪವನ್ ಕುಮಾರ್ ನೀರ್ಚಾಲು ಸಹಕರಿಸಿದರು.