ಮಂಜೇಶ್ವರ: ಭವಿಷ್ಯದ ದಿಕ್ಕನ್ನು ಅಚಲಗೊಳಿಸುವ, ಭದ್ರ ಬುನಾದಿ ಹಾಕಿ ಕೊಡುವ ಸೃಜನಾತ್ಮಕ ಕಾಯಾ9ಗಾರದ ಬಾಲೋತ್ಸವ ಮಕ್ಕಳಲ್ಲಿ ಒಳ್ಳೆಯ ಚಿಂತನೆಗಳನ್ನು ಬೆಳೆಸುತ್ತದೆ. ಆಧುನಿಕ ಸಮಾಜ ವ್ಯವಸ್ಥೆ ಒಪ್ಪಿರುವ ಮಕ್ಕಳ ಹಕ್ಕುಗಳ ಸಂರಕ್ಷಣೆ ಇಂದು ಚಾಲ್ತಿಯಲ್ಲಿದೆ. ಇಂತಹ ಬೆಳವಣಿಗೆಯ ಹಿಂದೆ ವಿದ್ಯಾಭ್ಯಾಸ ಕ್ಷೇತ್ರದ ತ್ವರಿತಗತಿಯ ಬೆಳವಣಿಗೆ ಪ್ರಧಾನ ಕಾರಣವಾಗಿದೆ ಎಂದು ವರ್ಕಾಡಿ ಹೋಲಿ ಕ್ರಾಸ್ ಚರ್ಚ್‍ನ ಪ್ರಧಾನ ಧರ್ಮಗುರು ವರ್ಗೀಸ್ ಅಭಿಪ್ರಾಯ ವ್ಯಕ್ತಪಡಿಸಿದರು.
ಗೇರುಕಟ್ಟೆ ಸಮುದಾಯ ಭವನದಲ್ಲಿ ಇತ್ತೀಚೆಗೆ ನಡೆದ ಮಂಜೇಶ್ವರ ಗ್ರಾಮ ಪಂಚಾಯತಿ ಮಟ್ಟದ ಸಿಡಿಯಸ್ ಕುಟುಂಬಶ್ರೀ ಆಯೋಜಿಸಿದ ಪರಿಶಿಷ್ಟ ವಗ9ದ ವಿಕಸನ ಯೋಜನೆಯಲ್ಲಿ 'ಪರಿಶಿಷ್ಟ ವಗ9ದ ಮಕ್ಕಳ ದ್ವಿದಿನ ಬಾಲೋತ್ಸವ 'ವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ.ವರ್ಗದ ನಿರ್ವಾಹಕಿ ಸುನೀತಾ, ಶಮೀನ, ಸಿಡಿಯಸ್ ಸದಸ್ಯೆ ವಿನಯ, ಹಾಗೂ ಕುಟುಂಬಶ್ರೀ ಸದಸ್ಯರಾದ ಲವೀನ, ಆಶಾ, ಸೆಲೀನ, ಪ್ರೇಸಿಲ್ಲ, ಲವೀನ ಮುಂತಾದವರು ಉಪಸ್ಥಿತರಿದ್ದರು. ಶಿಬಿರದ ಸಂಪನ್ಮೂಲ ವ್ಯಕ್ತಿಗಳಾದ ರಂಗ ನಿದೇ9ಶಕ ಉದಯ ಸಾರಂಗ, ರಂಗಕರ್ಮಿ ಅಶೋಕ ಮಾಸ್ತರ್ ಕೊಡ್ಲಮೊಗರು ಎರಡು ದಿನಗಳ ತರಬೇತಿಯನ್ನು ಯಶಸ್ವಿಯಾಗಿ ನೀಡಿ ಮಕ್ಕಳನ್ನು ರಂಜಿಸಿದರು.
ತರಬೇತಿಯಲ್ಲಿ ಮನೋವೈಜ್ಞಾನಿಕ ಆಟಗಳು, ನಿತ್ಯ ಜೀವನದ ವೈಜ್ಞಾನಿಕತೆ, ಗಣಿತದ ವಿಸ್ಮಯದ ಆಟಗಳು, ರಂಗಭೂಮಿ ಆಟಗಳು, ಜನಪದ ಹಾಡುಗಳು, ನೃತ್ಯ ಮೊದಲಾದ ಸೃಜನಾತ್ಮಕ ಚಿಂತನೆಯೊಂದಿಗೆ ಪ್ರತಿಭಾನ್ವಿತರಾಗುವ ಗುರಿಯೊಂದಿಗೆ ತರಬೇತಿ ನಡೆಯಿತು. ಶಿಬಿರದಲ್ಲಿ ನೂರಕ್ಕಿಂತಲೂ ಮಿಕ್ಕಿದ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.